ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾದಿಂದ ರಕ್ಷಿಸಿಕೊಳ್ಳಲು ಗ್ರಾಮವನ್ನೇ ಸ್ವಯಂ ಲಾಕ್ ಮಾಡಿಕೊಂಡ ಶಿವಮೊಗ್ಗದ ಹಳ್ಳಿ!

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದೆ, ಹೀಗಿರುವಾಗಲೇ  ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮ ಕೊರೋನಾವನ್ನು ದೂರವಿಡಲು 20 ದಿನ ಲಾಕ್ ಮಾಡಿದೆ.

ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದೆ, ಹೀಗಿರುವಾಗಲೇ  ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮ ಕೊರೋನಾವನ್ನು ದೂರವಿಡಲು 20 ದಿನ ಲಾಕ್ ಮಾಡಿದೆ. 

5 ಸಾವಿರ ಜನರಿರರುವ ಈ ಪಿಳ್ಳೇನಹಳ್ಳಿಯಲ್ಲಿ 1 ಸಾವಿರ ಮನೆಗಳಿವೆ, ನಾಲ್ಕು ಮಂದಿ ಸಾವನ್ನಪ್ಪಿದ ನಂತರ ಕೊರೋನಾ ಕೇಸ್ ಗಳು ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಿದೆ.

ಸ್ವಯಂ ಲಾಕ್ ಡೌನ್ ಮಾಡುವ ಸಂಬಂಧ ಸಿರಿಗೆರೆಯ ತರಳಬಾಳು ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಅವರು ಬಿಜೆಪಿ ಜಿಲ್ಲಾ ಅಧ್ಯಕ್ಷ ಎಚ್,ಸಿ ಕಲ್ಮುದ್ರಪ್ಪ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದ್ದಾರೆ. ಗ್ರಾಮದ ಮುಖಂಡ ಪಿಕೆ ರುದ್ರಪ್ಪ ಗ್ರಾಮಸ್ಥರ ಜೊತೆ ಚರ್ಚಿಸಿ ಹಳ್ಳಿಯಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳಲು ನಿರ್ಧರಿಸಿದ್ದಾರೆ.

ಸುರಕ್ಷತೆ ದೃಷ್ಟಿಯಿಂದ ನೆರೆಹೊರೆಯ ಯಾವುದೇ ಗ್ರಾಮಸ್ಥರು ಹಳ್ಳಿಗೆ ಕಾಲಿಡದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ. ಸಿರಿಗೆರೆ ಶ್ರೀಗಳ ಸಲಹೆಯಂತೆ ಗ್ರಾಮದಲ್ಲಿ ಲಾಕ್ ಡೌನ್ ಮಾಡಿದ್ದೇವೆ, ಜೀವವಿದ್ದರೇ ಜೀವನ ಮಾಡಬಹುದು, ಹೀಗಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6ಗಂಟೆವರೆಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ, ತುರ್ತು ಕೆಲಸ ಹೊರತುಪಡಿಸಿ ಯಾರೂ ಮನೆಯಿಂದ ಸುಮ್ಮನೆ ಆಚೆ ಬರಬಾರದು, ಅಕ್ಕ-ಪಕ್ಕದ ಮನೆಯವರ ಜೊತೆಯೂ  ಸಂಪರ್ಕವಿರಿಸಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಯಾವುದೇ ಸಭೆ ಸಮಾರಂಭ ನಡೆಸದಂತೆಯೂ ತಿಳಿಸಿದೆ.

ಎಲ್ಲರೂ ಬೆಳಗ್ಗೆ 10 ಗಂಟೆ ನಂತರ ಅಂಗಡಿ ತೆರೆಯದಿರಲು ಸ್ವಯಂ ನಿರ್ಧರಿಸಿದ್ದಾರೆ. ಮಾಸ್ಕ್ ಹಾಕಿಕೊಂಡು ರೈತರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ, ಸಂಬಂಧಿಕರು ಕೂಡ ಊರಿಗೆ ಬರುವಂತಿಲ್ಲ, ಇನ್ನೂ ಈ ನಡುವೆ ಎರಡು ಬಾರಿ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದು 40 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಕಿರಿಯ ಆರೋಗ್ಯಾಧಿಕಾರಿ ಮೋಹನಕುಮಾರಿ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com