ಸಾವಯವ ಬೆಳೆಗಳಿಗೆ ಮನ್ನಣೆ: 'ನಮ್ದು' ಮಳಿಗೆ ಆರಂಭಿಸಿದ ರೈತರು

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯಿಂದ ಕಾರ್ಪೊರೇಟ್ ಉದ್ಯಮಿಗಳು ಮತ್ತು ಖಾಸಗಿ ಪಾಲುದಾರರು ಕೃಷಿ ಮಾರುಕಟ್ಟೆಗೆ ಕಾಲಿಡಬಹುದೆಂಬ ಆತಂಕ ರೈತರಲ್ಲಿ ಒಂದೆಡೆಯಿದ್ದರೆ, ರೈತರ ಒಂದು ಗುಂಪು ಒಟ್ಟು ಸೇರಿ ಉತ್ಪನ್ನ ಮತ್ತು ಮಾರುಕಟ್ಟೆಯ ತಮ್ಮದೇ ಸ್ವಂತ ನಮ್ದು ಬ್ರಾಂಡ್ ನ್ನು ಆರಂಭಿಸಲು ಮುಂದಾಗಿದ್ದಾರೆ.
ಚಾಮರಾಜನಗರ ಕೃಷಿ ಸಮಾಜದಲ್ಲಿ ಆರಂಭಿಸಿದ ಮಳಿಗೆಯಲ್ಲಿ ರೈತರ ಸಾವಯವ ಉತ್ಪನ್ನಗಳು
ಚಾಮರಾಜನಗರ ಕೃಷಿ ಸಮಾಜದಲ್ಲಿ ಆರಂಭಿಸಿದ ಮಳಿಗೆಯಲ್ಲಿ ರೈತರ ಸಾವಯವ ಉತ್ಪನ್ನಗಳು

ಮೈಸೂರು: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯಿಂದ ಕಾರ್ಪೊರೇಟ್ ಉದ್ಯಮಿಗಳು ಮತ್ತು ಖಾಸಗಿ ಪಾಲುದಾರರು ಕೃಷಿ ಮಾರುಕಟ್ಟೆಗೆ ಕಾಲಿಡಬಹುದೆಂಬ ಆತಂಕ ರೈತರಲ್ಲಿ ಒಂದೆಡೆಯಿದ್ದರೆ, ರೈತರ ಒಂದು ಗುಂಪು ಒಟ್ಟು ಸೇರಿ ಉತ್ಪನ್ನ ಮತ್ತು ಮಾರುಕಟ್ಟೆಯ ತಮ್ಮದೇ ಸ್ವಂತ ನಮ್ದು ಬ್ರಾಂಡ್ ನ್ನು ಆರಂಭಿಸಲು ಮುಂದಾಗಿದ್ದಾರೆ. ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ನಿಗದಿ ಮಾಡಬಹುದು, ಅದೇ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಅಮೃತ್ ಭೂಮಿ ಫೌಂಡೇಶನ್ ರಾಜ್ಯಾದ್ಯಂತ ಈ ಅಭಿಯಾನವನ್ನು ಆರಂಭಿಸಿದ್ದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಇತರ ಸಾವಯವ ಬೆಳೆಗಳನ್ನು ಬೆಳೆಯುವ ರೈತರು ಬೆಳೆಗಳ ಪೂರೈಕೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ಹೊಂದಿರುತ್ತಾರೆ. ಈ ಫೌಂಡೇಶನ್ ನ್ನು ಆರಂಭಿಸಿದ್ದು ದಿವಂಗತ ಮಾಜಿ ರೈತ ಮುಖಂಡ ಪ್ರೊ ಎಂ ಡಿ ನಂಜುಂಡ ಸ್ವಾಮಿ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಉತ್ತಮ ಸಾವಯವ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಸಿಗುತ್ತದೆ.

ಹಸಿರು ಸೇನೆ, ರೈತ ಸಂಘ, ಅಮೃತ ಭೂಮಿ ಮತ್ತು ಇತರ ಕೆಲವು ಸಾವಯವ ಉತ್ಪನ್ನಗಳನ್ನು ಬೆಳೆಯುವ ರೈತರು ಚಾಮರಾಜನಗರದ ಕೃಷಿಕ ಸಮಾಜದಲ್ಲಿ ಮಳಿಗೆಯನ್ನು ತೆರೆದಿದ್ದಾರೆ. ಇಲ್ಲಿ ಒಂದೇ ಸೂರಿನಡಿ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.

ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಡಿ ಮಳಿಗೆಯನ್ನು ಆರಂಭಿಸಲಾಗಿದ್ದು ಹನೂರು, ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ರೈತರಿಗೆ ಇದು ಒಂದು ಉತ್ತಮ ಮಾರುಕಟ್ಟೆ ಎನಿಸಲಿದೆ. ಸುಮಾರು 100 ಸಾವಯವ ಕೃಷಿ ಬೆಳೆಯುವ ರೈತರು ಸದ್ಯ ಒಟ್ಟು ಸೇರಿದ್ದು ಇನ್ನೆರಡು ವರ್ಷಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯ ಸುಮಾರು 5 ಸಾವಿರ ರೈತರನ್ನು ಇದರೊಳಗೆ ತರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಸಾವಯವ ಕೃಷಿ ಪದ್ಧತಿಯಲ್ಲಿ ಹಣ್ಣು, ತರಕಾರಿಗಳನ್ನು ಬೆಳೆಯುವ ಹೆಗ್ಗವಾಡಿಪುರ ಶಿವಕುಮಾರ್, ಜನರು ಆರೋಗ್ಯದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಸಾವಯವ ಬೆಳೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಮಾದರಿಯಲ್ಲಿ ಜೀವಾಮೃತ ಗೊಬ್ಬರಗಳನ್ನು ಬಳಸಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಹಣ್ಣು, ತರಕಾರಿ ಬೆಳೆಯುತ್ತೇವೆ. ನಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ನಮ್ಮದೇ ಮಾರುಕಟ್ಟೆ ಮತ್ತು ಬ್ರಾಂಡ್ ಇದ್ದರೆ ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ.

ಅಮೃತ ಭೂಮಿಯ ಚುಕ್ಕಿ ನಂಜುಂಡಸ್ವಾಮಿ, ಸರ್ಕಾರ ರೈತರ ಭೂಮಿಗಳನ್ನು ಕಸಿದುಕೊಳ್ಳಲು ನೋಡುತ್ತಿರುವಾಗ ಕಾರ್ಪೊರೇಟರ್ ಗಳು, ಖಾಸಗೀಕರಣ ಮಾಡಲು ನೋಡುತ್ತಿರುವ ಸಂದರ್ಭದಲ್ಲಿ ರೈತರು ತಮ್ಮದೇ ಸ್ವಂತ ಆಲೋಚನೆಗಳಿಂದ ಈ ರೀತಿ ಮಾಡುತ್ತಿರುವುದು ಉತ್ತಮವಾಗಿದೆ ಎನ್ನುತ್ತಾರೆ.

ಈ ಸಾವಯವ ಉತ್ಪನ್ನ ಮಾರುಕಟ್ಟೆಯಲ್ಲಿ ಹಾಪ್ ಕಾಮ್ಸ್ ಗಳಿಗಿಂತ 5ರಿಂದ 10 ಶೇಕಡಾದಷ್ಟು ಹೆಚ್ಚು ಬೆಲೆ ಸಿಗುತ್ತದೆ. ಅವುಗಳಲ್ಲಿ ಶೇಕಡಾ 80ರಷ್ಟು ಹಣವನ್ನು ಅವರ ಖಾತೆಗಳಲ್ಲಿ ಠೇವಣಿ ಇರಿಸಲಾಗುತ್ತದೆ. ಯಶಸ್ವಿ ಸಾವಯವ ರೈತರಿಗೆ ತರಬೇತಿ, ಗದ್ದೆಗಳಲ್ಲಿ ಪ್ರಯೋಗ, ಕಡಿಮೆ ವೆಚ್ಚದಲ್ಲಿ ಕೃಷಿ ಹೇಗೆ ಮಾಡಬಹುದೆಂದು ತಿಳಿಸಿಕೊಡಲಾಗುವುದು ಎಂದು ರೈತಮುಖಂಡರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com