ಬೆಂಗಳೂರು: ಡ್ರಗ್ ದಂಧೆ ಜಾಲ ಪತ್ತೆ ಹಚ್ಚಿದ ಎನ್‌ಸಿಬಿ, ಇಬ್ಬರು ಮಹಿಳಾ ಬಾಕ್ಸರ್‌ ಬಂಧನ!

ಬೆಂಗಳೂರು ವಲಯ ಘಟಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಅಂತಾರಾಷ್ಟ್ರೀಯ ಡ್ರಗ್ ಜಾಲವನ್ನು ಪತ್ತೆಹಚ್ಚಿದೆ. ಇದರಲ್ಲಿ ಇಬ್ಬರು ಯುವ ಮಹಿಳಾ ಬಾಕ್ಸರ್ಗಳು ಸಕ್ರೀಯರಾಗಿದ್ದಾರೆ ಎಂದು ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ವಲಯ ಘಟಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಅಂತಾರಾಷ್ಟ್ರೀಯ ಡ್ರಗ್ ಜಾಲವನ್ನು ಪತ್ತೆಹಚ್ಚಿದೆ. ಇದರಲ್ಲಿ ಇಬ್ಬರು ಯುವ ಮಹಿಳಾ ಬಾಕ್ಸರ್ಗಳು ಸಕ್ರೀಯರಾಗಿದ್ದಾರೆ ಎಂದು ವರದಿಯಾಗಿದೆ. 

ನಾರ್ಕೋಟಿಕ್ ಡ್ರಗ್ಸ್ & ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್(ಎನ್‌ಡಿಪಿಎಸ್) ಕಾಯ್ದೆ, 1985ರ ಅಡಿಯಲ್ಲಿ ನಿಯಂತ್ರಿತ ವಸ್ತುವಾಗಿರುವ ಸೂಡೊಫೆಡ್ರಿನ್ ಕಳ್ಳಸಾಗಣೆಯಲ್ಲಿ ಮಹಿಳಾ ಬಾಕ್ಸರ್ ಗಳಾದ ಡಿ. ಶುಕ್ಲಾ, ಜಿ. ಮಾರಿಯಾ ಇಬ್ಬರು ನೈಜೀರಿಯನ್ ಪ್ರಜೆಗಳಾದ ಬಿ. ಒನೊವೊ ಹಾಗೂ ಸಿ. ಒಕ್ವಾರ್ ಜೊತೆ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.

ಆರೋಪಿಗಳಿಂದ 6.870 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮಕ್ಕಳ ಬ್ಯಾಗ್ ನಲ್ಲಿ ಡ್ರಗ್ಸ್ ಅಡಗಿಸಿ ದಕ್ಷಿಣ ಆಫ್ರಿಕಾಕ್ಕೆ ಸಾಗಿಸಲು ಯೋಜಿಸಿದ್ದು ಈ ಬಗ್ಗೆ ಮಾಹಿತಿ ಪಡೆದ ಎನ್ ಸಿಬಿ ಅಧಿಕಾರಿಗಳು ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com