ಮುಂದಿನ‌ ವರ್ಷದ ಬಿಟಿಎಸ್ ನ.18 ರಿಂದ 20: ಹೈಬ್ರೀಡ್ ಮಾದರಿ

ಮುಂದಿನ ವರ್ಷದ ಬೆಂಗಳೂರು ಟೆಕ್ ಸಮಿಟ್ ನವೆಂಬರ್ 18-, 19 ಮತ್ತು 20 ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 
ಸಿ.ಎನ್.ಅಶ್ವತ್ಥ್ ನಾರಾಯಣ್
ಸಿ.ಎನ್.ಅಶ್ವತ್ಥ್ ನಾರಾಯಣ್

ಬೆಂಗಳೂರು: ಮುಂದಿನ ವರ್ಷದ ಬೆಂಗಳೂರು ಟೆಕ್ ಸಮಿಟ್ ನವೆಂಬರ್ 18-, 19 ಮತ್ತು 20 ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಮೂರು ದಿನಗಳ ಜಾಗತಿಕ ಮಟ್ಟದ ಬೆಂಗಳೂರು ಟೆಕ್‌ ಸಮಿಟ್-2020 ಅತ್ಯಂತ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್‌ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗ ವು 2.5 ಕೋಟಿಗೂ ಹೆಚ್ಚು ದೇಶ- ವಿದೇಶಿಯರನ್ನು ತಲುಪಿದೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ನಡೆದ ಈ ಶೃಂಗವು ಎಲ್ಲರ ಊಹೆಮೀರಿ ಮಿಂಚಿತು. ಈವರೆಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಮೂಲಕ ಕರ್ನಾಟಕವನ್ನು ಗುರುತಿಸುತ್ತಿದ್ದ ಜಗತ್ತಿನ ಪ್ರಮುಖ ದೇಶಗಳು, ಈಗ ತಂತ್ರಜ್ಞಾನದ ಮೂಲಕವೂ ರಾಜ್ಯವನ್ನು ಅಚ್ಚರಿಯಿಂದ ನೋಡುತ್ತಿವೆ ಎಂದು ಐಟಿ ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. 

ಮುಂದಿನ ವರ್ಷದ ಬೆಂಗಳೂರು ಟೆಕ್ ಸಮಿಟ್ ದಿನಾಂಕವನ್ನು ಘೋಷಣೆ ಮಾಡಿರುವ ಅಶ್ವತ್ಥ್ ನಾರಾಯಣ್ ಅವರು, 2021ರ ನವೆಂಬರ್ 18, 19 ಹಾಗೂ 20 ರಂದು ಬೆಂಗಳೂರು ತಂತ್ರಜ್ಞಾನ ಶೃಂಗ ನಡೆಯಲಿದೆ. ಅದು 2019ರ ಆಫ್'ಲೈನ್ ಹಾಗೂ 2020ರ ಆನ್'ಲೈನ್ ಕಾಂಬಿನೇಷನ್ ಸೇರಿ ಹೈಬ್ರಿಡ್ ಪ್ರಸಕ್ತ ಶೃಂಗದ ದಾಖಲೆಗಳನ್ನು ಮೀರುವಂತೆ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com