ಕೋವಾಕ್ಸಿನ್: ಮೂರನೇ ಹಂತದ ಪ್ರಯೋಗದಲ್ಲಿ ಭರವಸೆಯ ಫಲಿತಾಂಶ 

 ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ  ಹೈದರಾಬಾದಿನ ಭರತ್ ಬಯೋಟೆಕ್  ಸಿದ್ಧಪಡಿಸಿರುವ ಕೋವಾಕ್ಸಿನ್ ನ ಮೂರನೇ ಹಂತದ ಪ್ರಯೋಗದಲ್ಲಿ ಭರವಸೆಯ ಫಲಿತಾಂಶಗಳು ಕಂಡುಬಂದಿದೆ.
ಲಸಿಕೆ ಸಾಗಿಸುವ ವಾಹನ
ಲಸಿಕೆ ಸಾಗಿಸುವ ವಾಹನ

ಮೈಸೂರು: ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ  ಹೈದರಾಬಾದಿನ ಭರತ್ ಬಯೋಟೆಕ್  ಸಿದ್ಧಪಡಿಸಿರುವ ಕೋವಾಕ್ಸಿನ್ ನ ಮೂರನೇ ಹಂತದ ಪ್ರಯೋಗದಲ್ಲಿ ಭರವಸೆಯ ಫಲಿತಾಂಶಗಳು ಕಂಡುಬಂದಿದೆ.

ವಿದೇಶಿ ಕಂಪನಿಗಳು ಸಿದ್ಧಪಡಿಸುತ್ತಿರುವ ಕೋವಿಡ್-19 ಲಸಿಕೆಗಳ ಸಂಗ್ರಹಕ್ಕೆ ಕನಿಷ್ಠ ಉಷ್ಣಾಂಶದ ಅಗತ್ಯವಿದ್ದು, ಅವುಗಳು ದೇಶದಲ್ಲಿ ಯೋಗ್ಯ ಬಳಕೆ ಸೂಕ್ತವಲ್ಲ ಎನ್ನುವ ವರದಿಗಳ ಮಧ್ಯೆಯೇ ಕೋವಾಕ್ಸಿನ್ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆಗಳಲ್ಲಿ ಕೋವಾಕ್ಸಿನ್ ಹೆಚ್ಚಿನ ಭರವಸೆ ಮೂಡಿಸಿದೆ. ಇತ್ತೀಚಿನ 26 ಸಾವಿರ ಸ್ವಯಂ ಸೇವಕರ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲಾಗಿದ್ದು, ಇದು ದೇಶದ ಮೊದಲ ಪರಿಣಾಮಕಾರಿ ಲಸಿಕೆ ಎನ್ನಿಸಿಕೊಂಡಿದೆ.

ಇದೀಗ ವೈರಸ್ ಗೆ ತುತ್ತಾದ ಮಂಕಿಗಳು ಮತ್ತು ಹ್ಯಾಮ್ ಸ್ಟಾರ್ ಗಳ ಮೇಲಿನ ಅಧ್ಯಯನ ಸವಾಲಿನಿಂದ ಕೂಡಿದೆ.  ಪ್ರಯೋಗದ ಅವಧಿಯಲ್ಲಿ ಈ ಪ್ರಾಣಿಗಳ ಉಸಿರಾಟದ ಪ್ರದೇಶಗಳಲ್ಲಿ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಲಸಿಕೆಯನ್ನು ನೀಡಲಾಗುವುದು ಎಂದು ಭಾರತ್ ಬಯೋಟೆಕ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಾ ಎಲಾ ತಿಳಿಸಿದ್ದಾರೆ.

ಜೆಎಸ್ ಎಸ್ ಸಂಶೋಧನಾ ಸಂಸ್ಥೆಯಲ್ಲಿ ಶನಿವಾರದ ನಡೆದ ಕೋವಿಡ್-19 ಲಸಿಕೆ ಕುರಿತ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಡಾ. ಎಲಾ,  ಭಾರತ ಒಂದು ದೇಶಕ್ಕೆ 2.6 ಬಿಲಿಯನ್ ಸಿರೆಂಜ್ ಗಳು ಮತ್ತು ಸೂಜಿಗಳು ಅಗತ್ಯವಾಗಿದ್ದು, ಸಿರೆಂಜ್ ಗಳ ಖರೀದಿ ಸವಾಲಿನಿಂದ ಕೂಡಿದೆ ಎಂದರು.

ಆದಾಗ್ಯೂ, ಈಗ ವಾಷಿಂಗ್ಟನ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಹೊಂದಿದ್ದು, ಮೂಗಿನ ಮೂಲಕ ಲಸಿಕೆ ಬಳಸುವ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ ಎಂದು ತಿಳಿಸಿದರು. 

ಜನವರಿ ನಂತರ ಪ್ರತಿ ತಿಂಗಳು 50ರಿಂದ 60 ಮಿಲಿಯನ್ ಡೋಸ್ ನಷ್ಟು  ಕೋವಿಶಿಲ್ಡ್ ಲಸಿಕೆಯನ್ನು ಖರೀದಿಸಲು ಸಿದ್ಧರಿದ್ದೇವೆ. ಅದಕ್ಕೂ ಮುಂಚಿತವಾಗಿ ತುರ್ತು ಅನುಮತಿಯಲ್ಲಿ 80ರಿಂದ 100 ಮಿಲಿಯನ್ ಡೋಸ್ ನಷ್ಟು ಲಸಿಕೆಯನ್ನು ಖರೀದಿಸುವುದಾಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸೆರಮ್ ಇನ್ಸಿಟ್ಯೂಟ್ ನ ಡಾ. ಸುರೇಶ್ ಜಾದವ್ ಹೇಳಿದರು.

ಲಸಿಕೆ ಸಂಗ್ರಹಿಸಲು  ತಯಾರಿಕೆ ಕಂಪನಿಗಳೊಂದಿಗೆ  ಅಭಿವೃದ್ಧಿಶೀಲ ರಾಷ್ಟ್ರಗಳ ಸರ್ಕಾರಗಳು ಹಿಂಜರಿಯುತ್ತಿರುವುದನ್ನು ಉಲ್ಲೇಖಿಸಿದ ಡಾ. ಜಾದವ್,  ದ್ವಿತೀಯ ಪೂರೈಕೆದಾರರೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com