ಬೆಂಗಳೂರು ಏರ್‌ಪೋರ್ಟ್‌ಗೆ ಮೆಟ್ರೊ ನಿಲ್ದಾಣಗಳ ನಿರ್ಮಾಣ ವಿನ್ಯಾಸಕ್ಕೆ ಬಿಐಎಎಲ್ ಆಹ್ವಾನ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ 2ನೇ ಹಂತದ ಮೆಟ್ರೋ ನಿಲ್ದಾಣಗಳಿಗೆ ಮಾರ್ಗ ವಿನ್ಯಾಸಗೊಳಿಸಲು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಆಹ್ವಾನ ನೀಡಿದೆ.
Published: 27th November 2020 12:42 PM | Last Updated: 27th November 2020 01:41 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ 2ನೇ ಹಂತದ ಮೆಟ್ರೋ ನಿಲ್ದಾಣಗಳಿಗೆ ಮಾರ್ಗ ವಿನ್ಯಾಸಗೊಳಿಸಲು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಆಹ್ವಾನ ನೀಡಿದೆ.
ಮೆಟ್ರೋ ನಿಲ್ದಾಣ ಮಾರ್ಗ ವಿನ್ಯಾಸಕ್ಕೆ ಸಲಹೆಗಳನ್ನು ನೀಡಲು ಡಿಸೆಂಬರ್ 14ರವರೆಗೂ ಗಡುವು ನೀಡಲಾಗಿದೆ. ಕೆ.ಆರ್.ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು 37 ಕಿಮೀ ಮಾರ್ಗದಲ್ಲಿ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಚಿಂತನೆ ನಡೆದಿದ್ದು, ಕೇಂದ್ರ ಸರ್ಕಾರದ ಇದಕ್ಕೆ ಅನುಮತಿ ನೀಡಬೇಕಿದೆ.
ಎರಡು ನಿಲ್ದಾಣಗಳಿಗೆ ನವೆಂಬರ್ 18 ರಂದು ಹೊರಡಿಸಲಾದ ಪ್ರಸ್ತಾವನೆ ಕೋರಿಕೆಗೆ ಸಂಬಂಧಿಸಿದಂತೆ ನವೆಂಬರ್ 24 ರಂದು ಸಭೆ ನಡೆದಿದೆ.
ಈ ಹಿಂದೆ ಹೇಳಿಗೆ ನೀಡಿದ್ದ ಬಿಎಂಆರ್ಸಿಎಲ್, ವಿಮಾನ ನಿಲ್ದಾಣ ಮೆಟ್ರೋ ವಿಭಾಗವನ್ನು ಇತರ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತದೆ. ನಾಗರಿಕ ಕಾರ್ಯಗಳು ಮಾರ್ಚ್ 2021ರ ವೇಳೆಗೆ ಆರಂಭಗೊಳ್ಳಲಿದೆ. ಎರಡು ಮೆಟ್ರೋ ನಿಲ್ದಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನೋಡಿಕೊಳ್ಳಲಿದೆ ಎಂದು ತಿಳಿಸಿತ್ತು.