ಕೋವಿಡ್-19 ಲಸಿಕೆ ಪ್ರಯೋಗಕ್ಕೆ ಒಳಗಾಗಲು ಗ್ರಾಮೀಣ ಪ್ರದೇಶದವರ ಹಿಂಜರಿಕೆ: ತಜ್ಞರು 

ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಸುದ್ದಿಯಾಗುತ್ತಿರುವುದರ ಮಧ್ಯೆ ಭಯ ಮತ್ತು ಇತರ ಆತಂಕ, ಸಮಸ್ಯೆಗಳ ಕಾರಣದಿಂದ ಕೆಲವರು ಕೋವಿಡ್ ಲಸಿಕೆ ಮಾರುಕಟ್ಟೆಗೆ ಬಂದರೂ ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಕೋವಿಡ್-19 ಸ್ಯಾಂಪಲ್ ಸಂಗ್ರಹ ಕೇಂದ್ರ
ಕೋವಿಡ್-19 ಸ್ಯಾಂಪಲ್ ಸಂಗ್ರಹ ಕೇಂದ್ರ

ಮೈಸೂರು: ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಸುದ್ದಿಯಾಗುತ್ತಿರುವುದರ ಮಧ್ಯೆ ಭಯ ಮತ್ತು ಇತರ ಆತಂಕ, ಸಮಸ್ಯೆಗಳ ಕಾರಣದಿಂದ ಕೆಲವರು ಕೋವಿಡ್ ಲಸಿಕೆ ಮಾರುಕಟ್ಟೆಗೆ ಬಂದರೂ ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪ್ರಯೋಗ ನಡೆಯುತ್ತಿದೆ. ಆದರೆ ಇಲ್ಲಿನ ನಗರ ಮತ್ತು ಹಳ್ಳಿ ಪ್ರದೇಶಗಳ ಜನರ ಮಧ್ಯೆ ವೈವಿಧ್ಯತೆಯಿದೆ. ಇಲ್ಲಿನ ನಗರ ಪ್ರದೇಶಗಳ ಜನತೆ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಮುಂದೆ ಬಂದರೆ ಹಳ್ಳಿ ಪ್ರದೇಶಗಳ ಜನರು ನಿರಾಕರಿಸುತ್ತಿದ್ದಾರೆ, ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಅನೇಕ ಸಾಂಕ್ರಾಮಿಕ ರೋಗಗಳು ನಮ್ಮ ದೇಶದಲ್ಲಿ ಬಂದಿವೆ, ಆಗಲೂ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದರು ಎಂಬ ಸುದ್ದಿಯನ್ನು ನಾವು ಕೇಳಿದ್ದೇವೆ. ಪೋಲಿಯೋ ಲಸಿಕೆ ಬಂದಾಗಲೂ ಆರಂಭದಲ್ಲಿ ಹೀಗೆಯೇ ಆಗಿತ್ತು. ಅಮೆರಿಕದ ಔಷಧ ಕೇಂದ್ರವೊಂದು ಇತ್ತೀಚೆಗೆ ನಡೆಸಿರುವ ಅಧ್ಯಯನ ಪ್ರಕಾರ, ಕಡಿಮೆ ಮತ್ತು ಮಧ್ಯಮ ಆದಾಯ ತರುವ ದೇಶಗಳಲ್ಲಿ ಕೋವಿಡ್-19 ಲಸಿಕೆಗಳನ್ನು ಹಾಕಿಸಿಕೊಳ್ಳಲು ಜನರು ಕಾದುನೋಡುವ ತಂತ್ರ ಅನಿಸರಿಸುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.

ಜೆಎಸ್ ಎಸ್ ಅಕಾಡೆಮಿಯ ಉಪ ಕುಲಪತಿ ಮತ್ತು ಸಂಶೋಧಕ ಡಾ ಬಿ ಸುರೇಶ್, ಹಳ್ಳಿಗಳಿಂದ ಬಂದವರು ಪರೀಕ್ಷೆಗಳ ಬಗ್ಗೆ ಹಿಂಜರಿಯುತ್ತಾರೆ ಏಕೆಂದರೆ ಫಲಿತಾಂಶ ಮತ್ತು ಅದರ ಪರಿಣಾಮಗಳ ಬಗ್ಗೆ ಅವರು ಚಿಂತಿತರಾಗಿದ್ದಾರೆ. ಕೆಲವರು "ಅವರು ಹಳ್ಳಿಯಲ್ಲಿದ್ದಾರೆ, ಆದ್ದರಿಂದ ಇದು ಅನಗತ್ಯ ಎಂದು ಹೇಳಿದರು. ಇದು ಶಿಕ್ಷಣದ ಮಟ್ಟವನ್ನು ಅವಲಂಬಿಸಿರುತ್ತದೆ. ನಗರ ಪ್ರದೇಶಗಳಿಂದ ಬಂದವರು ಮತ್ತು ಪ್ರಯಾಣಿಸುವವರು ಇದಕ್ಕೆ ಹೆಚ್ಚು ಮುಕ್ತರಾಗಿದ್ದಾರೆ" ಎಂದು ಅವರು ಹೇಳಿದರು. ಕೋವಿಡ್ -19 ಹೊಸ ಕಾಯಿಲೆಯಾಗಿರುವುದರಿಂದ ಒಂದು ಭಾಗದ ಜನರು ಲಸಿಕೆ ಸ್ವೀಕರಿಸಲು ಹಿಂಜರಿಯುತ್ತಿರುವುದು ಸಹಜ ಎಂದರು.

ಜಿಲ್ಲಾ ಮತ್ತು ರಾಜ್ಯ ಮಟ್ಟದ ಲಸಿಕೆ ಕಾರ್ಯಪಡೆಯ ಸಭೆಗಳಲ್ಲಿ ಉದ್ಭವಿಸುವ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು, ಲಸಿಕೆ ಸರಾಗವಾಗಿ ತಲುಪಲು ಸಹಾಯ ಮಾಡಲು ಧಾರ್ಮಿಕ ಮತ್ತು ಇತರ ಪ್ರಭಾವಿ ನಾಯಕರು ಮತ್ತು ಖಾಸಗಿ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com