ಬೆಂಗಳೂರು: ಶೀಘ್ರದಲ್ಲಿಯೇ ಅಗೆದಿರುವ ರಸ್ತೆ ದುರಸ್ಥಿಗೆ ಕ್ರಮ; ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆ
ವಿವಿಧ ಕಾಮಗಾರಿಗಳಿಗಾಗಿ ರಸ್ತೆ ಅಗೆದ ನಂತರ ಅವುಗಳನ್ನು ಮುಚ್ಚದೆ ಇದುದ್ದರಿಂದ ಚಿಕ್ಕಪೇಟೆ, ಮಮುಲ್ ಪೇಟೆ, ಅಕ್ಕಿ ಪೇಟೆ, ಬಳೆಪೇಟೆ, ಅವಿನ್ಯೂ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂಪಿಂಗ್ ಮತ್ತಿತರ ಕಾರಣಗಳಿಂದ ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗಲು ಹಿಂಜರಿಕೆ ಪಡುವಂತಾಗಿದ್ದು, ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ.
Published: 26th November 2020 12:43 PM | Last Updated: 26th November 2020 01:12 PM | A+A A-

ಸಂಸದ ಪಿ. ಸಿ. ಮೋಹನ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ
ಬೆಂಗಳೂರು: ವಿವಿಧ ಕಾಮಗಾರಿಗಳಿಗಾಗಿ ರಸ್ತೆ ಅಗೆದ ನಂತರ ಅವುಗಳನ್ನು ಮುಚ್ಚದೆ ಇದುದ್ದರಿಂದ ಚಿಕ್ಕಪೇಟೆ, ಮಮುಲ್ ಪೇಟೆ, ಅಕ್ಕಿ ಪೇಟೆ, ಬಳೆಪೇಟೆ, ಅವಿನ್ಯೂ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂಪಿಂಗ್ ಮತ್ತಿತರ ಕಾರಣಗಳಿಂದ ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗಲು ಹಿಂಜರಿಕೆ ಪಡುವಂತಾಗಿದ್ದು, ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ.
ಅನೇಕ ದೂರುಗಳು ಮತ್ತು ಪ್ರತಿಭಟನೆ ನಂತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ರಸ್ತೆಗಳನ್ನು ಸರಿ ಮಾಡಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಪಿ.ಸಿ. ಮೋಹನ್, ಶೀಘ್ರದಲ್ಲಿಯೇ ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಂತ ಹಂತವಾಗಿ ಇದನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂಬಂಧ ರಾಜ್ಯ ಗಾರ್ಮೆಂಟ್ ಅಸೋಸಿಯೇಷನ್ ನವೆಂಬರ್ 21 ರಂದು ಮುಖ್ಯಮಂತ್ರಿಗೆ ಪತ್ರ ಸಲ್ಲಿಸಿದ್ದು, ಮಳೆಯಿಂದ ರಸ್ತೆಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಸಂಘದ ಅಧ್ಯಕ್ಷ, ಡಿ ಚೋಪ್ರಾ, ಕಾರ್ಯದರ್ಶಿ ಪ್ರಕಾಶ್ ಬೊಜನಿ ಮತ್ತಿತರರು ಹೇಳಿದರು.
ಚಿಕ್ಕಪೇಟೆ ಕಮರ್ಷಿಯಲ್ ಹಬ್ ಆಗಿದ್ದು, ಮೆಟ್ರೋ ಮಾತ್ರ ಇಲ್ಲಿ ಅಭಿವೃದ್ಧಿಯಾಗಿದೆಯ ವಿಶ್ವ ದರ್ಜೆಯ ವಾಣಿಜ್ಯ ಮತ್ತು ವ್ಯವಹಾರ ಹಬ್ ಆಗಿ ಈ ಪ್ರದೇಶವನ್ನು ಅಧಿಕಾರಿಗಳು ಮಾರ್ಪಡಿಸಬೇಕಾಗಿದೆ ಎಂದು ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.