ಬೆಳಗಾವಿಯಲ್ಲಿ ಹೈ-ಟೆಕ್ ಕಳ್ಳರ ಕರಾಮತ್ತು: ರಿಮೋಟ್ ‌ಕೀ ಹ್ಯಾಕ್ ಮಾಡಿ ಕಾರು ಕಳವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಿಮೋಟ್ ‌ಕೀ ಹ್ಯಾಕ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಮಾಳಮಾರುತಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿಸಿಟಿವಿ ದೃಶ್ಯ
ಸಿಸಿಟಿವಿ ದೃಶ್ಯ

ಬೆಳಗಾವಿ:  ರಿಮೋಟ್ ‌ಕೀ ಹ್ಯಾಕ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಮಾಳಮಾರುತಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಶೋಕ ನಗರದ ನಿವಾಸಿ ಡಾ. ಮೃತ್ಯುಂಜಯ ಬೆಲ್ಲದ ಹಾಗೂ ರಾಮತೀರ್ಥ ನಗರದ‌ ನಿವಾಸಿ ಹಾಗೂ ಉದ್ಯಮಿ ಅನಿಲ್ ಪಾಟೀಲ್ ಎಂಬುವವರಿಗೆ ಸೇರಿದ ಕಾರುಗಳನ್ನು ಕಳ್ಳತನ ಮಾಡಲಾಗಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಅಪರಾಧ ವಿಭಾಗದ ಡಿಸಿಪಿ ಚಂದ್ರಶೇಖರ ‌ನೀಲಗಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರು ಕಳವು ಮಾಡಿದ ತಕ್ಷಣವೇ ದುಷ್ಕರ್ಮಿಗಳು ಸಿಮ್ ಕಾರ್ಡ್‌ಬದಲಾಯಿಸುತ್ತಾರೆ. ಹೀಗಾಗಿ ಹೈಟೆಕ್ ಕಳ್ಳರ ಸುಳಿವು ಬೆಳಗಾವಿ ಮಹಾನಗರ ‌ಪೊಲೀಸರಿಗೆ ಲಭ್ಯವಾಗುತ್ತಿಲ್ಲ. ಹುಬ್ಬಳ್ಳಿಯಲ್ಲೂ ಹೈಟೆಕ್ ಟೆಕ್ನಿಕ್ ಬಳಸಿ ಈ ತಂಡ ಕೃತ್ಯ ಎಸಗಿರುವ ಬಗ್ಗೆ ತನಿಖೆಯಿಂದ ಬೆಳಕಿಗೆ ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ‌ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com