ನಗರದ ರೈಲ್ವೆ ಹಳಿಗಳ ಸ್ವಚ್ಛತೆಗೆ ಬಿಬಿಎಂಪಿ ಮುಂದು

ಹಳಿಗಳ ಮೇಲೆ ಕಸದ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ  ಸ್ವಚ್ಛಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಮಾರ್ಷಲ್ ಗಳನ್ನು ನಿಯೋಜಿಸಲಿದ್ದು, ಕ್ಯಾಮೆರಾ ಅಳವಡಿಸಲು ಯೋಜಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈಲ್ವೆ ಇಲಾಖೆಯ ಮನವಿಯ ಮೇರೆಗೆ ಬಿಬಿಎಂಪಿ ನಗರದ ರೈಲು ಟ್ರ್ಯಾಕ್ ಗಳನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ಹಳಿಗಳ ಮೇಲೆ ಕಸದ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ  ಸ್ವಚ್ಛಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಮಾರ್ಷಲ್ ಗಳನ್ನು ನಿಯೋಜಿಸಲಿದ್ದು, ಕ್ಯಾಮೆರಾ ಅಳವಡಿಸಲು ಯೋಜಿಸುತ್ತಿದೆ.

ಕೆಂಗೇರಿಯಿಂದ ಮೆಜಸ್ಚಿಕ್ ವರೆಗೆ ಸುಮಾರು 20 ಸ್ಥಳಗಳನ್ನು ಗುರುತಿಸಿದ್ದೇವೆ, ಮನೆ ಬಾಗಿಲಿಗೆ ಕಸವನ್ನು ಸಂಗ್ರಹಿಸದಿರುವ ಪ್ರದೇಶಗಳನ್ನು ಗುರುತಿಸಿದ್ದು ಜನರು ಅದನ್ನು ಹಳಿಗಳ ಉದ್ದಕ್ಕೂ ಎಸೆಯುವಂತೆ ಮಾಡಲಾಗುತ್ತಿದೆ, ಹೀಗಾಗಿ ಆ ಪ್ರದೇಶಗಳ ಮಾಹಿತಿ ಪಡೆಯುವಂತೆ ಕೇಳಲಾಗಿದೆ.

ಇನ್ನು ಎರಡು ವಾರಗಳಲ್ಲಿ ಎಲ್ಲಾ ಪ್ರದೇಶಗಳು ಸ್ವಚ್ಚಗೊಳ್ಳಲಿವೆ ಎಂದು ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಣದೀಪ್ ಹೇಳಿದ್ದಾರೆ.

ಯಶವಂತಪುರ ದಿಂದ ಆರ್ ಆರ್ ನಗರಕ್ಕೆ ಮತ್ತು ಹೂಡಿ, ಹಾಗೂ ಕೆಆರ್ ಪುರ ಮತ್ತು ವೈಟ್ ಫೀಲ್ಡ್ ರೈಲ್ವೆ ಟ್ರ್ಯಾಕ್ ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೈಲ್ವೆ ವಿಭಾಗಿಯ ಮ್ಯಾನೇಜರ್ ಮುಖ್ಯ ಕಾರ್ಯದರ್ಶಿಗೆ ಹಳಿ ಸ್ವಚ್ಛಗೊಳಿಸುವಂತೆ ಪತ್ರ ಬರೆದ ನಂತರ ಬಿಬಿಎಂಪಿ ಕಸ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com