ಡಿಕೆ ಶಿವಕುಮಾರ್ ಆಪ್ತ ಸಚಿನ್ ನಾರಾಯಣ್ ಮನೆ ಮೇಲೂ ಸಿಬಿಐ ದಾಳಿ: ದಾಖಲೆ ವಶ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಉದ್ಯಮಿ ಸಚಿನ್ ನಾರಾಯಣ್ ಅವರ ಮನೆ ಮೇಲೂ ಸಿಬಿಐ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.
Published: 06th October 2020 08:42 AM | Last Updated: 06th October 2020 08:42 AM | A+A A-

ಡಿ ಕೆ ಶಿವಕುಮಾರ್
ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಉದ್ಯಮಿ ಸಚಿನ್ ನಾರಾಯಣ್ ಅವರ ಮನೆ ಮೇಲೂ ಸಿಬಿಐ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.
ನಗರದ ಬಿ.ಎಂ. ರಸ್ತೆಯ ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿಯಿರುವ ಮನೆ ಮೇಲೆ 9 ಅಧಿಕಾರಿಗಳ ತಂಡ ದಾಳಿ ನಡೆಸಿ, ಬೆಳಗ್ಗೆ 6.30ಕ್ಕೆ ಆಗಮಿಸಿ ಸಂಜೆ 5.30ರ ವರೆಗೆ ಪರಿಶೀಲನೆ ನಡೆಸಿತು.ಸಚಿನ್ ಒಡೆತನದ ಸಂಸ್ಥೆಗಳ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿ, ಪರಿಶೀಲನೆ ಬಳಿಕ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಹೊರಟಿತು.
ಪ್ರತಿಷ್ಠಿತ ಉದ್ಯಮಿ ದಿ. ನಾರಾಯಣ್ ಅವರ ಕೊನೆಯ ಪುತ್ರ ಸಚಿನ್ ನಾರಾಯಣ್ ಅವರು ಶಿವಕುಮಾರ್ ಜತೆಗೆ ವ್ಯವಹಾರಗಳಲ್ಲಿ ಪಾಲುದಾರರಾಗಿದ್ದಾರೆ. ಸಚಿನ್ ಗೈರು ಹಾಜರಿಯಲ್ಲಿ ಅವರ ಸಹೋದರ ಚೇತನ್ ನಾರಾಯಣ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಹಿಂದೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಆದಾಗಲೂ ಸಚಿನ್ ನಿವಾಸದ ಮೇಲೂ ದಾಳಿ ನಡೆದಿತ್ತು.