ಮೂಡುಬಿದಿರೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರು ಸಾವು
ಮದುವೆಗೆಂದು ಬಂದವರು ನದಿಯಲ್ಲಿ ಈಜಲು ಹೋಗಿ ನಾಲ್ವರು ನೀರು ಪಾಲಾದ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ಸಂಭವಿಸಿದೆ.
Published: 24th November 2020 07:43 PM | Last Updated: 24th November 2020 07:43 PM | A+A A-

ಸಾಂದರ್ಭಿಕ ಚಿತ್ರ
ಮೂಡುಬಿದಿರೆ: ಮದುವೆಗೆಂದು ಬಂದವರು ನದಿಯಲ್ಲಿ ಈಜಲು ಹೋಗಿ ನಾಲ್ವರು ನೀರು ಪಾಲಾದ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ಸಂಭವಿಸಿದೆ.
ಮೃತರನ್ನು ಮಾಮಂಜೂರಿನ ಮೂಡುಶೆಡ್ಡೆ ನಿಖಿಲ್(18), ಅರ್ಶಿತಾ(20), ವೇಣೂರಿನ ಸುಬಾಸ್(19) ಹಾಗೂ ಬಜ್ಪೆ ಪೆರಾರದ ರವಿ(30) ಎಂದು ಗುರುತಿಸಲಾಗಿದೆ.
ಇವರು ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ ಬಂದಿದ್ದ ಇವರು ಶಾಂಭವಿ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.