ರೂ.57 ಲಕ್ಷ ಸಿಕ್ಕಿದ್ದೆಲ್ಲಿ?: ಸಿಬಿಐಗೆ ಡಿಕೆ.ಸುರೇಶ್ ಪ್ರಶ್ನೆ

ನಮ್ಮಗಳ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿ ವೇಳೆ ಸಿಕ್ಕಿರುವುದು ರೂ.6.78 ಲಕ್ಷ ಮಾತ್ರ. ಆದರೆ ರೂ.57 ಲಕ್ಷ ಸಿಕ್ಕಿರುವುದಾಗಿ ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಉಳಿದ 50.22 ಲಕ್ಷ ಎಲ್ಲಿ ಸಿಕ್ಕಿಗೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಡಿಕೆ.ಸುರೇಶ್ ಅವರು ಹೇಳಿದ್ದಾರೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ನಮ್ಮಗಳ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿ ವೇಳೆ ಸಿಕ್ಕಿರುವುದು ರೂ.6.78 ಲಕ್ಷ ಮಾತ್ರ. ಆದರೆ ರೂ.57 ಲಕ್ಷ ಸಿಕ್ಕಿರುವುದಾಗಿ ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಉಳಿದ 50.22 ಲಕ್ಷ ಎಲ್ಲಿ ಸಿಕ್ಕಿಗೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಡಿಕೆ.ಸುರೇಶ್ ಅವರು ಹೇಳಿದ್ದಾರೆ. 

ಸಿಬಿಐಗೆ ರೂ.57 ಲಕ್ಷ ಸಿಕ್ಕಿರುವ ಕುರಿತು ಮೊದಲಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. 

ಬಳಿಕ ಡಿ.ಕೆ.ಸುರೇಶ್ ಅವರು ಟ್ವೀಟ್ ಮಾಡಿ. ಸಿಬಿಐ ಅಧಿಕಾರಿಗಳು ಹೇಳಿರುವಂತೆ ನಮ್ಮ ಮನೆಯಲ್ಲಿ ರೂ.57 ಲಕ್ಷ ಸಿಕ್ಕಿಲ್ಲ. ಸಿಕ್ಕಿರುವುದು ರೂ.6.78 ಲಕ್ಷ ಮಾತ್ರ. ಅದರಲ್ಲಿ ನನ್ನ ದೆಹಲಿ ನಿವಾಸದಲ್ಲಿ ರೂ.1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ಮನೆಯಲ್ಲಿ ರೂ.1.71 ಲಕ್ಷ ಅವರ ಬೆಂಗಳೂರಿನ ಕಚೇರಿಯಲ್ಲಿ ರೂ.3.5 ಲಕ್ಷ ಸಿಕ್ಕಿರುವುದನ್ನು ಸಿಬಿಐನವರು ಖಾತ್ರಿ ಪಡೆಸಿದ್ದಾರೆ. 

ಇನ್ನು ನನ್ನ ಅಣ್ಣನ ದೆಹಲಿ ಮನೆ ಹಾಗೂ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿಲ್ಲ. ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ. ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಟಿ ಮತ್ತು ಇಡಿಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ ಸಿಬಿಐ ಸ್ಪಷ್ಟನೆಗೆ ತೆಗೆದುಕೊಂಡಿದೆ. ಇನ್ನು ಸಿಬಿಐ ರೂ.57 ಲಕ್ಷ ಸಿಕ್ಕಿದ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಉಳಿದ ರೂ.50.22 ಲಕ್ಷ ಎಲ್ಲಿ ಸಿಕ್ಕಿದೆ ಎಂಬುದನ್ನು ಸಿಬಿಐ ಸ್ಪಷ್ಟಪಡಿಸಲಿ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com