ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ, ತಾಯಿ ಹೃದಯ ಇರಬೇಕು: ರೋಹಿಣಿ ಸಿಂಧೂರಿ ವಿರುದ್ಧ ಶಾಸಕರ ಆಕ್ರೋಶ
ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ. ತಾಯಿ ಹೃದಯ ಇರಬೇಕು’ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ.
Published: 26th November 2020 11:08 AM | Last Updated: 26th November 2020 01:08 PM | A+A A-

ರೋಹಿಣಿ ಸಿಂಧೂರಿ
ಮೈಸೂರು: ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ. ತಾಯಿ ಹೃದಯ ಇರಬೇಕು’ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುಣಸೂರು ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ ತಾಯಿ ಹೃದಯ ಇರಬೇಕು' ಎಂದು ಎಚ್.ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮೈಸೂರಿಗೆ ಇಬ್ಬರು ಮಹಾರಾಣಿಯರು ಇದ್ದಾರೆ. ಈಗ ಇವರೂ ಮಹಾರಾಣಿಯಾಗುವುದು ಬೇಡ. ನಮಗೆ ಮಾತೃಹೃದಯ ಇರುವವರು ಬೇಕು’ ಎಂದು ಚಾಟಿ ಬೀಸಿದರು. ‘ನಾನು ಕಾಂಗ್ರೆಸ್ ಪಕ್ಷದವನು ಎಂಬ ಕಾರಣಕ್ಕೋ ಏನೋ ನನ್ನ ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕ ಎಂಬ ಕನಿಷ್ಠ ಸೌಜನ್ಯವನ್ನೂ ಅವರು ತೋರುತ್ತಿಲ್ಲ. ಸ್ಪರ್ಧೆಗೆ ಬಿದ್ದವರಂತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದಾರೆ ಎಂದು ಹೇಳಿದ್ದಾರೆ.
ಕಡತಕ್ಕೆ ಸಹಿ ಹಾಕಲು ವರ್ಗಾವಣೆ ಪ್ರಕರಣ ಕೋರ್ಟ್‌ನಲ್ಲಿದೆ ಎಂದು ನೆಪ ಹೇಳುತ್ತಿದ್ದಾರೆ. ನಾನು ರಾಜೀನಾಮೆ ನೀಡಲು ಸಿದ್ಧ. ಬಿಜೆಪಿಯವರೇ ಶಾಸಕರಾಗಿ ಆಯ್ಕೆಯಾಗಲಿ. ಕ್ಷೇತ್ರದ ಅಭಿವೃದ್ಧಿಯಾದರೆ ಸಾಕು’ ಎಂದು ಹೇಳಿದರು.