ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾನಮತ್ತ ಚಾಲಕನಿಂದ ಸರಣಿ ಅಪಘಾತ: ಇಬ್ಬರ ಸಾವು, ಓರ್ವನಿಗೆ ಗಂಭೀರ ಗಾಯ

ಪಾನಮತ್ತ ಕಾರುಚಾಲಕನೋರ್ವ ಸರಣಿ ಅಪಘಾತಮಾಡಿದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿ ಓರ್ವ ಗಾಯಗೊಂಡಿರುವ ಘಟನೆ ಕೆ.ಆರ್ ಪೇಟೆ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಮತ್ತು ಪಟ್ಟಣದ ಎಲ್.ಐ.ಸಿ ಕಚೇರಿ ಮುಂಭಾಗ ಇಂದು ಸಂಜೆ ನಡೆದಿದೆ.

ಮಂಡ್ಯ: ಪಾನಮತ್ತ ಕಾರುಚಾಲಕನೋರ್ವ ಸರಣಿ ಅಪಘಾತಮಾಡಿದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿ ಓರ್ವ ಗಾಯಗೊಂಡಿರುವ ಘಟನೆ ಕೆ.ಆರ್ ಪೇಟೆ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಮತ್ತು ಪಟ್ಟಣದ ಎಲ್.ಐ.ಸಿ ಕಚೇರಿ ಮುಂಭಾಗ ಇಂದು ಸಂಜೆ ನಡೆದಿದೆ.

ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಶಿವಣ್ಣೇಗೌಡರ ಮಗ ಸತೀಶ್(40), ಮತ್ತು ಅನುವಿನಕಟ್ಟೆ-ಕೆರೆಕೋಡಿ ನಿವಾಸಿ ಪ್ರಭಾಕರ್(42) ಎಂಬುವವರೇ ಸರಣಿ ಅಪಘಾತದಲ್ಲಿ ಮೃತಪಟ್ಟಿರುವ ದುರ್ದೈವಿಗಳಾಗಿದ್ದು ಶಿವು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಮಂಡ್ಯದ ತಾವರೆಕೆರೆ ನಿವಾಸಿ ಕಿರಣ್ ಕುಮಾರ್ ಎಂಬಾತನೇ ಪಾನಮತ್ತನಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿರುವ ಆರೋಪಿಯಾಗಿದ್ದಾನೆ. 

 ಹೊನ್ನೇನಹಳ್ಳಿ ಗೇಟ್ ಅಪಘಾತದಲ್ಲಿ ಗಾಯಗೊಂಡಿದ್ದ ಪಟ್ಟಣದ ಜಯನಗರ ಬಡಾವಣೆಯ ಶಿವಣ್ಣೇಗೌಡರ ಮಗ ಸತೀಶ್(೪೦), ಮತ್ತು ಅನುವಿನಕಟ್ಟೆ-ಕೆರೆಕೋಡಿ ನಿವಾಸಿ ಪ್ರಭಾಕರ್(42)ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಎಲ್.ಐ.ಸಿ ಕಚೇರಿ ಬಳಿ ನಡೆದ ಅಪಘಾತದಲ್ಲಿ ಇನ್ನೋರ್ವ ಪಟ್ಟಣದ ನಿವಾಸಿ ಶಿವು ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆ ವಿವರ:
ಭಾನುವಾರ ಸಂಜೆ ಸುಮಾರು ೪.೫೫ ರ ಸಮಯದಲ್ಲಿ ಮಂಡ್ಯದ ತಾವರೆಕೆರೆ ನಿವಾಸಿ ಕಿರಣ್ ಕುಮಾರ್ ಎಂಬಾತ ಪಾನಮತ್ತನಾಗಿ ಮಂಡ್ಯ ಕಡೆಯಿಂದ ಕೆಆರ್‌ಪೇಟೆ ಕಡೆಗೆ ತನ್ನ ಹೊಸ ಕಾರನ್ನು ಓಡಿಸಿಕೊಂಡು ಬರುತ್ತಿ ದ್ದ, ಈ ವೇಳೆ ಹೊನ್ನೇನಹಳ್ಳಿ ಗೇಟ್ ಬಳಿ ಕೆ.ಆರ್. ಪೇಟೆ ಕಡೆಗೆ ತಮ್ಮ ಬೈಕಿನಲ್ಲಿ ಬರುತ್ತಿದ್ದ ಸತೀಶ್ ಮತ್ತು ಪ್ರಭಾಕರ್ ಅವರಿಗೆ  ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ, ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಮತ್ತು ಪ್ರಭಾಕರ್ ಮೃತಪಟ್ಟಿದ್ದಾರೆ. 

ಹೊನ್ನೇನಹಳ್ಳಿ ಗೇಟ್‌ನಲ್ಲಿ ಇಬ್ಬರಿಗೆ ಡಿಕ್ಕಿ ಹೊಡೆದ ನಂತರ ಪಟ್ಟಣದ ಎಲ್.ಐ.ಸಿ. ಕಚೇರಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಶಿವು ಎಂಬುವವರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು  ಕಾರನ್ನು ಅಡ್ಡಗಟ್ಟಿ  ಕಾರಿನ ಚಾಲಕ ಕಿರಣ್‌ಕುಮಾರ್‌ನನ್ನು ಹಿಡಿದು ಥಳಿಸಿದರಲ್ಲದೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರು ಸರಣಿ ಅಪಘಾತಕ್ಕೆ ಕಾರಣವಾದ ಕಾರನ್ನು ವಶಕ್ಕೆ ಪಡೆದು ಆರೋಪಿ ಕಿರಣ್ ಕುಮಾರ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಾಗಯ್ಯ

Related Stories

No stories found.

Advertisement

X
Kannada Prabha
www.kannadaprabha.com