ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ರೇವ್ ಪಾರ್ಟಿಗಳಿಗೆ ಹಣ ನೀಡುತ್ತಿದ್ದ ಆದಿತ್ಯ ಆಳ್ವ- ಸಿಸಿಬಿ ಪೊಲೀಸರು

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ಆಳ್ವ ರೇವ್ ಪಾರ್ಟಿಗಳಿಗೆ ಹಣ ನೀಡುತ್ತಿದ್ದರು ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ಆಳ್ವ ರೇವ್ ಪಾರ್ಟಿಗಳಿಗೆ ಹಣ ನೀಡುತ್ತಿದ್ದರು ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ದಾಖಲಿಸಿಕೊಂಡಿರುವ ಎಫ್ಐಆರ್ ನಲ್ಲಿ ಆದಿತ್ಯ ಆಳ್ವ 6ನೇ ಆರೋಪಿಯಾಗಿದ್ದು, ರೇವ್ ಪಾರ್ಟಿಗಳಲ್ಲಿ ಜನರ ಗಮನ ಸೆಳೆಯಲು ವಿದೇಶದಿಂದ ಮಹಿಳೆಯರನ್ನು ಕರೆತರಲು ಆದಿತ್ಯ ಆಳ್ವ ಹಣ ನೀಡುತ್ತಿದ್ದರು ಎಂದು ತಿಳಿದುಬಂದಿದೆ. 

ಫೋನ್ ಕಾಲ್ ಮೂಲಕವೇ ಪಾರ್ಟಿ ಆಯೋಜನೆಗೊಳಿಸಿ ಬಳಿಕ ಪಾರ್ಟಿಗಳಿಗೆ ಹೆಚ್ಚೆಚ್ಚು ಜನರು ಆಕರ್ಷಿತಗೊಳಿಸಲು ವಿದೇಶಗಳಿಂದ ಮಹಿಳೆಯರನ್ನು ಕರೆ ತರಲಾಗುತ್ತಿತ್ತು. ಇದಕ್ಕೆ ಆದಿತ್ಯ ಆಳ್ವ ಹಣ ನೀಡುತ್ತಿದ್ದ. ಅಲ್ಲದೆ, ಡ್ರಗ್ಸ್ ಪೆಡ್ಲರ್ ಗಳೊಂದಿಗೂ ನಂಟು ಹೊಂದಿದ್ದ. ಅಲ್ಲದೆ 5 ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸೆಪ್ಟೆಂಬರ್ 15 ರಂದು, ಸಿಸಿಬಿ ಹೆಬ್ಬಾಳದಲ್ಲಿರುವ ಆಳ್ವಾ ಅವರ ಕುಟುಂಬ ಆಸ್ತಿಯಾಗಿರುವ ‘ಹೌಸ್ ಆಫ್ ಲೈಫ್’ ಮೇಲೆ ದಾಳಿ ನಡೆಸಿ ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದರು ಎಂದು ತಿಳಿದುಬಂದಿದೆ. 

ಈ ನಡುವೆ ಸಂಜಯ್ ನಗರ ಪೊಲೀಸರು ಶನಿವಾರ ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಡಾಲರ್ಸ್ ಕಾಲೋನಿಯಲ್ಲಿರುವ ಅಪಾರ್ಟ್‌ಮೆಂಟ್ ವೊಂದರ ಮೇಲೆ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ವರುಣ್ (45) ಮತ್ತು ವಿನೋದ್ (31) ಎಂದು ಗುರ್ತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com