ಕರ್ನಾಟದಲ್ಲಿ ಕಳೆದೊಂದು ವರ್ಷದಲ್ಲಿ ಎಸ್‌ಸಿ, ಎಸ್‌ಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಶೇ.61ರಷ್ಟು ಹೆಚ್ಚಳ!

ರಾಜ್ಯದಲ್ಲಿ ಎಸ್‌ಸಿ / ಎಸ್‌ಟಿ  ಸಮುದಾಯಕ್ಕೆ ಸೇರಿದವರ ಮೇಲೆ ನಡೆದ ಅತ್ಯಾಚಾರದ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ 4,162ರಷ್ಟಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮೂಲಗಳು ಬಹಿರಂಗಪಡಿಸಿದೆ.
ಕರ್ನಾಟದಲ್ಲಿ ಕಳೆದೊಂದು ವರ್ಷದಲ್ಲಿ ಎಸ್‌ಸಿ, ಎಸ್‌ಟಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಶೇ.61ರಷ್ಟು ಹೆಚ್ಚಳ!

ಮೈಸೂರು: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ದಲಿತ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಸಹ ಎಸ್‌ಸಿ / ಎಸ್‌ಟಿ  ಸಮುದಾಯಕ್ಕೆ ಸೇರಿದವರ ಮೇಲೆ  ನಡೆದ ಅತ್ಯಾಚಾರದ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ 4,162ರಷ್ಟಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮೂಲಗಳು ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಲಿತ ಸಮುದಾಯದವರ ಮೇಲೆ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅಪರಾಧ ಕೃತ್ಯಗಳು ವರದಿಯಾಗಿದೆ.

2018 ರಲ್ಲಿ ಎಸ್‌ಸಿ / ಎಸ್‌ಟಿ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ 130 ಆಗಿದ್ದು, ಇದು ಕೇವಲ ಒಂದು ವರ್ಷದಲ್ಲಿ 61.5% ರಷ್ಟು ಹೆಚ್ಚಾಗಿದೆ.  2019 ರಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹಾ  ಸುಮಾರು 210 ಪ್ರಕರಣಗಳು ದಾಖಲಾಗಿವೆ. ಏತನ್ಮಧ್ಯೆ, ಎಸ್‌ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ 1989)  ಅಡಿಯಲ್ಲಿ ದಾಖಲಾದ ಪ್ರಕ್ರಣಗಳ ಸಂಖ್ಯೆ 2018ರಲ್ಲಿ 1,219, 2019ರಲ್ಲಿ 1,187  ಹಾಗೂ 2020ರ ಆಗಸ್ಟ್ 31 ರವರೆಗೆ 899 ಆಗಿದೆ ಎಂದು ಮಾಹಿತಿ ಹೇಳಿದೆ.

ಕರ್ನಾಟಕದಲ್ಲಿ ಎಸ್‌ಸಿ / ಎಸ್‌ಟಿ ಮಹಿಳೆಯರ ಮೇಲೆ 428 ಅತ್ಯಾಚಾರ ಪ್ರಕರಣಗಳು ಮತ್ತು 263 ಕೊಲೆ ಪ್ರಕರಣಗಳು 2018 ರ ಜನವರಿಯಿಂದ 2020 ಆಗಸ್ಟ್ 31 ರವರೆಗೆ ದಾಖಲಾಗಿದ್ದು, ಇದರಲ್ಲಿನ ಆರೋಪಿಗಳೆಲ್ಲಾ ಇತರೆ ಜಾತಿಗೆ ಸೇರಿದವರಾಗಿದ್ದಾರೆ. ಕೊರೋನಾ ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ಮಧ್ಯೆ ರಾಜ್ಯದಲ್ಲಿ ಅಪರಾಧಗಳು ಇಳಿಮುಖವಾಗಿದ್ದರೂ, ಲಭ್ಯವಿರುವ ದತ್ತಾಂಶವು ಕಳೆದ ಎಂಟು ತಿಂಗಳಲ್ಲಿ ರಾಜ್ಯವು 88 ಅತ್ಯಾಚಾರ ಪ್ರಕರಣಗಳು ಮತ್ತು 45 ಕೊಲೆ ಪ್ರಕರಣಗಳನ್ನು ದಾಖಲಿಸಿದ್ದಾಗಿ ಹೇಳಿದೆ. ಹಾಗಾಗಿ ಎಸ್‌ಸಿ / ಎಸ್‌ಟಿಗಳ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಿನ ಸುಧಾರಣೆ ಅಥವಾ ವ್ಯತ್ಯಾಸಗಳು ಕಂಡುಬಂದಿಲ್ಲ.

“ಎಸ್‌ಸಿ / ಎಸ್‌ಟಿಗಳ ವಿರುದ್ಧದ ಅಪರಾಧಗಳನ್ನು ಸರಿಯಾಗಿ ನಿರ್ವಹಿಸದಿರುವುದು ವಿಷಾದಕರ. ಶಿಕ್ಷೆಯ ಪ್ರಮಾಣ ಕೂಡ ಕಡಿಮೆ ಇದ್ದು, ಕಳಪೆ ಪ್ರತಿಕ್ರಿಯೆಮತ್ತು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು, ಸಾರ್ವಜನಿಕ ಅಭಿಯೋಜಕರು ವಿಫಲರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ಸಂದರ್ಭಗಳಲ್ಲಿ, ಪೊಲೀಸರು 'ಬಿ' ರಿಪ್ರೋರ್ಟ್ ಅನ್ನು  ಸಲ್ಲಿಸುತ್ತಾರೆ, ಅದು ಪರೋಕ್ಷವಾಗಿ ಇನ್ನಷ್ಟು ಘಟನೆಗಳಿಗೆ ಪ್ರಚೋದನೆ ನೀಡುತ್ತದೆ. "ಎಂದು ಎಸ್ಸಿ ಮತ್ತು ಎಸ್ಟಿಗಳ ಮೇಲ್ವಿಚಾರಣೆ ಹಾಗೂ ಬಲಪಡಿಸುವಿಕೆ (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆ ಸಮಿತಿಯ ರಾಜ್ಯ ಕನ್ವೀನರ್ ಪಿ ಯಶೋಧಾ ಹೇಳಿದ್ದಾರೆ. 

"ಹೆಚ್ಚಿನ ಜಿಲ್ಲೆಗಳಲ್ಲಿ  ಜಿಲ್ಲಾ ವಿಜಿಲೆನ್ಸ್ ಮತ್ತು ಮಾನಿಟರಿಂಗ್ ಕಮಿಟಿ ಸಭೆಗಳನ್ನು ನಡೆಸಿಲ್ಲ, ಅದು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಬೇಕಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ, ಈ ವಿಷಯದಲ್ಲಿ ರಾಜ್ಯಮಟ್ಟದ ಸಭೆ ಕೂಡ ನಡೆದಿಲ್ಲ, ”ಎಂದು ಅವರು ಗಮನ ಸೆಳೆದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com