ಐಟಿ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪುನರುಚ್ಚರಿಸಿದ ಬೆಂಗಳೂರು: ಡಿಸಿಎಂ ಅಶ್ವತ್ಥ್ ನಾರಾಯಣ್

ಬೆಂಗಳೂರು ತಂತ್ರಜ್ಞಾನ ಶೃಂಗ-2020 ಯಶಸ್ವಿಯಾಗಿ ಮುಗಿದಿದ್ದು, ಕೊರೋನಾ ನಡುವೆಯೂ ಈವರೆಗೆ ಜಗತ್ತಿನಲ್ಲಿ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗವಾಗಿ ಖ್ಯಾತಿಗಳಿಸಿದೆ. ಶೃಂಗಸಭೆಯಲ್ಲಿ ಐಟಿ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಬೆಂಗಳೂರು ಪುನರುಚ್ಛರಿಸಿದೆ. 
ಡಿಸಿಎಂ ಅಶ್ವತ್ಥ್ ನಾರಾಯಣ್
ಡಿಸಿಎಂ ಅಶ್ವತ್ಥ್ ನಾರಾಯಣ್

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗ-2020 ಯಶಸ್ವಿಯಾಗಿ ಮುಗಿದಿದ್ದು, ಕೊರೋನಾ ನಡುವೆಯೂ ಈವರೆಗೆ ಜಗತ್ತಿನಲ್ಲಿ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗವಾಗಿ ಖ್ಯಾತಿಗಳಿಸಿದೆ. ಶೃಂಗಸಭೆಯಲ್ಲಿ ಐಟಿ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಬೆಂಗಳೂರು ಪುನರುಚ್ಛರಿಸಿದೆ. 

ಬೆಂಗಳೂರು ವಿಶ್ವದ ಉನ್ನತ ಐಟಿ ನಗರಗಳೊಂದಿಗೆ ಸ್ಪರ್ಧಿಸುತ್ತಿದೆ, ಬೆಂಗಳೂರಿನಲ್ಲಿ ನಡೆದ ತಂತ್ರಜ್ಞಾನ ಶೃಂಗಸಭೆಯು ನಾವೀನ್ಯಕಾರರು, ತಂತ್ರಜ್ಞರು, ಆರ್ & ಡಿ ವಲಯದಲ್ಲಿ ಕೆಲಸ ಮಾಡುವವರು, ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್ ಅಪ್ ಗಳು ಮತ್ತು ಇತರರ ನಡುವೆ ಸಂಪರ್ಕಗಳನ್ನು ಸುಗಮಗೊಳಿಸಲು ಮತ್ತು ಜ್ಞಾನ ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಸಹಾಯ ಮಾಡಿದೆ ಎಂದು ಐಟಿ ಬಿಟಿ ಸಚಿವರೂ ಆಗಿರುವ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಎಲ್ಲಾ ಆಯಾಮಗಳು ಹಾಗೂ ಎಲ್ಲಾ ಅಂಶಗಳ ಮೇಲೆ ನಾವು ಕೇಂದ್ರೀಕರಿಸಿ ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿಯೂ ಇಂತಹ ಅತ್ಯುತ್ತಮ ಕಾರ್ಯಗಳನ್ನು ಮಾಡಬಹುದೆಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ನಮ್ಮ ಈ ಪರಿಶ್ರಮಕ್ಕೆ ಇದೀಗ ಇಡೀ ವಿಶ್ವವೇ ಅಚ್ಚರಿ ವ್ಯಕ್ತಪಡಿಸಿದೆ. ಇದೀಗ ನಾವು ಯಾವುದೇ ಕೆಲಸವನ್ನು ಮಾಡಿದರೂ ಅತ್ಯಂತ ಗಂಭೀರವಾಗಿರುತ್ತೇವೆಂದು ಸಾಕಷ್ಟು ರಾಷ್ಟ್ರಗಳು ಹಾಗೂ ಕಂಪನಿಗಳು ತಿಳಿದುಕೊಂಡಿವೆ ಎಂದು ತಿಳಿಸಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಶೃಂಗಸಭೆಯನ್ನು ಉದ್ಘಾಟಿಸಿದ್ದರು ಮತ್ತು ಕಳೆದ ಮೂರು ದಿನಗಳಲ್ಲಿ ಎಂಟು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಜೈವಿಕ ಆರ್ಥಿಕತೆ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಅಗ್ರ ಸ್ಥಾನವನ್ನು ಗಳಿಸುವ ಗುರಿಯನ್ನು ರಾಜ್ಯ ಹೊಂದಿದೆ. "ನಮ್ಮ ಈ ಪರಿಶ್ರಮದಲ್ಲಿ ವಿವಿಧ ಇಲಾಖೆಗಳ ಪರಿಶ್ರಮವೂ ಇದೆ. ತಂತ್ರಜ್ಞಾನವನ್ನು ಸಕ್ರಿಯಗೊಳಿಸುವುದು ಇವುಗಳು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com