ಹೊಯ್ಸಳೇಶ್ವರ ದೇವಾಲಯದ ಭದ್ರತೆಗಾಗಿ 4.25 ಕೋಟಿ ರೂ. ಬಾಕಿ ಪಾವತಿಸದ ಎಎಸ್ಐ: ಸಂದಿಗ್ದ ಸ್ಥಿತಿಯಲ್ಲಿ ಪೊಲೀಸರು
ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ದೇವಾಲಯ ಮತ್ತು ಸ್ಮಾರಕಗಳನ್ನು ಸಂರಕ್ಷಿಸುತ್ತಿರುವ ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ ಪೊಲೀಸ್ ಇಲಾಖೆಗೆ ಬಾಕಿ ಉಳಿಸಿಕೊಂಡಿದ್ದ 4.25 ಕೋಟಿ ಭದ್ರತಾ ಶುಲ್ಕವನ್ನು ಸಂದಾಯ ಮಾಡುವಲ್ಲಿ ವಿಫಲವಾಗಿದೆ.
Published: 24th November 2020 01:17 PM | Last Updated: 24th November 2020 02:18 PM | A+A A-

ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯ
ಹಾಸನ: ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಇದೀಗ ಕೆಟ್ಟ ಕಾರಣಗಳಿಂದ ಸುದ್ದಿಯಲ್ಲಿದೆ. ದೇವಾಲಯ ಮತ್ತು ಸ್ಮಾರಕಗಳನ್ನು ಸಂರಕ್ಷಿಸುತ್ತಿರುವ ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ ಪೊಲೀಸ್ ಇಲಾಖೆಗೆ ಬಾಕಿ ಉಳಿಸಿಕೊಂಡಿದ್ದ 4.25 ಕೋಟಿ ಭದ್ರತಾ ಶುಲ್ಕವನ್ನು ಸಂದಾಯ ಮಾಡುವಲ್ಲಿ ವಿಫಲವಾಗಿದೆ.
ದಶಕಗಳಿಂದಲೂ ಬಾಕಿ ಸಂದಾಯ ಮಾಡದಿರುವುದರಿಂದ ಭದ್ರತಾ ಸಿಬ್ಬಂದಿಯನ್ನು ಹಿಂಪಡೆಯುವಂತೆ ಭಾರತೀಯ ಸರ್ವೇಕ್ಷಣ ಇಲಾಖೆ ಪೊಲೀಸ್ ಇಲಾಖೆಗೆ ಹೇಳುತ್ತಿರುವುದು ಕುತೂಹಲಕರಿಯಾಗಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಹೊಯ್ಸಳೇಶ್ವರ ದೇವಾಲಯ ದಕ್ಷಿಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.2010ರಿಂದಲೂ ಬಾಕಿಯಿರುವ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸಿ ಪೊಲೀಸ್ ಇಲಾಖೆ ಪುರಾತತ್ವ ಇಲಾಖೆಗೆ ಸರಣಿ ಪತ್ರಗಳನ್ನು ಬರೆದಿದೆ.
ಪ್ರತಿ ದಿನ ಒಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಮತ್ತು ನಾಲ್ವರು ಪೇದೆಗಳನ್ನು ಭದ್ರತೆಯ ಕಾರಣದಿಂದ ನಿಯೋಜಿಸಲಾಗುತಿತ್ತು. ಆದರೆ ಇದೀಗ ಭದ್ರತೆಯನ್ನು ಮುಂದುವರೆಸಬೇಕಾ ಅಥವಾ ಬೇಡವೇ ಎಂಬುದರ ಸಂದಿಗ್ದ ಸ್ಥಿತಿಯಲ್ಲಿ ಪೊಲೀಸ್ ಇಲಾಖೆ ಸಿಲುಕಿದೆ.
ಒಂದು ವರ್ಷದ ಹಿಂದೆ ಉಗ್ರರ ಹೆಸರಿನಲ್ಲಿ ಬೆದರಿಕೆಯ ಪತ್ರವೊಂದನ್ನು ದೇವಾಲಯದ ಅಧಿಕಾರಿಗಳು ಸ್ವೀಕರಿಸಿದ ಬಳಿಕ ಜಿಲ್ಲಾ ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಮೂಲಕ ಭದ್ರತೆಯನ್ನು ತೀವ್ರಗೊಳಿಸಿದ್ದರು. ಪೊಲೀಸ್ ಭದ್ರತೆಯನ್ನು ಹಿಂಪಡೆಯುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೇಳಿದರೂ ಭದ್ರತೆಯನ್ನು ವಿಸ್ತರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.