ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತಿರುವ ರೈತರು!

ಕೊರೋನಾ ಸಾಂಕ್ರಾಮಿಕ ರೋಗದ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಬಾಗಲಕೋಟೆಯ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಅನೇಕ ವಿದ್ಯಾರ್ಥಿಗಳ ಕುಟುಂಬಗಳು, ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ಸಲುವಾಗಿ ಹೆಚ್ಚಿನ ಮೊತ್ತದ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದಾರೆ.

Published: 03rd October 2020 01:20 PM  |   Last Updated: 03rd October 2020 01:31 PM   |  A+A-


Casual_photos1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಬಾಗಲಕೋಟೆಯ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಅನೇಕ ವಿದ್ಯಾರ್ಥಿಗಳ ಕುಟುಂಬಗಳು, ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ಸಲುವಾಗಿ ಹೆಚ್ಚಿನ ಮೊತ್ತದ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದಾರೆ.

ಕಾಲೇಜು ಶಿಕ್ಷಣ ಕೋರ್ಸ್ ಗಳಲ್ಲಿ ಸೂಕ್ತವಾದದ್ದು ಎಂದು  ಕೃಷಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ಈ ವರ್ಷ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ, ರೈತರಾಗಿರುವ ತಮ್ಮ ತಂದೆ ತಿಂಗಳಿಗೆ ಶೇ.5 ರ ಬಡ್ಡಿದರದಲ್ಲಿ 20 ಸಾವಿರ ಸಾಲ ಪಡೆದಿದ್ದಾರೆ. ಅಸಲು ಮರುಪಾವತಿ ಮಾಡುವವರೆಗೆ ಬಡ್ಡಿಯನ್ನು  ಪಾವತಿಸಬೇಕಾಗುತ್ತದೆ ಎಂದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಕಡೂರು ಮೂಲದ  ರಕ್ಷಿತ್ (ಹೆಸರು ಬದಲಾಯಿಸಲಾಗಿದೆ) ಅಳಲು ತೋಡಿಕೊಂಡಿದ್ದಾನೆ.

ಹಿಂದಿನ ವರ್ಷದ ಪ್ರವಾಸ, ಕಾನ್ವೋಕೇಷನ್, ಕ್ರೀಡೆ, ಮತ್ತು  ವೃತ್ತಿ ಅಭಿವೃದ್ಧಿಗೆ ಸಂಗ್ರಹಿಸಿದ ಹಣ ಖರ್ಚಾಗದ ಕಾರಣ ವಿದ್ಯಾರ್ಥಿಗಳು ಲಾಕ್‌ಡೌನ್‌ನಿಂದ ಸೆಮಿಸ್ಟರ್ ಶುಲ್ಕ ಕಡಿಮೆಯಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಶಿಕ್ಷಣ ಇಲಾಖೆ ನಿರ್ದೇಶನದ ಹೊರತಾಗಿಯೂ ಪ್ರತಿ ಸೆಮಿಸ್ಟರ್ ಗೆ 2,700 ರೂ,ಗಳಷ್ಟು ಶುಲ್ಕವನ್ನು ವಿಶ್ವವಿದ್ಯಾನಿಲಯ ಹೆಚ್ಚಿಸಿದೆ. ಅಕ್ಟೋಬರ್ 5ರೊಳಗೆ ರಕ್ಷಿತ್ 19, 305 ರೂ.ಶುಲ್ಕವನ್ನು ಪಾವತಿಸಬೇಕಾಗಿದೆ.

ತಮ್ಮ ತಂದೆಯೂ ಕೂಡಾ ಸಾಲಕ್ಕಾಗಿ ಪರದಾಡುತ್ತಿದ್ದು, ಶುಲ್ಕವನ್ನು ಕಡಿಮೆ ಮಾಡಬೇಕೆಂದು ಡೀನ್ ಮತ್ತು ಕುಲಪತಿಗಳಲ್ಲಿ ಮನವಿ ಮಾಡಿದ್ದೇವೆ. ಆದರೂ, ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು  ಮತ್ತೋರ್ವ ವಿದ್ಯಾರ್ಥಿ ಆನಂದ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ತಿಳಿಸಿದ್ದಾನೆ.

ಆರು ವಿಶ್ವವಿದ್ಯಾನಿಲಯಗಳ ರಾಜ್ಯ ಮಟ್ಟದ ಸಮನ್ವಯ ಸಮಿತಿಯು ಸರ್ವಾನುಮತದಿಂದ ಶುಲ್ಕ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರತಿ ವರ್ಷ ಶೇಕಡಾ 5 ರಂತೆ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ.ಇದೇ ರೀತಿಯಲ್ಲಿ ಈ ವರ್ಷವೂ ಹೆಚ್ಚಿಸಲಾಗಿದೆ. ವಿಶ್ವವಿದ್ಯಾಲಯವನ್ನು ಹೇಗೆ ನಡೆಸುವುದು? ಸರ್ಕಾರ ಸಂಶೋಧನೆಗೆ ಮಾತ್ರ ಸಂಸ್ಥೆಗೆ ಹಣವನ್ನು ನೀಡುತ್ತದೆ ಮತ್ತು ಶಿಕ್ಷಣವು ವಿದ್ಯಾರ್ಥಿಗಳ ಶುಲ್ಕವನ್ನು ಅವಲಂಬಿಸಿರುತ್ತದೆ ಎಂದು ಕುಲಪತಿ ಇಂದಿರೇಶ್ ಹೇಳುತ್ತಾರೆ.

Stay up to date on all the latest ರಾಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp