ಐಜಿಎಸ್ ಟಿ ಬಾಕಿಯಲ್ಲಿ ಕರ್ನಾಟಕಕ್ಕೆ 1,400 ಕೋಟಿ ರೂಪಾಯಿ ಬಿಡುಗಡೆ

ಐಜಿಎಸ್ ಟಿಯಲ್ಲಿ ರಾಜ್ಯಕ್ಕೆ ಬರಬೇಕಿದ್ದ ಬಾಕಿ ಮೊತ್ತದಲ್ಲಿ ಭಾಗಶಃ ದೊರೆತಿದ್ದು 1,400 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಐಜಿಎಸ್ ಟಿ ಬಾಕಿಯಲ್ಲಿ ಕರ್ನಾಟಕಕ್ಕೆ 1,400 ಕೋಟಿ ರೂಪಾಯಿ ಬಿಡುಗಡೆ
ಐಜಿಎಸ್ ಟಿ ಬಾಕಿಯಲ್ಲಿ ಕರ್ನಾಟಕಕ್ಕೆ 1,400 ಕೋಟಿ ರೂಪಾಯಿ ಬಿಡುಗಡೆ

ಬೆಂಗಳೂರು: ಐಜಿಎಸ್ ಟಿಯಲ್ಲಿ ರಾಜ್ಯಕ್ಕೆ ಬರಬೇಕಿದ್ದ ಬಾಕಿ ಮೊತ್ತದಲ್ಲಿ ಭಾಗಶಃ ದೊರೆತಿದ್ದು 1,400 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 

ಸೆಪ್ಟೆಂಬರ್ ತಿಂಗಳ ಐಜಿಎಸ್ ಟಿ ಮೊತ್ತ ಇದಾಗಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಗಢ ರಾಜ್ಯಗಳಿಗೂ ಬರಬೇಕಿದ್ದ ಮೊತ್ತಕ್ಕಿಂತ ಕಡಿಮೆ ಹಣವನ್ನು ಬಿಡುಗಡೆ ಮಾಡಲಾಗಿದೆ. 

ರಾಜ್ಯಕ್ಕೆ 24,000 ಕೋಟಿ ರೂಪಾಯಿ ಐಜಿಎಸ್ ಟಿ ಪಾವತಿ ಮಾಡಬೇಕಾಗಿದ್ದು, 1,400 ಕೋಟಿಯಷ್ಟೇ ಬಿಡುಗಡೆಯಾಗಿದೆ. ಕೋವಿಡ್-19 ನಿಂದ ಉಂಟಾಗಿರುವ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಕೇಂದ್ರದಂದ ರಾಜ್ಯದ ಪಾಲಿನ ಹಣ ಬಿಡುಗಡೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ.

2017-18 ರ ತಪ್ಪು ಲೆಕ್ಕಾಚಾರದಿಂದಾಗಿ ಐಜಿಎಸ್ ಟಿ ಇತ್ಯರ್ಥದ ಮೊತ್ತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಕರ್ನಾಟಕ ಇದಕ್ಕೆ ಹೊರತಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬರಬೇಕಿದ್ದ 1,400 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ತಿಳಿಸಿದ್ದಾರೆ. ಐಜಿಎಸ್ ಟಿ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ 42 ನೇ ಜಿಎಸ್ ಟಿ ಪರಿಷತ್ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com