ಇದೇ ಮೊದಲು: ಸೇಲ್ ಡೀಡ್ ವಿತರಿಸದಂತೆ ಬಿಲ್ಡರ್ ಗೆ ಕೆ-ರೇರಾ ನಿರ್ದೇಶನ

ಜೈನ್ ಹೈಟ್ಸ್ ಈಸ್ಟ್ ಪೆರೇಡ್‌ನಲ್ಲಿನ ಎಲ್ಲಾ ಸೌಲಭ್ಯಗಳು ಕಾರ್ಯಗತಗೊಳ್ಳುವವರೆಗೆ ಮತ್ತು ಅಗತ್ಯವಾದ ಅನುಮತಿಗಳನ್ನು ಪಡೆಯುವವರೆಗೆ ಸೇಲ್ ಡೀಡ್ ವಿತರಿಸದಂತೆ ಅಥವಾ ನೋಂದಾಯಿಸದಂತೆ ಕರ್ನಾಟಕ-ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಬಿಲ್ಡರ್ ಜೈನ್ ಹೈಟ್ಸ್‌ಗೆ ನಿರ್ದೇಶನ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೈನ್ ಹೈಟ್ಸ್ ಈಸ್ಟ್ ಪೆರೇಡ್‌ನಲ್ಲಿನ ಎಲ್ಲಾ ಸೌಲಭ್ಯಗಳು ಕಾರ್ಯಗತಗೊಳ್ಳುವವರೆಗೆ ಮತ್ತು ಅಗತ್ಯವಾದ ಅನುಮತಿಗಳನ್ನು ಪಡೆಯುವವರೆಗೆ ಸೇಲ್ ಡೀಡ್ ವಿತರಿಸದಂತೆ ಅಥವಾ ನೋಂದಾಯಿಸದಂತೆ ಕರ್ನಾಟಕ-ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಬಿಲ್ಡರ್ ಜೈನ್ ಹೈಟ್ಸ್‌ಗೆ ನಿರ್ದೇಶನ ನೀಡಿದೆ.

ಬಿಲ್ಡರ್ ಗಳು ಮೂಲಸೌಕರ್ಯಗಳನ್ನು ಒದಗಿಸಿಲ್ಲ, ಬೆಸ್ಕಾಂ  ವಾಣಿಜ್ಯದರದಲ್ಲಿ ವಿದ್ಯುತ್ ಪೂರೈಸುತ್ತಿದ್ದು, ವಿದ್ಯುತ್ ಕಡಿತಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಕಗ್ಗದಾಸಪುರ ಮತ್ತು ವಿಭೂತಿಪುರ ಹಳ್ಳಿಯಲ್ಲಿನ ಜೈನ್ ಹೈಟ್ಸ್ ಈಸ್ಟ್ ಪರೇಡ್ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಕೆ- ರೇರಾ ಮೊದಲ ಬಾರಿಗೆ ಈ ರೀತಿಯ ನಿರ್ದೇಶನ ನೀಡಿದೆ.

ವಿದ್ಯುತ್ ಸ್ಥಗಿತಗೊಳಿಸದಂತೆ ಡಿಸೆಂಬರ್ 23, 2019ರಲ್ಲಿ ಕೆ- ರೇರಾ ಬಿಲ್ಡರ್ ಗಳಿಗೆ ನಿರ್ದೇಶನ ನೀಡಿತ್ತು.ಸೇಲ್  ಡೀಡ್ ಗಳನ್ನು ವಿತರಿಸದಂತೆ ಸೆಪ್ಟೆಂಬರ್ 8 ರಂದು ಔಪಚಾರಿಕವಾಗಿ ಬಿಲ್ಡರ್ ಗಳಿಗೆ ರೇರಾ ನಿರ್ದೇಶನ ನೀಡಿತ್ತು. ಅಲ್ಲಿ ಏನೂ ಮಾಡೇ ಇಲ್ಲ ಎಂದು ಅರ್ಜಿದಾರರು ದೂರು ದಾಖಲಿಸಿದ ಬಳಿಕ ಮತ್ತೆ ಸೆಪ್ಟೆಂಬರ್ 30 ರಂದು ಸೇಲ್ ಡೀಡ್ ಗಳನ್ನು ವಿತರಿಸದಂತೆ ಲಿಖಿತವಾಗಿ ನಿರ್ದೇಶನ ನೀಡಿದೆ.

ಬಿಲ್ಡರ್ ಗಳು ವಿಚಾರಣೆಗೆ ಹಾಜರಾಗಿ ಆಕ್ಷೇಪಣೆ ಸಲ್ಲಿಸದಿರುವುದನ್ನು ಕೂಡಾ ಕೆ- ರೇರಾ ಗಮನಿಸಿದೆ. ಭೂ ಸ್ವಾಧೀನ ಪ್ರಮಾಣ ಪತ್ರದೊಂದಿಗೆ ಬೆಸ್ಕಾಂ, ಬಿಡಬ್ಲ್ಯೂಎಸ್ ಎಸ್ ಬಿ ಶಾಶ್ವತವಾಗಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸುವವರೆಗೂ ಅಪಾರ್ಟ್ ಮೆಂಟ್ ಗಳಿಗೆ ಸೇಲ್ ಡೀಡ್ ಗಳನ್ನು ವಿತರಿಸದಂತೆ ಬಿಲ್ಡರ್ ಗಳಿಗೆ ಕೆ- ರೇರಾ ವಿಚಾರಣೆ ವೇಳೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದೆ.

ಅಪಾರ್ಟ್ ಮೆಂಟ್ ನಲ್ಲಿ 200 ಕುಟುಂಬಗಳಿದ್ದು, ಕಮರ್ಷಿಯಲ್ ದರದಲ್ಲಿ 250 ಕಿಲೋ ವ್ಯಾಟ್ ವಿದ್ಯುತ್ ನ್ನು ಬಳಸುತ್ತಿದ್ದೇವೆ. ವಿದ್ಯುತ್ ಗಾಗಿ ಡಿಜಿ ಸೆಟ್ ಮತ್ತು ಡೀಸೆಲ್ ಗೂ ಹಣ ವೆಚ್ಚ ಮಾಡುತ್ತಿದ್ದೇವೆ. ನಮಗೆ ಕಿರುಕುಳ ನೀಡುತ್ತಿರುವ ಬಿಲ್ಡರ್ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಜೈನ್ ಹೈಟ್ಸ್ ಈಸ್ಟ್ ಪರೇಡ್ ಗ್ರಾಹಕರ ಕಲ್ಯಾಣ ಅಸೋಸಿಯೇಷನ್ ಖಚಾಂಚಿ ಆರ್. ಕುಂದಾವಿ ಹೇಳಿದ್ದಾರೆ.

ಹೊಸ ವಿಚಾರಣೆ ಬಗ್ಗೆ ಮಾಹಿತಿ ಇಲ್ಲ, ಈ ಹಿಂದೆ ನೀಡಿರುವ ಆದೇಶದಂತೆ ಶಾಶ್ವತವಾಗಿ ವಿದ್ಯುತ್ ಪೂರೈಸುವ ಕೆಲಸ ನಡೆಯುತ್ತಿದೆ. ಇನ್ನಿತರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಡೆದಿದೆ ಎಂದು ಜೈನ್ ಹೈಟ್ಸ್  ವ್ಯವಸ್ಥಾಪಕ ನಿರ್ದೇಶಕ ಮತ್ತು ಕ್ರೆಡಾಯ್ ಅಧ್ಯಕ್ಷ ಕಿಶೋರ್ ಜೈನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com