ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ನಾಲ್ವರ ದುರ್ಮರಣ

ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಟೀ ಹೊಟೇಲ್‌ಗೆ ನುಗ್ಗಿದೆ, ಇದರ‌ ಪರಿಣಾಮ ನಾಲ್ಕು ಜನರು ಮೃತಪಟ್ಟಿರುವ ಘಟನೆ ನಗರ ಹೊರವಲಯದ ಚದುಲಪುರ ಕ್ರಾಸ್ ನಲ್ಲಿ ಗುರುವಾರ ಬೆಳಿಗ್ಗೆ ವರದಿಯಾಗಿದೆ.

Published: 26th November 2020 06:17 PM  |   Last Updated: 26th November 2020 06:17 PM   |  A+A-


accident2

ಸಾಂದರ್ಭಿಕ ಚಿತ್ರ

Posted By : Vishwanath S
Source : UNI

ಚಿಕ್ಕಬಳ್ಳಾಪುರ: ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಟೀ ಹೊಟೇಲ್‌ಗೆ ನುಗ್ಗಿದೆ, ಇದರ‌ ಪರಿಣಾಮ ನಾಲ್ಕು ಜನರು ಮೃತಪಟ್ಟಿರುವ ಘಟನೆ ನಗರ ಹೊರವಲಯದ ಚದುಲಪುರ ಕ್ರಾಸ್ ನಲ್ಲಿ ಗುರುವಾರ ಬೆಳಿಗ್ಗೆ ವರದಿಯಾಗಿದೆ.

ಮೃತರನ್ನು ಕಾರಿನಲ್ಲಿದ್ದ ಗವಿಗಾನಹಳ್ಳಿ ನಿವಾಸಿ ವಕೀಲ ಯಮುನಾಚಾರ್(44), ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್) ಗುಮಾಸ್ತ ಎಚ್.ವಿ.ವೆಂಕಟೇಶ್ (45), ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಬೆಂಗಳೂರಿನ ಬಾಣಸವಾಡಿ ನಿವಾಸಿ ಕಲಾಂಜಿಯಂ (47), ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗಪುರದ ನಿವಾಸಿ ನಿತೇಶ್ ಗೌಡ (25) ಎಂದು ಗುರುತಿಸಲಾಗಿದೆ.

ಹರಿಯಾಣ ಮೂಲದ ಕಂಟೈನರ್ ಲಾರಿ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಬೆಂಗಳೂರಿನಿಂದ ಹೈದ್ರಾಬಾದ್ ನತ್ತ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp