ಕೋವಿಡ್-19: ರಾಜ್ಯದಲ್ಲಿಂದು 15 ಸಾವು, 1291 ಹೊಸ ಪ್ರಕರಣಗಳು ದೃಢ, 1530 ಸೋಂಕಿತರು ಗುಣಮುಖ
ರಾಜ್ಯದಲ್ಲಿಂದು ಹೊಸದಾಗಿ 1291 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. 1530 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 847612 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24503 ಆಗಿದೆ.
Published: 29th November 2020 07:39 PM | Last Updated: 29th November 2020 07:48 PM | A+A A-

ಸಂಗ್ರಹ ಚಿತ್ರಗಳು
ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ 1291 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. 1530 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 847612 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24503 ಆಗಿದೆ.
ಇಂದು 15 ಮಂದಿ ಸಾವನ್ನಪ್ಪಿದ್ದು, ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 11765 ಆಗಿದೆ. ಕೋವಿಡ್-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 883899 ಆಗಿದೆ. ಸೋಂಕಿನ ಶೇಕಡಾವಾರು ಪ್ರಮಾಣ ಶೇ. 1.22 ರಷ್ಟಿದೆ. ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ.1.16 ರಷ್ಟಿದೆ.
ಇಂದಿನ 29/11/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@DKShivakumar @Tejasvi_Surya @BYVijayendra @Ramesh_aravind @PuneethRajkumar @CovidIndiaSeva @iaspankajpandey @KarnatakaVarthe @PIBBengaluru @kiranshaw @WFRisinghttps://t.co/a7Zs54ykLK pic.twitter.com/Zh3afc6TfC
— K'taka Health Dept (@DHFWKA) November 29, 2020
ಬಾಗಲಕೋಟೆಯಲ್ಲಿ 4, ಬಳ್ಳಾರಿ 13, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 38, ಬೆಂಗಳೂರು ನಗರ 686, ಬೀದರ್ 8, ಚಾಮರಾಜನಗರ 5, ಚಿಕ್ಕಬಳ್ಳಾಪುರ 22, ಚಿಕ್ಕಮಗಳೂರು 25, ಚಿತ್ರದುರ್ಗ 23, ದಕ್ಷಿಣ ಕನ್ನಡ 48, ದಾವಣಗೆರೆ 15, ಧಾರವಾಡ 16, ಗದಗ 9, ಹಾಸನ 41, ಹಾವೇರಿ 10, ಕಲಬುರಗಿ 19, ಕೊಡಗು 11, ಕೋಲಾರ 12, ಕೊಪ್ಪಳ 3, ಮಂಡ್ಯ 48, ಮೈಸೂರು 37, ರಾಯಚೂರು 18, ರಾಮನಗರ 1, ಶಿವಮೊಗ್ಗ 22, ತುಮಕೂರು 39, ಉಡುಪಿ 38, ಉತ್ತರ ಕನ್ನಡ 21, ವಿಜಯಪುರ 25, ಯಾದಗರಿಯಲ್ಲಿ 9 ಪ್ರಕರಣಗಳು ದಾಖಲಾಗಿವೆ.