ನಿಲ್ಲದ ಕೊರೋನಾ ತಾಂಡವ: 100 ಸಾವು, ಬೆಂಗಳೂರಿನಲ್ಲಿ 3,925 ಸೇರಿ ರಾಜ್ಯದಲ್ಲಿ 9,886 ಮಂದಿಗೆ ಪಾಸಿಟಿವ್!

ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು ದಾಖಲೆಯ 9,886 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದೆ.

Published: 03rd October 2020 08:36 PM  |   Last Updated: 03rd October 2020 09:58 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು ದಾಖಲೆಯ 9,886 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 100 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9,219ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 3,925 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 2,45,700ಕ್ಕೆ ಏರಿಕೆಯಾಗಿದೆ.

ಇಂದು 8,989 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 5,08,495ಕ್ಕೆ ಏರಿಕೆಯಾಗಿದೆ. 1,12,783 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 3,925 ಸೋಂಕು ಪತ್ತೆಯಾಗಿದ್ದು, ಬೀದರ್ 14, ಚಾಮರಾಜನಗರ 179, ಚಿಕ್ಕಬಳ್ಳಾಪುರ 234, ಚಿಕ್ಕಮಗಳೂರು 175, ಚಿತ್ರದುರ್ಗ 76, ದಕ್ಷಿಣ ಕನ್ನಡ 255, ದಾವಣಗೆರೆ 129, ಧಾರವಾಡ 98, ಗದಗ 32, ಹಾಸನ 460, ಹಾವೇರಿ 71, ಕಲಬುರಗಿ 107, ಕೊಡಗು 37, ಕೋಲಾರ 20, ಕೊಪ್ಪಳ 98, ಮಂಡ್ಯ 206, ಮೈಸೂರು 1514, ರಾಯಚೂರು 199, ರಾಮನಗರ 58, ಶಿವಮೊಗ್ಗ 337, ತುಮಕೂರು 302, ಉಡುಪಿ 158, ಉತ್ತರ ಕನ್ನಡ 92, ವಿಜಯಪುರ 97 ಹಾಗೂ ಯಾದಗಿರಿ 128 ಸೋಂಕು ಪತ್ತೆಯಾಗಿವೆ.

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp