ಕೋವಿಡ್ ಎಫೆಕ್ಟ್: ಈ ಬಾರಿ ಆನ್'ಲೈನ್'ನಲ್ಲಿ ನಡೆಯಲಿದೆ ಚಿತ್ರ ಸಂತೆ

ಕಲಾಪ್ರೇಮಿಗಳ ಬಹುನಿರೀಕ್ಷಿಯ ಬಣ್ಣಗಳ ಚಿತ್ತಾರದ ಕಲರವ ಮೂಡಿಸುವ ಚಿತ್ರಸಂತೆಗೆ ವರ್ಚುವಲ್ ಎಫೆಕ್ಟ್ ನೀಡಲಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಲಾಪ್ರೇಮಿಗಳ ಬಹುನಿರೀಕ್ಷಿಯ ಬಣ್ಣಗಳ ಚಿತ್ತಾರದ ಕಲರವ ಮೂಡಿಸುವ ಚಿತ್ರಸಂತೆಗೆ ವರ್ಚುವಲ್ ಎಫೆಕ್ಟ್ ನೀಡಲಾಗುತ್ತಿದೆ. 

ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಚಿತ್ರಸಂತೆ ಆನ್'ಲೈನ್ ನಲ್ಲಿ ನಡೆಯಲಿದ್ದು, ದಾಖಲೆ ನಿರ್ಮಿಸಲಿದೆ. ಜ.3ರಿಂದ ಆರಂಬವಾಗುವ 18ನೇ ಚಿತ್ರಸಂತೆಯನ್ನು ಕೊರೋನಾ ಯೋಧರಿಗೆ ಅರ್ಪಿಸಲಾಗುತ್ತಿದೆ. 

ಪ್ರತೀ ವರ್ಷ ಜನವರಿಯ ಮೊದಲ ವಾರದಂದು ಚಿತ್ರಸಂತೆ ನಡೆಯುತ್ತಿದೆ. ಆದರೆ, 2021ರ ಜ.3ರಿಂದ ಒಂದು ತಿಂಗಳು ಚಿತ್ರಸಂತೆ ಏರ್ಪಡಿಸಲಾಗಿದೆ. ಕಳೆದ ವರ್ಷ ಚಿತ್ರಸಂತೆಯನ್ನು ನೇಗಿಲ ಯೋಗಿ ಎಂಬ ಶೀರ್ಷಿಕೆಯಡಿ ರೈತರಿಗೆ ಸಮರ್ಪಿಸಲಾಗಿತ್ತು. ಚಿತ್ರಸಂತೆಗೆ ಲಕ್ಷಾಂತರ ಜನರು ಆಗಮಿಸಿ ಕಲಾಚಾತ್ರೆಗೆ ಸಾಕ್ಷಿಯಾಗುತ್ತಾರೆ. ಆದರೆ, ಈ ವರ್ಷ ಕೊರೋನಾ ವೈರಸ್ ಇರುವುದರಿಂದ ಕಲಾವಿದರು ಮತ್ತು ಕಲಾಸಕ್ತರ ಸುರಕ್ಷತೆ ದೃಷ್ಟಿಯಿಂದ ಆನ್'ಲೈನ್ ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 

ಇದೇ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು 60 ವರ್ಷವನ್ನು ಪೂರೈಸುತ್ತಿದೆ. ಹೀಗಾಗಿ ಈ ವರ್ಷದ ಚಿತ್ರಸಂತೆಗೆ ಪರಿಷತ್ತಿನ ವಜ್ರಮಹೋತ್ಸವದ ಚಿತ್ರಸಂತೆಗೆ ಪರಿಷತ್ತಿನ ವಜ್ರಮಹೋತ್ಸವದ ಸಂಭ್ರಮವೂ ಜೊತೆಯಾಗಿದೆ. ಕೋವಿಡ್ ಇದ್ದರೂ ಚಿತ್ರಸಂತೆ ನಿಲ್ಲಿಸಬಾರದು ಎಂಬ ಕಾರಣದಿಂದ ವರ್ಚುವಲ್'ನಲ್ಲಿ ನಡೆಸಲಾಗುತ್ತಿದೆ. ಚಿತ್ರ ಜಾತ್ರೆಯನ್ನು ಆನ್'ಲೈನ್ ನಲ್ಲಿ ರೂಪಿಸುತ್ತಿರುವುದು ನಮಗೂ ಸವಾಲಾಗಿದೆ. 

ತಜ್ಞರೊಂದಿಗೆ ಚರ್ಚಿಸಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ರೀತಿಯ ದೊಡ್ಡ ಮಟ್ಟದಲ್ಲಿ ಚಿತ್ರಸಂತೆ ಆನ್'ಲೈನ್'ನಲ್ಲಿ ನಡೆದಿಲ್ಲ. ಇದೊಂದು ದಾಖಲೆಯಾಗಲಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com