ಹೈಪರ್ಟೆಂನ್ಸನ್ ಕಂಟ್ರೋಲ್ ಇನಿಶಿಯೇಟಿವ್ ಘಟಕ ಉದ್ಘಾಟಿಸಿದ ಶ್ರೀರಾಮುಲು

ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಕ್ತದೊತ್ತಡ ನಿಯಂತ್ರಣಕ್ಕಾಗಿ ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂಡಿಯಾ ಹೈಪರ್ಟೆಂನ್ಸನ್ ಕಂಟ್ರೋಲ್ ಇನಿಶಿಯೇಟಿವ್ ಕಾರ್ಯಕ್ರಮ ಆರಂಭಿಸಲಾಗುತ್ತಿದೆ.
ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಕ್ತದೊತ್ತಡ ನಿಯಂತ್ರಣಕ್ಕಾಗಿ ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂಡಿಯಾ ಹೈಪರ್ಟೆಂನ್ಸನ್ ಕಂಟ್ರೋಲ್ ಇನಿಶಿಯೇಟಿವ್ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ವಿಶ್ವ ಹೃದಯ ದಿನಾಚರಣೆ ಕುರಿತು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ಹೃದಯ ಸಂಬಂಧಿ ಕಾಯಿಲೆಗಳು ಹಲವರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿವೆ, ಹೀಗಾಗಿ ಮಧ್ಯಪಾನ, ಧೂಮಪಾನದಂತಹ ದುಷ್ಚಟಗಳನ್ನು ತ್ಯಜಿಸುವುದು ಜೊತೆಗೆ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಹೇಳಿದರು ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ ಮತ್ತು ಡಯಾಬಿಟಿಕ್ ಪರೀಕ್ಷೆ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.

"ಪ್ರೋಟೋಕಾಲ್ ಆಧಾರಿತ ನಿರ್ವಹಣೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಉತ್ತಮ ಮುನ್ಸೂಚನೆ ಮತ್ತು ನಿಯಮಿತವಾಗಿ ಔಧಿಗಳ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ಮೆಡಿಸನ್ ಲಾಜಿಸ್ಟಿಕ್ಸ್ ಗೆ ಸಹಾಯ ಮಾಡುತ್ತದೆ ಎಂದು ಶ್ರೀರಾಮಲು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜುಗಳಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳವರೆಗೆ ಎಲ್ಲಾ ಹಂತದ ಆರೈಕೆಯಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗುವುದು, ರಾಜ್ಯ ಸರ್ಕಾರಕ್ಕೆ ಪ್ರೋತ್ಸಾಹಿಸಲು ವಿಶ್ವ ಆರೋಗ್ಯ ಸಂಸ್ಥೆಯು ಹೃದಯರಕ್ತನಾಳದ
ಆರೋಗ್ಯ ಅಧಿಕಾರಿಯನ್ನು ನೀಡಿದೆ ಮತ್ತು ಐಸಿಎಂಆರ್ ಇಬ್ಬರು ಹಿರಿಯ ಚಿಕಿತ್ಸಾ ಮೇಲ್ವಿಚಾರಕರನ್ನು ಅನುಮೋದಿಸಿದೆ ಎಂದು ವಿವರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com