ಕೋವಿಡ್-19ನಿಂದ ಮೃತಪಟ್ಟ ಶತಾಯುಷಿಗಳು ಕಡಿಮೆ: ಕರ್ನಾಟಕದಲ್ಲಿ ಶೇ.5ರಷ್ಟು ಮಾತ್ರ!

ಕೋವಿಡ್-19 ಭಾರತಕ್ಕೆ ಕಾಲಿಟ್ಟು 8 ತಿಂಗಳುಗಳು ಕಳೆದಿವೆ. ಇಷ್ಟು ಸಮಯದಲ್ಲಿ ಹಲವರಿಗೆ ಸೋಂಕು ತಗುಲಿ ಕೆಲವರು ಮೃತಪಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲಾ ವಯೋಮಾನದವರಲ್ಲಿ ಕೋವಿಡ್-19 ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಭಾರತಕ್ಕೆ ಕಾಲಿಟ್ಟು 8 ತಿಂಗಳುಗಳು ಕಳೆದಿವೆ. ಇಷ್ಟು ಸಮಯದಲ್ಲಿ ಹಲವರಿಗೆ ಸೋಂಕು ತಗುಲಿ ಕೆಲವರು ಮೃತಪಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲಾ ವಯೋಮಾನದವರಲ್ಲಿ ಕೋವಿಡ್-19 ಕಂಡುಬಂದಿದೆ.

ವಯಸ್ಸಾದವರಿಗೆ, ಇಳಿ ವಯಸ್ಸಿನವರಿಗೆ ಸೋಂಕು ತಗುಲುವುದು ಬೇಗ ಎಂಬ ಮಾತುಗಳಿವೆ, ಆದರೆ 100ರ ವಯಸ್ಸಿನರು ಅಥವಾ ಅದಕ್ಕಿಂತ ಹೆಚ್ಚಿನವರು ಸಾಂಕ್ರಾಮಿಕ ಕಾಣಿಸಿಕೊಂಡು ಮೃತಪಟ್ಟವರ ಪ್ರಮಾಣ ಶೇಕಡಾ 5ರಷ್ಟು ಇದೆ. 100 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಕೋವಿಡ್-19 ತಗುಲಿದವ 60 ಮಂದಿಯಲ್ಲಿ ಕರ್ನಾಟಕದಲ್ಲಿ ಇದುವರೆಗೆ ಮೂವರು ಮೃತಪಟ್ಟಿದ್ದಾರಷ್ಟೆ.

90ರಿಂದ 99 ವಯೋಮಾನದವರಿಗೆ ಹೋಲಿಸಿದರೆ 100ರ ವಯಸ್ಸಿನವರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದು ಕಡಿಮೆ. 1,292 ಮಂದಿ 90ರಿಂದ 99 ವಯೋಮಾನದವರಲ್ಲಿ ಸೋಂಕು ತಗುಲಿ ಶೇಕಡಾ 11.5ರಷ್ಟು ಮಂದಿ ಮೃತಪಟ್ಟಿದ್ದರೆ, 80-89 ವಯಸ್ಸಿನ 11 ಸಾವಿರದ 008 ಮಂದಿಯಲ್ಲಿ ಶೇಕಡಾ 9.1ರಷ್ಟು ಮಂದಿ ಮೃತಪಟ್ಟಿದ್ದಾರೆ. 39 ಸಾವಿರದ 818 ಮಂದಿ 70ರಿಂದ 79 ವಯಸ್ಸಿನ ಕೊರೋನಾ ರೋಗಿಗಳಲ್ಲಿ ಶೇಕಡಾ 6.2ರಷ್ಟು ಮಂದಿ ಮೃತಪಟ್ಟರೆ, 60ರಿಂದ 69 ವರ್ಷ ವಯಸ್ಸಿನ 88 ಸಾವಿರದ 055 ರೋಗಿಗಳ ಪೈಕಿ ಶೇಕಡಾ 4ರಷ್ಟು ಮಂದಿ ಮೃತಪಟ್ಟಿದ್ದಾರೆ.

ಕಳೆದ ನವೆಂಬರ್ 14 ರಿಂದ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಮರಣ ಪ್ರಮಾಣ ಸ್ಥಿರವಾಗಿದ್ದರೆ, ಚೇತರಿಕೆ ಕಾಣುವವರ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ಕಡಿಮೆಯಾಗಿದೆ. ಮೊನ್ನೆ ನವೆಂಬರ್ 25ರಂದು ಚೇತರಿಕೆ ದರ 95.85% ಮತ್ತು ಮುಂದಿನ ಎರಡು ದಿನಗಳಲ್ಲಿ ಇದು 95.78% ಕ್ಕೆ ಇಳಿದಿದೆ.

ಸಕ್ರಿಯ ಪ್ರಕರಣಗಳ ಬೆಳವಣಿಗೆಯ ದರವು ಕಳೆದ ಮೂರು ದಿನಗಳಲ್ಲಿ ಏರಿಕೆಯಾಗಿದ್ದು, ಕ್ರಮವಾಗಿ ನವೆಂಬರ್ 25, 26 ಮತ್ತು 27 ರ ಅವಧಿಯಲ್ಲಿ ಶೇಕಡಾ 1.12, 1.71 ಮತ್ತು 0.24 ರಷ್ಟು ಹೆಚ್ಚಳವಾಗಿದೆ. ಆದಾಗ್ಯೂ, ಅಕ್ಟೋಬರ್ 16 ರಿಂದ ಹೊಸ ಪ್ರಕರಣಗಳ ದೈನಂದಿನ ಹೆಚ್ಚಳವು ಶೇಕಡಾ 1ರಷ್ಟು ಕಡಿಮೆಯಾಗಿದೆ.

ಕೊರೋನಾ ಸಕ್ರಿಯ ಪ್ರಕರಣಗಳ ವಿಷಯದಲ್ಲಿ, 19,083 ಪ್ರಕರಣಗಳೊಂದಿಗೆ ಬೆಂಗಳೂರು ನಗರ, 593 ಪ್ರಕರಣಗಳೊಂದಿಗೆ ಮೈಸೂರು, ದಕ್ಷಿಣ ಕನ್ನಡ 473, ತುಮಕೂರು 440 ಮತ್ತು ಬೆಂಗಳೂರು ಗ್ರಾಮೀಣ 398 ಕೇಸುಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com