ಹಂಪಿಯಲ್ಲಿನ ಪ್ರವಾಸಿ ಗೈಡ್'ಗಳಿಗೆ ಶೀಘ್ರದಲ್ಲೇ ಸಮವಸ್ತ್ರ, ಐಡಿ ಕಾರ್ಡ್ ವಿತರಣೆ!

ಬಳ್ಳಾರಿಯ ಹಂಪಿಯಲ್ಲಿ ನಕರಿ ಪ್ರವಾಸಿ ಗೈಡ್ ಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ  ಪ್ರವಾಸಿ ಗೈಡ್(ಮಾರ್ಗದರ್ಶಿ)ಗಳಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿಗಳನ್ನು ನೀಡಲು ಮುಂದಾಗಿದೆ. 
ಹಂಪಿಯ ವಿರೂಪಾಕ್ಷ ದೇವಾಲಾಯದಲ್ಲಿರುವ ಪ್ರವಾಸಿಗರು
ಹಂಪಿಯ ವಿರೂಪಾಕ್ಷ ದೇವಾಲಾಯದಲ್ಲಿರುವ ಪ್ರವಾಸಿಗರು

ಬಳ್ಳಾರಿ: ಬಳ್ಳಾರಿಯ ಹಂಪಿಯಲ್ಲಿ ನಕರಿ ಪ್ರವಾಸಿ ಗೈಡ್ ಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ  ಪ್ರವಾಸಿ ಗೈಡ್(ಮಾರ್ಗದರ್ಶಿ)ಗಳಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿಗಳನ್ನು ನೀಡಲು ಮುಂದಾಗಿದೆ. 

ಕೆಲ ದಿನಗಳ ಹಿಂದಷ್ಟೇ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಅಧಿಕಾರಿಗಳು ಸಬೆ ನ ಡೆಸಿ ಮಾತುಕತೆ ನಡೆಸಿದ್ದು, ಸಭೆ ವೇಳೆ ಹಲವು ಪ್ರವಾಸಿ ಮಾರ್ಗದರ್ಶಿಗಳು ನಕಲಿ ಮಾರ್ಗದರ್ಶಿಗಳ ಹಾವಳಿ ಹೆಚ್ಚಾಗಿರುವುದರಿಂದ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದರು. 

ಇದರಂತೆ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಮಂಡಳಿಯು, ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡುವುದು, ಸಮವಸ್ತ್ರಗಳನ್ನು ನೀಡುವುದು ಹಾಗೂ ಐಡಿ ಕಾರ್ಡ್ (ಗುರುತಿನ ಚೀಟಿ)ಗಳನ್ನು ನೀಡಲು ಮುಂದಾಗಿದ್ದಾರೆ. 

ದಿನಗಳು ಕಳೆದಂತೆ ಹಂಪಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪ್ರತೀನಿತ್ಯ 2,000 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರವಾಸಿ ಮಾರ್ಗದರ್ಶಿಗಳಿಗೆ ಐಡಿ ಕಾರ್ಡ್, ತರಬೇತಿ ನೀಡುವುದು ಹಾಗೂ ಸಮವಸ್ತ್ರಗಳನ್ನು ನೀಡುವ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತದೆ. ತಾಂತ್ರಿಕ ಕಾರ್ಯಗಳು ಪೂರ್ಣಗೊಂಡ ನಂತರ ಪ್ರವಾಸಿ ಮಾರ್ಗದರ್ಶಿಗಳಿಗೆ ಸಮವಸ್ತ್ರವನ್ನು ನೀಡಲಾಗುತ್ತದೆ ಎಂದು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ (ಎಚ್‌ಡಬ್ಲ್ಯುಎಚ್‌ಎಎಂಎ) ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಸಮವಸ್ತ್ರ, ಐಡಿ ಕಾರ್ಡ್ ಅಷ್ಟೇ ಅಲ್ಲದೆ, ಪುಸ್ತಕಗಳನ್ನು ಪ್ರವಾಸಿ ಮಾರ್ಗದರ್ಶಿಗಳಿಗೆ ನೀಡಲಾಗುತ್ತದೆ. ಹಂಪಿಗೆ ಪ್ರವಾಸಿಗರನ್ನು ಕರೆದೊಯ್ಯುವ ವೇಳೆ ಹಂಪಿ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಲು ಈ ಪುಸ್ತಕ ಗೈಡ್'ಗಳಿಗೆ ಸಹಾಯ ಮಾಡುತ್ತವೆ. ಕೇವಲ ಹಂಪಿಯಷ್ಟೇ ಅಲ್ಲದೆ, ರಾಜ್ಯದ ಇತರೆ ಪ್ರವಾಸಿ ತಾಣಗಳಲ್ಲಿರುವ ಗೈಡ್ ಗಳಿಗೂ ಸಮವಸ್ತ್ರ ವಿತರಿಸುವ ಕುರಿತು ಚಿಂತನೆಗಳು ನಡೆಯುತ್ತಿವೆ. ಇದರಿಂದ ನಕಲಿ ಗೈಡ್ ಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com