ಮಾಜಿ ಸಚಿವ ರೋಷನ್ ಬೇಗ್ ಆರೋಗ್ಯದಲ್ಲಿ ಏರುಪೇರು: ಜಯದೇವ ಆಸ್ಪತ್ರೆಗೆ ದಾಖಲು
ಐಎಂಎ ಹಗರಣ ಸಂಬಂಧ ಜೈಲಿನಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.
Published: 26th November 2020 10:39 AM | Last Updated: 26th November 2020 10:39 AM | A+A A-

ರೋಷನ್ ಬೇಗ್
ಬೆಂಗಳೂರು: ಐಎಂಎ ಹಗರಣ ಸಂಬಂಧ ಜೈಲಿನಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಅವರನ್ನು ವಿಶೇಷ ನ್ಯಾಯಾಲಯ ಸಿಬಿಐ ವಶಕ್ಕೆ ನೀಡಲು ಆದೇಶಿತ್ತು. ಪರಪ್ಪನ ಅಗ್ರಹಾರ ಜೈಲು ಬಳಿಗೆ ಆಗಮಿಸಿ ಜೈಲು ಬಳಿ ಕಾದು ಬರಿಗೈಲಿ ಸಿಬಿಐ ಅಧಿಕಾರಿಗಳು ತೆರಳಿದ್ದಾರೆ.
ಮಾಜಿ ಸಚಿವ ರೋಶನ್ ಬೇಗ್ ರನ್ನು ಕರೆದೊಯ್ಯಲು ಸಿಬಿಐ ಅಧಿಕಾರಿಗಳು ಆಗಮಿಸಿದ್ದು, ನ್ಯಾಯಾಲಯದಿಂದ ಸಿಬಿಐಗೆ ಮೂರು ದಿನ ಬೇಗ್ ರನ್ನು ಕಸ್ಟಡಿಗೆ ನೀಡಿದ ಹಿನ್ನೆಲೆ ಆಗಮಿಸಿದ್ದರು. ಜೈಲಿಂದ ರೋಷನ್ ಬೇಗ್ ಬೆಳಿಗ್ಗೆಯೇ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಜೈಲು ಅಧಿಕಾರಿಗಳು ಸಿಬಿಐ ಗೆ ಸರಿಯಾದ ಮಾಹಿತಿ ನೀಡದೇ ಕಾಯಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.