ಹಂಪಿಯಲ್ಲಿ ಜೋಡಿಯ ಪ್ರಿ ವೆಡ್ಡಿಂಗ್ ಫೋಟೋ-ವಿಡಿಯೊ ಶೂಟ್: ಸಾರ್ವಜನಿಕರ ತೀವ್ರ ಆಕ್ರೋಶ

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಇತ್ತೀಚೆಗೆ ಲೇಟೆಸ್ಟ್ ಟ್ರೆಂಡ್. ಮದುವೆಯಾಗಲು ಹೊರಟಿರುವ ಜೋಡಿಯೊಂದು ವಿಶ್ವಪ್ರಸಿದ್ಧ ಪರಂಪರೆ ತಾಣ ಹಂಪಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ, ವಿಡಿಯೊ ಶೂಟ್ ಮಾಡಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಂಪಿ (ಬಳ್ಳಾರಿ): ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಇತ್ತೀಚೆಗೆ ಲೇಟೆಸ್ಟ್ ಟ್ರೆಂಡ್. ಮದುವೆಯಾಗಲು ಹೊರಟಿರುವ ಜೋಡಿಯೊಂದು ವಿಶ್ವಪ್ರಸಿದ್ಧ ಪರಂಪರೆ ತಾಣ ಹಂಪಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ, ವಿಡಿಯೊ ಶೂಟ್ ಮಾಡಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಹಂಪಿಯ ನಿರ್ಬಂಧಿತ ಪ್ರದೇಶಗಳಲ್ಲಿ ಈ ಜೋಡಿ ವಿಡಿಯೊ ಮಾಡಿಸಿಕೊಂಡಿದ್ದು ಅವರಿಗೆ ಅನುಮತಿ ಕೊಟ್ಟವರು ಯಾರು, ಅನುಮತಿ ನೀಡಿದ್ದೇಕೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ. 

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಎಂದು ಆಂಧ್ರ ಮೂಲದ ಈ ಜೋಡಿ ಹಂಪಿಯ ನಿರ್ಬಂಧಿತ ಪ್ರದೇಶಗಳು, ಸ್ಮಾರಕಗಳ ಮೇಲೆ ಹತ್ತಿ ಫೋಟೋ, ವಿಡಿಯೊ ಮಾಡಿಸಿಕೊಂಡಿದ್ದಾರೆ. ಪುರಾತತ್ವ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಂಪಿಯ ವಿಜಯ ವಿಠಲ ದೇವಸ್ಥಾನ, ಸಪ್ತಸ್ವರ ಮಂಟಪದಲ್ಲಿ ಯಾರಿಗೂ ಹೋಗಲು ಪ್ರವೇಶವಿಲ್ಲ. ಆದರೆ ಈ ಜೋಡಿ ಅಷ್ಟು ಸಲೀಸಾಗಿ ಹೋಗಿ ವಿಡಿಯೊ ಹೇಗೆ ಮಾಡಿಸಿಕೊಂಡರು, ಕೆಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮರಾ ನಿಷೇಧವಿದೆ, ಆದರೆ ಕಮಲ್ ಮಹಲ್ ನ್ನು ಡ್ರೋನ್ ನಲ್ಲಿ ಶೂಟ್ ಹೇಗೆ ಮಾಡಿಕೊಂಡರು ಎಂಬ ಪ್ರಶ್ನೆ, ಆಕ್ರೋಶ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com