ನಗರ ಪ್ರದೇಶಗಳಲ್ಲಿರುವಂತೆ ಹಳ್ಳಿಗಳಲ್ಲಿಯೂ ಉದ್ಯಾನವನಗಳು: ನರೇಗಾದಡಿ ನಿರ್ಮಾಣ 

ಪಾರ್ಕ್, ಕೆರೆ, ವಾಕಿಂಗ್, ಜಾಗಿಂಗ್ ಮಾಡುವುದೆಲ್ಲ ಸಿಟಿ ಮಂದಿ, ನಗರದ ಯಾಂತ್ರೀಕೃತ ಬದುಕಿನ ಮಧ್ಯೆ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು, ಮನಸ್ಸಿಗೆ, ದೇಹಕ್ಕೆ ಆಹ್ಲಾದಕರ ವಾತಾವರಣ ಸಿಗಲು ಸಿಟಿ ಮಂದಿ ಮನೆ ಪಕ್ಕ ಇರುವ ಪಾರ್ಕ್ ಗೆ ಹೋಗುತ್ತಾರೆ. 

Published: 27th November 2020 12:46 PM  |   Last Updated: 27th November 2020 01:56 PM   |  A+A-


BBMP Park

ಬಿಬಿಎಂಪಿ ಪಾರ್ಕ್

Posted By : Sumana Upadhyaya
Source : The New Indian Express

ಬೆಂಗಳೂರು: ಪಾರ್ಕ್, ಕೆರೆ, ವಾಕಿಂಗ್, ಜಾಗಿಂಗ್ ಮಾಡುವುದೆಲ್ಲ ಸಿಟಿ ಮಂದಿ, ನಗರದ ಯಾಂತ್ರೀಕೃತ ಬದುಕಿನ ಮಧ್ಯೆ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು, ಮನಸ್ಸಿಗೆ, ದೇಹಕ್ಕೆ ಆಹ್ಲಾದಕರ ವಾತಾವರಣ ಸಿಗಲು ಸಿಟಿ ಮಂದಿ ಮನೆ ಪಕ್ಕ ಇರುವ ಪಾರ್ಕ್ ಗೆ ಹೋಗುತ್ತಾರೆ. 

ಪಾರ್ಕ್ ಅಥವಾ ಉದ್ಯಾನವನಗಳ ಸ್ಥಾಪನೆ, ಅಭಿವೃದ್ಧಿ, ನಿರ್ವಹಣೆಗೆ ನಗರ ಪಾಲಿಕೆಗಳು, ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ. ಇಂತಹ ನಗರಗಳಲ್ಲಿರುವ ಪಾರ್ಕ್ ಗಳ ಮಾದರಿಯಲ್ಲಿಯೇ ಇನ್ನು ಹಳ್ಳಿಗಳಲ್ಲಿ ಕೂಡ ಪಾರ್ಕ್ ಗಳು ತಲೆಯೆತ್ತಲಿವೆಯಂತೆ. 

ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಜಾಗಗಳನ್ನು ಗುರುತಿಸಿ ಅಲ್ಲಿ ಕೆರೆ, ಸರೋವರಗಳನ್ನು ನಿರ್ಮಿಸುವುದು, ಗಿಡಗಳನ್ನು ನೆಡುವುದು, ಕಲ್ಲಿನ ಬೆಂಚುಗಳನ್ನು ಇಡುವುದು, ಜಾಗಿಂಗ್, ವಾಕಿಂಗ್ ಮಾಡುವವರಿಗೆ ಪಾರ್ಕ್ ನೊಳಗೆ ಟ್ರ್ಯಾಕ್ ಗಳ ನಿರ್ಮಾಣ ಇತ್ಯಾದಿ ಮಾಡಲಾಗುತ್ತದೆ. ಇದರಿಂದ ಹಳ್ಳಿಗಳಿಗೆ ಹೊಸ ನೋಟ ಸಿಗುವುದಲ್ಲದೆ ಹಳ್ಳಿಗಳಲ್ಲಿರುವ ಹಿರಿಯರು, ಮಕ್ಕಳಿಗೆ ಸಮಯ ಕಳೆಯಲು ಕೂಡ ಒಳ್ಳೆಯ ಜಾಗವಾಗುತ್ತದೆ ಎಂದು ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಉದ್ಯೋಗ ಖಾತ್ರಿ ಕಾಯ್ದೆ(ಎಂಜಿಎನ್ಆರ್ ಇಜಿಎ) ಯೋಡನೆಯಡಿ, ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಪಂಚಾಯತ್ ಗಳಲ್ಲಿ ಉದ್ಯಾನವನಗಳನ್ನು ನಿರ್ಮಿಸಲು ಮುಂದಾಗಿದೆ. ಕೋವಿಡ್-19 ಸಂಕಷ್ಟದಿಂದ ನಗರದಲ್ಲಿ ಜೀವನ ಮಾಡಲು ಸಾಧ್ಯವಾಗದೆ ಹಳ್ಳಿಗಳಿಗೆ ಹಿಂತಿರುಗಿದವರಿಗೆ, ನಿರ್ಮಾಣ ಕಾರ್ಮಿಕರಿಗೆ, ವ್ಯಾಪಾರಿಗಳಿಗೆ, ಹೌಸ್ ಕೀಪಿಂಗ್ ಸಿಬ್ಬಂದಿಗೆ, ಕಸೂತಿ ಕೆಲಸ ಮಾಡುವವರಿಗೆ, ಹಳ್ಳಿಗಳಿಗೆ ಕೃಷಿ ಕೆಲಸಗಳಿಗೆ ಹಿಂತಿರುಗಿದವರಿಗೆ ಸಹಾಯವಾಗಲಿದೆ.

ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ಇದರಿಂದ ಉದ್ಯೋಗ ಸಿಗಲಿದೆ. ಆರ್ ಡಿಪಿಆರ್ ಇಲಾಖೆ ಈ ಕೆಲಸ ಕೈಗೆತ್ತಿಕೊಳ್ಳಲಿದ್ದು, ರಸ್ತೆಗಳು, ಕೆರೆಗಳು, ಕಲ್ಯಾಣಿಗಳು, ಅಂಗನವಾಡಿ ಕಟ್ಟಡಗಳ ನಿರ್ಮಾಣವನ್ನು ಮಾಡಲಿದೆ. ಪಾರ್ಕ್ ಗಳಲ್ಲಿನ ನೀರಿನ ಮೂಲಗಳನ್ನು ಅಂತರ್ಜಲ ಮಟ್ಟ ಹೆಚ್ಚಿಸಲು ಕೂಡ ಉಪಯೋಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp