ಕೋವಿಡ್-19 ರೋಗಿಗಳು, ಗುಣಮುಖರಾದವರ ಸಮಸ್ಯೆ: ಆಯ್ದ ಪಿಎಚ್ ಸಿಗಳಲ್ಲಿ ಬಿಬಿಎಂಪಿ ಪ್ರಾಯೋಗಿಕ ಅಧ್ಯಯನ 

ಕೋವಿಡ್-19 ಸೋಂಕಿತರು ಮತ್ತು ಸೋಂಕಿನಿಂದ ಗುಣಮುಖ ಹೊಂದಿದ ನಂತರ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಆಯ್ದ ಪ್ರಾಥಮಿಕ ಕೇಂದ್ರಗಳಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸುತ್ತಿದ್ದಾರೆ.

Published: 26th November 2020 01:19 PM  |   Last Updated: 26th November 2020 01:19 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಕೋವಿಡ್-19 ಸೋಂಕಿತರು ಮತ್ತು ಸೋಂಕಿನಿಂದ ಗುಣಮುಖ ಹೊಂದಿದ ನಂತರ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಆಯ್ದ ಪ್ರಾಥಮಿಕ ಕೇಂದ್ರಗಳಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸುತ್ತಿದ್ದಾರೆ.

ತಜ್ಞರ ಸಮ್ಮುಖದಲ್ಲಿ ಈ ಅಧ್ಯಯನ ನಡೆಯುತ್ತಿದ್ದು, ಮಲ್ಲೇಶ್ವರಂ, ಸಿದ್ದಯ್ಯ ರಸ್ತೆ, ಅಲಸೂರು, ಶ್ರೀರಾಂಪುರ, ಹೊಸಹಳ್ಳಿ, ಬನಶಂಕರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ (ಆರೋಗ್ಯ ವಿಭಾಗ)ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಕೋವಿಡ್-19ನಿಂದ ಗುಣಮುಖ ಹೊಂದಿದ ನಂತರ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಅಧ್ಯಯನ ನಡೆಸಲಾಗುತ್ತದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ ನಂತರ ಫಲಿತಾಂಶವನ್ನು ಜಾರಿಗೊಳಿಸಲಾಗುತ್ತದೆ. ಪರೀಕ್ಷಾ ವರದಿಗಳನ್ನು ಬಿಡುಗಡೆ ಮಾಡುವ ವ್ಯವಸ್ಥೆ, ವಿಶೇಷವಾಗಿ ನೆಗೆಟಿವ್ ಬಂದರೆ ಅಂತವುಗಳನ್ನು ವಿಕೇಂದ್ರಿಕರಿಸಲಾಗುತ್ತದೆ. ಈಗ ಎಲ್ಲಾ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಕೇಂದ್ರಗಳನ್ನು ಸ್ಟ್ರೀಮ್ ಲೈನ್ ಮಾಡಲಾಗಿದ್ದು, ಕೋವಿಡ್ ಟೆಸ್ಟ್ ವರದಿಗಳು 8ರಿಂದ 32 ಗಂಟೆಗಳಲ್ಲಿ ಸಿಗುತ್ತದೆ. ಪ್ರತಿ ವಾರ್ಡ್ ಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ವಾರ್ಡ್ ಆಫೀಸ್ ಗಳಲ್ಲಿ ಎರಡು ಸ್ಟೇಷನರಿ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲು ಬಿಬಿಎಂಪಿ ನಿರ್ಧರಿಸಿದ್ದು, ಈ ಮೂಲಕ ನಾಗರಿಕರು ಎಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ನಂತರ ಎಲ್ಲಿಂದ ಫಲಿತಾಂಶ ಪಡೆಯಬೇಕು ಎಂದು ತಿಳಿದುಕೊಳ್ಳಬಹುದು.

ಈ ಕೇಂದ್ರಗಳ ಜಿಪಿಎಸ್ ಕೇಂದ್ರಗಳಲ್ಲಿ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಅಳವಡಿಸಲಾಗುತ್ತದೆ. ಮೊಬೈಲ್ ಪರೀಕ್ಷಾ ಘಟಕಗಳು ಈಗ ಕೊಮೊರ್ಬಿಡಿಟಿಗಳು, ಕೊಳೆಗೇರಿ ಪ್ರದೇಶಗಳು ಮತ್ತು ಅಗತ್ಯವಿರುವ ಇತರರತ್ತ ಗಮನ ಹರಿಸುತ್ತವೆ.

ಹೋಂ ಐಸೊಲೇಷನ್ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಸುಧಾರಿಸುತ್ತಿದೆ. ಜನರಿಗೆ ಸಾಕಷ್ಟು ಆರೈಕೆ ನೀಡುತ್ತದೆ. ಮೊಬೈಲ್ ಪರೀಕ್ಷಾ ವಾಹನಗಳನ್ನು ನಿಯೋಜಿಸುವ ಬದಲು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಕಾಲೇಜುಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಇಲ್ಲಿಯವರೆಗೆ, 480 ಮೊಬೈಲ್ ತಂಡಗಳು ಕಾಲೇಜುಗಳಲ್ಲಿ 33,000 ವಿದ್ಯಾರ್ಥಿಗಳನ್ನು ಪರೀಕ್ಷಿಸಿವೆ ಎಂದು ಚೋಳನ್ ತಿಳಿಸಿದರು.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp