ಕಲಬುರ್ಗಿ: ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ವಲಸೆ ಕಾರ್ಮಿಕನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಕುಖ್ಯಾತ ದರೋಡೆಕೋರನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Published: 07th October 2020 09:33 AM  |   Last Updated: 07th October 2020 09:34 AM   |  A+A-


Police Firing

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : UNI

ಕಲಬುರ್ಗಿ: ವಲಸೆ ಕಾರ್ಮಿಕನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಕುಖ್ಯಾತ ದರೋಡೆಕೋರನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಹೊರವಲಯದ ಸುಲ್ತಾನಪುರ ಬಳಿ ಈ ಘಟನೆ ನಡೆದಿದ್ದು, ಮೆಹಬೂಬ್ ನಗರ ನಿವಾಸಿ ಮುಬಿನ್ ಅಲಿಯಾಸ್ ಅಬ್ದುಲ್ ರೆಹಮಾನ್ (25) ಮೇಲೆ ಕಲಬುರಗಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸೋಮಲಿಂಗ್ ಗುಂಡು ಹಾರಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವಲಸೆ ಕಾರ್ಮಿಕನ ಮೊಬೈಲ್  ಕಿತ್ತುಕೊಳ್ಳಲು ಹೋಗಿ ಆರೋಪಿ ಮುದೀನ್ ಆತನನ್ನು ಕೊಲೆ ಮಾಡಿದ್ದ.   

ಕಳೆದ ರಾತ್ರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಮುಬಿನ್ ನನ್ನು ಬಂಧಿಸಿದ್ದ ಗ್ರಾಮೀಣ ಠಾಣೆ ಪೊಲೀಸರು ಬೆಳಿಗ್ಗೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಕರೆದೊಯ್ದಿದ್ದರು.ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ‌ಹೋಗಲು ಯತ್ನಿಸಿದ‌ ಮುಬಿನ್ ಕಾಲಿಗೆ ಗ್ರಾಮೀಣ ಠಾಣೆ ಪೊಲೀಸ್  ಇನ್ ಸ್ಪೆಕ್ಟರ್  ಸೋಮಲಿಂಗ ಕಿರದಳ್ಳಿ ಗುಂಡು ಹಾರಿಸಿದರು. ಆರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಇಬ್ಬರು ಪೊಲೀಸ್ ಕಾನ್ ಸ್ಟೆಬಲ್ ಗಳಿಗೆ ಗಾಯವಾಗಿದೆ.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp