ಪಾಸ್, ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ಮಿತಿ ಏರಿಕೆಗೆ ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರ ಒತ್ತಾಯ  

ಉದ್ಯೋಗಿಗಳಿಗಾಗಿಯೇ ಪ್ರಾರಂಭಿಸಲಾಗಿರುವ ಬೆಂಗಳೂರು- ಮೈಸೂರು ನಡುವಿನ ವಿಶೇಷ ರೈಲುಗಳಲ್ಲಿ ಪಾಸ್ (ಸೀಸನ್ ಟಿಕೆಟ್, ಪಾಸ್) ಅಥವಾ ಟಿಕೆಟ್ ಕಾಯ್ದಿರಿಸಲು ವಿಧಿಸಲಾಗಿರುವ ಮಿತಿಯನ್ನು ಏರಿಕೆ ಮಾಡಲು ಪ್ರಯಾಣಿಕರ ಒತ್ತಡ ಹೆಚ್ಚಿದೆ. 
ಪಾಸ್, ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ಮಿತಿ ಏರಿಕೆಗೆ ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರ ಒತ್ತಾಯ
ಪಾಸ್, ಆನ್ ಲೈನ್ ಟಿಕೆಟ್ ಕಾಯ್ದಿರಿಸುವ ಮಿತಿ ಏರಿಕೆಗೆ ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರ ಒತ್ತಾಯ

ಬೆಂಗಳೂರು:  ಉದ್ಯೋಗಿಗಳಿಗಾಗಿಯೇ ಪ್ರಾರಂಭಿಸಲಾಗಿರುವ ಬೆಂಗಳೂರು- ಮೈಸೂರು ನಡುವಿನ ವಿಶೇಷ ರೈಲುಗಳಲ್ಲಿ ಪಾಸ್ (ಸೀಸನ್ ಟಿಕೆಟ್, ಪಾಸ್) ಅಥವಾ ಟಿಕೆಟ್ ಕಾಯ್ದಿರಿಸಲು ವಿಧಿಸಲಾಗಿರುವ ಮಿತಿಯನ್ನು ಏರಿಕೆ ಮಾಡಲು ಪ್ರಯಾಣಿಕರ ಒತ್ತಡ ಹೆಚ್ಚಿದೆ.

ಚಾಮುಂಡಿ ಎಕ್ಸ್ ಪ್ರೆಸ್ ಸಮಯಕ್ಕೆ ಬದಲಾವಣೆಗೊಂಡಿರುವ ಈ ವಿಶೇಷ ರೈಲುಗಳು ಶೇ.60 ರಷ್ಟು ಭರ್ತಿಯಾಗಿ ಸಂಚರಿಸುತ್ತಿವೆ. ಆದರೆ ಸೀಸನ್ ಟಿಕೆಟ್ ಅಥವಾ ಟಿಕೆಟ್ ಕಾಯ್ದಿಸಿರುವ ಮಿತಿಯನ್ನು ಏರಿಕೆ ಮಾಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. 

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಸೋಂಕಿತರ ಸಂಪರ್ಕ ಪತ್ತೆ ಮಾಡುವ ಪದ್ಧತಿ ಹೊಂದಿತ್ತು. ಆಗಿನ ದಿನಗಳಲ್ಲಿ ತಿಂಗಳಿಗೆ 12  ಟಿಕೆಟ್ ನ್ನು ಮಾತ್ರ ಕಾಯ್ದಿರಿಸಲು ಸಾಧ್ಯವಾಗುವಂತೆ ಮಿತಿಯನ್ನು ವಿಧಿಸಲಾಗಿತ್ತು. ಅದರೆ ಈಗ ಸರ್ಕಾರ ಕಾಂಟ್ಯಾಕ್ಟ್ ಟ್ರೇಸಿಂಗ್ ನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇತ್ತ ಸೀಸನ್ ಟಿಕೆಟ್ (ಸೀಸನ್ ಪಾಸ್) ಗೂ ಅನುಮತಿ ನೀಡುತ್ತಿಲ್ಲ. ಟಿಕೆಟ್ ಕಾಯ್ದಿರಿಸುವ ಮಿತಿಯನ್ನೂ ಏರಿಕೆ ಮಾಡುತ್ತಿಲ್ಲ. ಇದರಿಂದಾಗಿ ಬೆಂಗಳೂರು-ಮೈಸೂರು ನಡುವೆ ದಿನನಿತ್ಯ ಅಥವಾ ಆಗಾಗ್ಗೆ ಸಂಚರಿಸುವ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ ಎನ್ನುತ್ತಾರೆ ರೈಲ್ವೆ ಕಾರ್ಯಕರ್ತ, ಮೈಸೂರು ಗ್ರಾಹಕ ಪರಿಷತ್ ನ ಎಸ್ ಯೋಗೇಂದ್ರ. 
 
ಈಗ ಪ್ರಸ್ತುತ ಎರಡೂ ನಗರಗಳ ನಡುವೆ ಸಂಪರ್ಕ ಕಲ್ಪಿಸಲು 12 ರೈಲುಗಳು ಸಂಚರಿಸುತ್ತಿವೆ. ಈ ಎಲ್ಲಾ ರೈಲುಗಳಲ್ಲಿಯೂ ಕಾಯ್ದಿರಿಸಲಾದ ಟಿಕೆಟ್ ನ್ನು ಮಾತ್ರ ಅನುಮತಿಸಲಾಗುತ್ತಿದೆ. 

ಈ ರೈಲುಗಳಲ್ಲಿ ದಿನ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಟಿಕೆಟ್ ನ್ನು ಕಾಯ್ದಿರಿಸಲು ಮಾತ್ರವೇ ಅವಕಾಶವಿರುವುದರಿಂದ, ಟಿಕೆಟ್ ಕಾಯ್ದಿರಿಸುವ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಎಸ್ ಯೋಗೇಂದ್ರ ಆಗ್ರಹಿಸಿದ್ದಾರೆ. 

ಆಧಾರ್ ನೊಂದಿಗೆ ಜೋಡಣೆಯಾಗಿರುವ ಐಆರ್ ಸಿಟಿಸಿ ಖಾತೆಗಳಿಗೆ 12 ಟಿಕೆಟ್ ( ನ್ನು ಕಾಯ್ದಿರಿಸಲು ಅವಕಾಶವಿದ್ದರೆ, ಜೋಡಣೆಯಾಗದ ಖಾತೆಗಳಿಗೆ 6 ಟಿಕೆಟ್ ನ್ನು ಮಾತ್ರ ಕಾಯ್ದಿರಿಸಬಹುದಾಗಿದೆ. ಉಳಿದ ದಿನಗಳಲ್ಲಿ ಪ್ಯಾಸೆಂಜರ್ ರಿಸರ್ವೇಷನ್ ವ್ಯವಸ್ಥೆಯಲ್ಲಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ ಇದರಿಂದ ಹೆಚ್ಚು ಸಮಯ ಹಾಳಾಗುತ್ತದೆ ಎಂಬುದು ಪ್ರಯಾಣಿಕರ ಅಳಲಾಗಿದೆ. 

ಒಮ್ಮೆ ಈ ರೀತಿ ಟಿಕೆಟ್ ಕಾಯ್ದಿರಿಸಿ ಸಂಚರಿಸಬೇಕಾದರೆ 80 ರೂಪಾಯಿ ಖರ್ಚಾಗಲಿದೆ ಆದರೆ ತಿಂಗಳಿಗೆ ಒಮ್ಮೆ ಸೀಸನ್ ಪಾಸ್ ಖರೀದಿಸಿದರೆ ಎಕ್ಸ್ ಪ್ರೆಸ್ ರೈಲುಗಳಲ್ಲಿ 525 ರೂಪಾಯಿ ಹಾಗೂ ಸೂಪರ್ ಫಾಸ್ಟ್ ರೈಲುಗಳಲ್ಲಿ 750 ರೂಪಾಯಿ ಖರ್ಚಾಗಲಿದೆ. ಮೊದಲೇ ವೇತನ ಕಡಿಮೆ ಇರುವ ಕಾಲದಲ್ಲಿ ಇದು ಬಹುತೇಕ ಮಂದಿಗೆ ಇದು ಹೆಚ್ಚಿನ ಹೊರೆಯಾಗಲಿದೆ ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. 

ಪ್ರಯಾಣಿಕರ ಸಂಖ್ಯೆ ಸುಧಾರಣೆಯಾಗಿದೆಯೇ ಎಂಬುದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ರೈಲ್ವೆ ವಿಭಾಗದ ಪಿಆರ್ ಒ ಪ್ರಿಯಾ ಶೆಟ್ಟಿ, ಚಾಮುಂಡಿ ರೈಲಿನ ಬದಲಾಗಿ ಅದೇ ಸಮಯಕ್ಕೆ ಸಂಚರಿಸುತ್ತಿರುವ ವಿಶೇಷ ರೈಲುಗಳು ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಈಗ ಉತ್ತಮಗೊಂಡಿದ್ದು ಶೇ.60 ರಷ್ಟು ಭರ್ತಿಯಾಗಿ ಸಂಚರಿಸಲಿದೆ. ಕೆಲವೊಮ್ಮೆ ಶೇ.80, 99 ರಷ್ಟು ಭರ್ತಿಯಾಗಿದ್ದಿದೆ ಎನ್ನುತ್ತಾರೆ. 

ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸಲು ರೈಲ್ವೆ ಮಂಡಳಿ ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ ಮಾಡುವುದರ ಬಗ್ಗೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದೆ. ಸೀಸನ್ ಪಾಸ್, ಆನ್ ಲೈನ್ ನಲ್ಲಿ ಹೆಚ್ಚುವರಿ ಟಿಕೆಟ್ ಗಳ ಕಾಯ್ದಿರಿಸುವಿಕೆ ಸೌಲಭ್ಯವನ್ನೂ ಪರಿಗಣಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com