ಶಬರಿಮಲೆ: ರಾಜ್ಯದ ಯಾತ್ರಾರ್ಥಿಗಳಿಗಾಗಿ ಸಹಾಯವಾಣಿ
ಕೇರಳದ ಶಬರಿಮಲೈನಲ್ಲಿ ಜರುಗುವ 2020-21 ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮದಲ್ಲಿ ತೆರಳುವ ಕರ್ನಾಟಕ ರಾಜ್ಯದ ಭಕ್ತಾದಿಗಳು, ಯಾತ್ರಾರ್ಥಿಗಳಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
Published: 25th November 2020 08:48 PM | Last Updated: 25th November 2020 08:48 PM | A+A A-

ಬೆಂಗಳೂರು: ಕೇರಳದ ಶಬರಿಮಲೈನಲ್ಲಿ ಜರುಗುವ 2020-21 ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮದಲ್ಲಿ ತೆರಳುವ ಕರ್ನಾಟಕ ರಾಜ್ಯದ ಭಕ್ತಾದಿಗಳು, ಯಾತ್ರಾರ್ಥಿಗಳಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕರ್ನಾಟಕದಿಂದ ತೆರಳುವ ಭಕ್ತಾದಿಗಳಿಗೆ ರಾಜ್ಯ ಧಾರ್ಮಿಕ ದತ್ತಿ ಆಯುಕ್ತ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಯಾತ್ರಾರ್ಥಿಗಳು ಅಗತ್ಯ ಮಾಹಿತಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 080-26409689 ನ್ನು ಸಂಪರ್ಕಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೇರಳದ ಗಡಿ ಹಾಗೂ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಸಹಾಯವಾಣಿಗೆ ಕರೆ ಮಾಡಿದರೆ ಸರ್ಕಾರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಿದೆ.