ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಪೊಲೀಸ್ ಹುದ್ದೆಗಳಿಗೆ ನೇರ ನೇಮಕಾತಿ: ಕರಡು ನಿಯಮ ಪ್ರಕಟ, ಕೆಒಎ ಧನ್ಯವಾದ

ಕರ್ನಾಟಕ ಒಲಂಪಿಕ್ ಸಂಸ್ಥೆಯು ಸತತವಾಗಿ 6-7 ವರ್ಷಗಳಿಂದ, ಒಲಂಪಿಕ್ಸ್, ಪ್ಲಾರಾಲಂಪಿಕ್ಸ್, ಏಷಿಯನ್, ಕಾಮನ್ ವೆಲ್ತ್, ವಿಶ್ವ ಚಾಂಪಿಯನ್ಷಿಪ್, ಸಾರ್ಕ್ ಚಾಂಪಿಯನ್ಪಿಪ್, ಡೇವಿಸ್ ಕಪ್, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ವಿಜೇತರಾದ/ ಭಾಗವಹಿಸಿದ ರಾಜ್ಯದ ಹಲವಾರು ಪ್ರತಿಭಾವಂತ ಕ್ರೀಡಾಪಟುಗಳಿಗೆ...
ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯ ಪೊಲೀಸ್ ಹುದ್ದೆಗಳಿಗೆ ನೇರ ನೇಮಕಾತಿ: ಕರಡು ನಿಯಮ ಪ್ರಕಟ, ಕೆಒಎ ಧನ್ಯವಾದ

ಬೆಂಗಳೂರು: ಕರ್ನಾಟಕ ಒಲಂಪಿಕ್ ಸಂಸ್ಥೆಯು ಸತತವಾಗಿ 6-7 ವರ್ಷಗಳಿಂದ, ಒಲಂಪಿಕ್ಸ್, ಪ್ಲಾರಾಲಂಪಿಕ್ಸ್, ಏಷಿಯನ್, ಕಾಮನ್ ವೆಲ್ತ್, ವಿಶ್ವ ಚಾಂಪಿಯನ್ಷಿಪ್, ಸಾರ್ಕ್ ಚಾಂಪಿಯನ್ಪಿಪ್, ಡೇವಿಸ್ ಕಪ್, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ವಿಜೇತರಾದ/ ಭಾಗವಹಿಸಿದ ರಾಜ್ಯದ ಹಲವಾರು ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಸರ್ಕಾರದ ಅಸ್ತಿತ್ವದಲ್ಲಿರುವ ಲಾಭದಾಯಕ ನಿಗಮ ಹಾಗೂ ಮಂಡಳಿಗಳಲ್ಲಿಯೂ ಕ್ರೀಡಾ ಕೋಟಕ್ಕಾಗಿಯೇ ಇಂತಿಷ್ಟು ಹುದ್ದೆಗಳ ಮೀಸಲಾತಿಯನ್ನು ಕಲ್ಪಿಸಿ ನೇರ ನೇಮಕ ಮಾಡುವ ಬಗ್ಗೆ ಮನವಿಗಳನ್ನು ಸತತವಾಗಿ ಸಲ್ಲಿಸುತ್ತಾ ಬಂದಿದೆ. ಇದರ ಉದ್ದೇಶ, ರಾಜ್ಯದ ಯುವ ಜನಾಂಗ ಕ್ರೀಡೆಗಳಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ರಾಜ್ಯಕ್ಕೆ ಕೀರ್ತಿ ತರುವುದು ಹಾಗೂ ತನ್ಮೂಲಕ ತಮ್ಮ ಜೀವನ ಕಟ್ಟಿಕೊಳ್ಳಲು ಹಾಗೂ ರಾಜ್ಯದ ಕ್ರೀಡಾ ಬೆಳವಣಿಗೆಗೆ ಸಹಕಾರಿಯಾಗುವುದು.

ಕರ್ನಾಟಕ ಒಲಂಪಿಕ್ ಸಂಸ್ಥೆಯ ಮನವಿಗಳನ್ನು ಪುರಸ್ಕರಿಸಿ ರಾಜ್ಯ ಸರ್ಕಾರ ಪ್ರಥಮ ಹಂತದಲ್ಲಿ, ಪೊಲೀಸ್ ಇಲಾಖೆಯಲ್ಲಿ, ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರು ಹುದ್ದೆಯವರೆಗೆ ಪ್ರತಿಭಾವಂತ ಕ್ರೀಡಾಪಟುಗಳಿಗಾಗಿ ಶೇಕಡ 2 ರಷ್ಟು ಹುದ್ದೆಗಳಿಗೆ ನೇರ ನೇಮಕಾತಿಯ ಕರಡು ನಿಯಮಾವಳಿಗಳನ್ನು ದಿನಾಂಕ 23.11.2020 ರಂದು ಗೆಜೆಟ್ ನಲ್ಲಿ ಪ್ರಕಟಸಿದೆ. ಈ ದಿಕ್ಕಿನಲ್ಲಿ ಹಚ್ಚಿನ ಮುತುವರ್ಜಿ ಹಾಗೂ ವಿಶೇಷ ಆಸಕ್ತಿ ತೋರಿದ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಗೃಹ ಸಚಿವರು ಹಾಗೂ ಸಂಪುಟದ ಎಲ್ಲಾ ಕ್ಯಾಬಿನೆಟ್ ಸಚಿವರುಗಳಿಗೆ ಕರ್ನಾಟಕ ಒಲಂಪಿಕ್ ಸಂಸ್ಥೆಯ ವತಿಯಿಂದ ಹಾಗೂ ವೈಯಕ್ತಿಕವಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್ ಹೇಳಿದ್ದಾರೆ.

ಪ್ರತಿಭಾವಂತ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಕೆಯಲ್ಲಿ ನೇರ ನೇಮಕಾತಿಯ ಬಗ್ಗೆ ಅಧಿಸೂಚನೆ ಹೊರಡಿಸಿದಂತೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಸರ್ಕಾರದ ಅಸ್ತಿತ್ವದಲ್ಲಿರುವ ಲಾಭದಾಯಕ ನಿಗಮ ಹಾಗೂ ಮಂಡಳಿಗಳಲ್ಲಿಯೂ ಕ್ರೀಡಾ ಕೋಟಕ್ಕಾಗಿಯೇ ಇಂತಿಷ್ಟು ಹುದ್ದೆಗಳ ಮೀಸಲಾತಿಯನ್ನು ಕಲ್ಪಿಸಿ ನೇರ ನೇಮಕ ಮಾಡುವ ಬಗ್ಗೆ ಅಧಿಸೂಚನೆ ಹೊರಡಿಸಿದರೆ ನಿರುದ್ಯೋಗಿ ಕ್ರೀಡಾಪಟುಗಳಿಗೆ ಮತ್ತಷ್ಟು ಅನುಕೂಲವಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com