ಡ್ರಗ್ಸ್ ದಂಧೆ: ರೌಡಿ ವಿರುದ್ಧ ಎನ್'ಡಿಪಿಎಸ್ ಕಾಯ್ದೆ ಪ್ರಯೋಗ
ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ರೌಡಿಯೊಬ್ಬನ ವಿರುದ್ಧ ಅಕ್ರಮ ಮಾದಕ ವಸ್ತು ಸಾಗಾಣಿಕೆ ತಡೆ ಕಾಯ್ದೆ (ಪಿಐಟಿ ಎನ್'ಡಿಪಿಎಸ್ ಕಾಯ್ದೆ-1988) ಪ್ರಯೋಗಿಸಿದ್ದಾರೆ.
Published: 07th October 2020 08:24 AM | Last Updated: 07th October 2020 08:24 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ರೌಡಿಯೊಬ್ಬನ ವಿರುದ್ಧ ಅಕ್ರಮ ಮಾದಕ ವಸ್ತು ಸಾಗಾಣಿಕೆ ತಡೆ ಕಾಯ್ದೆ (ಪಿಐಟಿ ಎನ್'ಡಿಪಿಎಸ್ ಕಾಯ್ದೆ-1988) ಪ್ರಯೋಗಿಸಿದ್ದಾರೆ.
ನಗರದಲ್ಲಿ ರೌಡಿಯೊಬ್ಬನ ಮೊದಲ ಬಾರಿಗೆ ಪಿಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಹಿಂದೆ ನೈಜೀರಿಯಾ ಪೆಡ್ಲರ್'ನನ್ನು ಇದೇ ಕಾಯ್ಜೆಯಡಿ ಬಂಧಿಸಿ ಸಿಸಿಬಿ ಪೊಲೀಸರು ಜೈಲಿಗೆ ಅಟ್ಟಿದ್ದರು. ಈ ಗೂಂಡಾ ಕಾಯ್ದೆ ಮಾದರಿಯ ಕಾಯ್ದೆ ಇದಾಗಿದ್ದು, ಒಂದು ವರ್ಷಗಳ ಪೆಡ್ಲರ್'ಗೆ ಜಾಮೀನು ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಳ್ಳಣ್ಣ ಗಾರ್ಡನ್ ನಿವಾಸಿ ಸೈಯದ್ ನಾಜೀಮ್ ಬಂಧಿತನಾಗಿದ್ದು, 2009ರಿಂದಲೂ ಗಾಂಜಾ ಮಾರಾಟದಲ್ಲಿ ಆತ ನಿರತನಾಗಿದ್ದ. ಈ ಸಂಬಂಧ ಆತನ ಮೇಲೆ 6 ಪ್ರಕರಣಗಳು ದಾಖಲಾಗಿವೆ. ಗಾಂಜಾ ಕೃತ್ಯದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿ ಮತ್ತೆ ಗಾಂಜಾ ಮಾರಾಟ ಚಟುವಟಿಕೆಯಲ್ಲಿ ಮುಂದುವರೆದಿದ್ದ. ಈ ಕೃತ್ಯಗಳ ಹಿನ್ನೆಲೆಯಲ್ಲಿ ಆತನ ವಿರುದ್ಧ ಕೆಜಿ ಹಳ್ಳಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.