ಸ್ಟೇಷನ್ ಕಂಟ್ರೋಲರ್ ಸೇರಿ ನಮ್ಮ ಮೆಟ್ರೋದ 8 ಮಂದಿ ಲೋಕೋಪೈಲಟ್'ಗಳಿಗೆ ಕೊರೋನಾ ಪಾಸಿಟಿವ್

ಕೊರೋನಾ ಸೋಂಕು ಭೀತಿಯಿಂದ ಮೆಟ್ರೋದಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದ ಪ್ರಯಾಣಿಕರನ್ನು ಸುರಕ್ಷಿತ ಕ್ರಮಗಳ ಕೈಗೊಳ್ಳುವ ಮೂಲಕ ಪ್ರಯಾಣಿಕರನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನಮ್ಮ ಮೆಟ್ರೋಗೆ ಇದೀಗ ಕೊರೋನಾದಿಂದ ಮತ್ತೊಂಡು ಹೊಸ ಸಮಸ್ಯೆ ತಲೆದೋರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ಭೀತಿಯಿಂದ ಮೆಟ್ರೋದಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದ ಪ್ರಯಾಣಿಕರನ್ನು ಸುರಕ್ಷಿತ ಕ್ರಮಗಳ ಕೈಗೊಳ್ಳುವ ಮೂಲಕ ಪ್ರಯಾಣಿಕರನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನಮ್ಮ ಮೆಟ್ರೋಗೆ ಇದೀಗ ಕೊರೋನಾದಿಂದ ಮತ್ತೊಂಡು ಹೊಸ ಸಮಸ್ಯೆ ತಲೆದೋರಿದೆ. 

ಸ್ಟೇಷನ್ ಕಂಟ್ರೋಲರ್ ಸೇರಿದಂತೆ 8 ಮಂದಿ ಲೋಕೋ ಪೈಲಟ್'ಗಳಿಗೆ ಹೊಸದಾಗಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ಇದೂವರೆಗೆ ನಮ್ಮ ಮೆಟ್ರೋದಲ್ಲಿ 28 ಮಂದಿ ಲೋಕೋಪೈಲಟ್'ಗಳಿಗೆ ಕೊರೋನಾ ದೃಢಪಟ್ಟಂತಾಗಿದೆ. 

ಕೊರೋನಾ ದೃಢಪಟ್ಟಿರುವ ಎಲ್ಲಾ ಲೋಕೋಪೈಲಟ್'ಗಳಲ್ಲೂ ಲಕ್ಷಣರಹಿತರಾಗಿದ್ದು, ಜೀವಾಪಾಯಗಳಿಂದ ದೂರವಿದ್ದಾರೆಂದು ತಿಳಿದುಬಂದಿದೆ. 

ಕೊರೋನಾ ದೃಢಪಟ್ಟಿರುವ ಎಲ್ಲಾ ಸಿಬ್ಬಂದಿಗಳು ಹೋಂ ಕ್ವಾರಂಟೈನ್ ಹಾಗೂ ವೈದ್ಯರ ಸಲಹೆ ಮೇರೆಗೆ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರಲ್ಲೂ ಲಕ್ಷಣ ರಹಿತ ಸೋಂಕು ಕಾಣಿಸಿಕೊಂಡಿದ್ದು, ಸಿಬ್ಬಂದಿಗಳಿಗೆ ನಿಲ್ದಾಣದಲ್ಲಿಯೇ ಕೊರೋನಾ ಪರೀಕ್ಷೆ ನಡೆಸುವ ಕಾರ್ಯಗಳು ನಡೆಯುತ್ತಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಬಿಎಂಆರ್'ಸಿಎಲ್ ನಿರ್ವಾಹಕ ನಿರ್ದೇಶಕ ಅಜಯ್ ಸೇಠ್ ಅವರು ಹೇಳಿದ್ದಾರೆ. 

ನಿಲ್ದಾಣ ನಿರ್ವಾಹಕರಿಗೂ ಕೊರೋನಾ ದೃಢಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೂ ಸುಮಾರು 450 ಮಂದಿ ಲೋಕೋಪೈಲೆಟ್'ಗಳು ಕಾರ್ವನಿರ್ವಹಿಸುತ್ತಾರೆ. ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಸಿಬ್ಬಂದಿಗಳ ಸುರಕ್ಷತಾ ದೃಷ್ಟಿಯಿಂದಾಗಿ ಇದೀಗ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನವೇ ಧರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಬಿಎಂಆರ್'ಸಿಎಲ್ ಸಿಬ್ಬಂದಿಗಳಿಗಾಗಿಯೇ ಕೊರೋನಾ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ನೀಡಿರುವ ಎಲ್ಲಾ ಮಾರ್ಗಸೂಚಿಗಳನ್ನೂ ನಾವು ಅನುಸರಿಸುತ್ತಿದ್ದೇವೆ. ನಮ್ಮ ಸಿಬ್ಬಂದಿಗಳು ಅವರವರ ಮನೆಗಳಿಂದಲೇ ಬಂದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ವೇಳೆ ಎಲ್ಲಿ ಬೇಕಾದರೂ ಸೋಂಕು ತಗುಲಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com