'ಮೂರನೇ ಹೆಣ್ಣು ಮಗು' ಬೇಡವೆಂದು ಕುಟುಂಬದ ಒತ್ತಡ, ಬಲವಂತದ ಗರ್ಭಪಾತಕ್ಕೆ ಮಹಿಳೆ ಬಲಿ!

"ಮೂರನೇ ಹೆಣ್ಣುಮಗು"ವನ್ನು ಬಯಸದ "ಗಂಡು ಮಗುವಿಗಾಗಿ" ಕಾಯುತ್ತಿದ್ದ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಲವಂತದ ಗರ್ಭಪಾತಕ್ಕೆ ಒಳಗಾದ  28 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದಿದೆ.
'ಮೂರನೇ ಹೆಣ್ಣು ಮಗು' ಬೇಡವೆಂದು ಕುಟುಂಬದ ಒತ್ತಡ, ಬಲವಂತದ ಗರ್ಭಪಾತಕ್ಕೆ ಮಹಿಳೆ ಬಲಿ!

ಚಿಕ್ಕಬಳ್ಳಾಪುರ: "ಮೂರನೇ ಹೆಣ್ಣುಮಗು"ವನ್ನು ಬಯಸದ "ಗಂಡು ಮಗುವಿಗಾಗಿ" ಕಾಯುತ್ತಿದ್ದ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಲವಂತದ ಗರ್ಭಪಾತಕ್ಕೆ ಒಳಗಾದ  28 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದಿದೆ.

ಬಾಗೆಪಲ್ಲಿಯ ಪೊಲವರಪಲ್ಲಿಗ್ರಾಮದ ನಿವಾಸಿ ಶ್ರೀಕನ್ಯಾ 2014 ರಲ್ಲಿ ಕೊತಪಲ್ಲಿಗ್ರಾಮದ ನಿವಾಸಿ 38 ವರ್ಷದ ಸೋಮಶೇಖರ್ ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರುಗಳಿಗೆ ಕ್ರಮವಾಗಿ 6 ಮತ್ತು 4 ವರ್ಷ ವಯಸ್ಸು. ಈಗ ಮತ್ತೆ ಗರ್ಭಿಣಿಯಾಗಿದ್ದ ಶ್ರೀಕನ್ಯಾರಿಂದ ಆಕೆಯ ಕುಟುಂಬ ಗಂಡು ಮಗುವನ್ನು ಬಯಸಿತ್ತು.

"ಪ್ರಾಥಮಿಕ ತನಿಖೆಯ ಪ್ರಕಾರ, ಸೋಮಶೇಕರ್ ಅವರ ಕುಟುಂಬ ಸದಸ್ಯರು ಗಂಡು ಮಗುವಿಗಾಗಿ ಹಠ ಹಿಡಿದ್ದಾರೆ. ಹಾಗಾಗಿ ಅವರು ಗರ್ಭಿಣಿಯಾಗಿದ್ದ ಶ್ರೀಕನ್ಯಾ ಅವರನ್ನು ಆಂಧ್ರಪ್ರದೇಶದ ಅನಂತಪುರದಖಾಸಗಿ ವೈದ್ಯರ ಬಳಿ ಕರೆದೊಯ್ದು ಅಕ್ರಮವಾಗಿ ಮಗುವಿನ ಲಿಂಗಪತ್ತೆ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಆ ವೇಳೆ ಶ್ರೀಕನ್ಯಾ ಗರ್ಭದಲ್ಲಿ ಹೆಣ್ಣುಮಗುವಿರುವುದು ಗೊತ್ತಾಗಿದೆ. ಇದನ್ನು ಕೇಳಿದ ಪತಿ, ಶ್ರೀಕನ್ಯಾ ಅವರ ತಾಯಿ ಹಾಗೂ ಸಹೋದರರು ಹುಟ್ಟಲಿರುವ ಮಗುವನ್ನು ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿ ತೆಗೆಸಲು ನಿರ್ಧರಿಸಿದರು ಮತ್ತುಅದಕ್ಕಾಗಿ ಜಯಣ್ಣ ಎನ್ನುವವರನ್ನು ಸಂಪರ್ಕಿಸಿದ್ದಾರೆ.ಜಯಣ್ಣ ಶ್ರೀಕನ್ಯಾ ಇಚ್ಚೆಗೆ ವಿರುದ್ಧವಾಗಿ ಗರ್ಭಪಾತಕ್ಕೆ ವ್ಯವಸ್ಥೆ ಮಾಡಿದರು." ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಜಿಕೆ ಮಿಥುನ್ ಕುಮಾರ್ ಹೇಳಿದ್ದಾರೆ.

ಹಾಗೆ ಬಲವಂತವಾಗಿ ನಡೆದ ಗರ್ಭಪಾತದ ನಂತರ ಶ್ರೀಕನ್ಯಾ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ನಂತರ ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದ ಕಾರಣ ನಿಧನರಾದರು.

ಘಟನೆಯ ನಂತರ, ಶ್ರೀಕನ್ಯಾ ಅವರ ತಂದೆ ಶ್ರೀನಿವಾಸ್ ಅವರು ಬಾಗೇಪಲ್ಲಿ ಪೋಲೀಸರಿಗೆ ದೂರು ನೀಡಿದ್ದಾರೆ. ತನಿಖೆಯಲ್ಲಿ ಸಂತ್ರಸ್ಥೆಯ ಸ್ವಂತ ತಾಯಿ ಮತ್ತು ಸಹೋದರ ಗಂಡು ಮಗುವನ್ನು ಬಯಸಿದ್ದರು ಮತ್ತು ಗರ್ಭಪಾತ ಮಾಡಿಸುವುದಕ್ಕೆ "ಒಪ್ಪಿದ್ದರು" ಎಂದು ತಿಳಿದುಬಂದಿದೆ. 

 'ವಿವರವಾದ ತನಿಖೆಗೆ ನಿರ್ಧರಿಸಲಾಗಿದೆ. ಅಲ್ಲದೆ ಈ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಲಾಗುವುದು' ಸೆಂಟ್ರಲ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸೆಮಂತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.  "ಯಾರೊಬ್ಬರ ಒಳಗೊಳ್ಳುವಿಕೆ ಸಾಬೀತಾಗಿಲ್ಲ.  ಆದರೆ ಈವರೆಗೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com