ವನ್ಯ ಜೀವಿ ಸಂಪತ್ತಿನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ಬಿ.ಎಸ್.ಯಡಿಯೂರಪ್ಪ

ವನ್ಯ ಜೀವಿ ಸಂಪತ್ತಿನಲ್ಲಿ ಕರ್ನಾಟಕ ರಾಜ್ಯ ಅಗ್ರ ಸ್ಥಾನದಲ್ಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ
ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ವನ್ಯ ಜೀವಿ ಸಂಪತ್ತಿನಲ್ಲಿ ಕರ್ನಾಟಕ ರಾಜ್ಯ ಅಗ್ರ ಸ್ಥಾನದಲ್ಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಜೈವಿಕ ಸಂಪತ್ತನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಲ್ಲ ಒತ್ತಡಗಳನ್ನು ಮೀರಿ ಅರಣ್ಯ ಸಂಪತ್ತು ರಕ್ಷಣೆ ಮಾಡುವಲ್ಲಿ ಅರಣ್ಯ ಸಿಬ್ಬಂದಿಗಳ ಕೆಲಸ ಮೆಚ್ಚುವಂತಹದ್ದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಅಧಿಕಾರಿಗಳಿಗೆ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು. ಜಗತ್ತು ಒಂದಕ್ಕೊಂದು ಬೆಸೆದುಕೊಂಡಿರುವ ಬಲೆ ಎಂಬ ಪೂರ್ಣಚಂದ್ರ ತೇಜಸ್ವಿಯವರ ಸಾಲುಗಳನ್ನು  ಸ್ಮರಿಸಿ, ರಾಜ್ಯ ಅರಣ್ಯ ಮತ್ತು ಜೀವ ಸಂಪತ್ತನ್ನು ಉಳಿಸುವಲ್ಲಿ ಮೊದಲ ಸ್ಥಾನದಲ್ಲಿ ಇದೆ.ವನ್ಯ ಜೀವಿ ಸಂಪತ್ತಿನಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಹುಲಿ ಮತ್ತು ಆನೆ ಗಳ ಸಂಖ್ಯೆಯಲ್ಲಿ ದೇಶದಲ್ಲಿ ಎಂಟನೇ ಸ್ಥಾನದಲ್ಲಿದೆ. ಎಲ್ಲ ಒತ್ತಡಗಳನ್ನು ಮೀರಿ ಅರಣ್ಯ ಸಂಪತ್ತು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತಹದ್ದು.ಈ ಸಿಬ್ಬಂದಿಗಳ ಕರ್ತವ್ಯ ದಿಂದ ಅರಣ್ಯ ಸಂಪತ್ತು ರಕ್ಷಣೆಯಲ್ಲಿದೆ ಎಂದರು.

ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ,ದೇಶದಲ್ಲಿಯೇ ನಮ್ಮ ಅರಣ್ಯ ಇಲಾಖೆ ಮಾದರಿಯಾಗಿದೆ.ಇದಕ್ಕೆ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಶ್ರಮ ಕಾರಣ ಎಂದರು . ಉತ್ತರ ಕರ್ನಾಟಕದಲ್ಲಿಯೂ ಹಸಿರು ವಾತಾವರಣ ಇದೆ.ಅರಣ್ಯ, ಪರಿಸರ ಉತ್ತಮವಾಗಿದ್ದರೆ ಜಗತ್ತು ಉಳಿಯುತ್ತದೆ.ಅರಣ್ಯ ಉಳಿಸಲು ಶ್ರಮವಹಿಸಿದ್ದವರಿಗೆ ಇಂದು ಗೌರವ ಸಲ್ಲಿಕೆ ಮಾಡಲಾಗಿದೆ ಎಂದರು. ಪೊಲೀಸ್ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸೌಲಭ್ಯಗಳು ಕಡಿಮೆಯಿವೆ. ದಿನ ದಿನಗಳಲ್ಲಿ ಈ ತಾರತಮ್ಯ ಸರಿಪಡಿಸಲು ಕ್ರಮ ವಹಿಸಲಾಗುವುದೆಂದರು.ಸುಮಾರು ವರ್ಷಗಳಿಂದ ಈ ಕಾರ್ಯಕ್ರಮ ನೆನೆಗುದಿಗೆ ಬಿದ್ದಿತ್ತು ಎಂದರು. ಅನೇಕ ರಾಜ್ಯಗಳು ನಮ್ಮ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆ ಕೆಲಸವನ್ನು ಮಾದರಿಯನ್ನಾಗಿಸಿಕೊಂಡಿವೆ. ಅರಣ್ಯ ಇಲಾಖೆ ಮೇಲೆ ಕೆಲವು ಆರೋಪಗಳೂ ಇವೆ. ಬಹಳ ಒತ್ತಡದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವನ್ನು ನಿಭಾಯಿಸಿಕೊಂಡು ಕೆಲಸ ಮಾಡಬೇಕಿದೆ ಎಂದು ಆನಂದ್ ಸಿಂಗ್ ಹೇಳಿದರು. 

ಅರಣ್ಯ ಮತ್ತು ಪರಿಸರ ಮನುಷ್ಯನ ಜೀವನಾಡಿ.ಲಾಕ್ ಡೌನ್ ಸಂಧರ್ಭದಲ್ಲಿ ಕೂಡಾ ವೇತನ ಕಡಿತ ಮಾಡದೇ ಇರುವುದು ಮೆಚ್ಚುವ ನಿರ್ಧಾರ.ಅರಣ್ಯ ರಕ್ಷಣೆ ಸಂಧರ್ಭದಲ್ಲಿ ಅನೇಕ ಸಿಬ್ಬಂದಿ ಹುತಾತ್ಮರಾಗಿದ್ದಾರೆ.ಈಗ ಇಲಾಖೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪೋಲೀಸ್ ಇಲಾಖೆಯ ಸೌಲಭ್ಯ ಕೊಡಬೇಕು ಎಂದು ಮುಖ್ಯಮಂತ್ರಿ ಗಳಲ್ಲಿ ಆನಂದ್ ಸಿಂಗ್ ಮನವಿ ಮಾಡಿದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ್ ಹೆಗಡೆ ಆಶಿಸರ ಮಾತನಾಡಿ,ಕೆಳ ಹಂತದ ಸಿಬ್ಬಂದಿಗಳೇ ನಮಗೆ ಬಹಳ ಮುಖ್ಯಅವರ ಪರಿಶ್ರಮ ಬಹಳ ಮುಖ್ಯ. ಇವರನ್ನು ನಾವು ವಾರಿಯರ್ಸ್ ಎಂದು ಕರೆಯಬೇಕು.ಹಸಿರು ಸಂರಕ್ಷಣೆ ಸೈನಿಕರು ಎಂದು ಕರೆಯಬಹುದು ಎಂದರು. ಕೆಳ ಹಂತದ ಸಿಬ್ಬಂದಿಗಳಿಗೆ ತರಬೇತಿಯ ಅವಶ್ಯಕತೆ ಇದೆ.ಇದರ ಬಗ್ಗೆ ಮುಖ್ಯಮಂತ್ರಿ ಗಳು ಗಮನ ಹರಿಸಬೇಕು ಎಂದು ಅವರು ಮನವಿ ಮಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com