ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ; 3 ಲಕ್ಷ ರೂ. ವಶ

ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 3 ಲಕ್ಷ ರೂ.ನಗದು ಮತ್ತು 4 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 3 ಲಕ್ಷ ರೂ.ನಗದು ಮತ್ತು 4 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಜಿ.ಹಳ್ಳಿ ನಗರ ಇದಾಯತ್ ನಗರ 6ನೇ ಕ್ರಾಸ್ ಇಮ್ರಾನ್ ಪಾಷ (25), ಜಾಲಿ ಮೋಲಾ ರಾಣಸಿಂಗ್ ಬಿಡಿಜಿ ಲೈನ್ ಮುಹಮ್ಮದ್ ಇರ್ಫಾನ್ (27), ನ್ಯೂ ಗುಡದಹಳ್ಳಿ ನೆಹರೂ ರಸ್ತೆ 4ನೇ ಕ್ರಾಸ್ ಮುಜಾಮಿಲ್ ಅಹ್ಮದ್ (21), ಸರ್ವಜ್ಞನಗರ ಹೆಣ್ಣೂರು ಕ್ರಾಸ್, ಶಾರದಾ ಶಾಲೆ ಹತ್ತಿರ ಚಿಕ್ಕಲೇಔಟ್ ರೋಮನ್ ವಿಮಲ್ ರಾಜ್ (29) ಬಂಧಿತ ಆರೋಪಿಗಳು.

ಅ.8ರಂದು ಯುಎಇ ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅ.7ರಂದು ಕೊಲ್ಕತ್ತಾ ಮತ್ತು ಚೆನ್ನೈ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಈ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊ ಬೈಲ್ ಫೋನ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನು ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತ್ತಿರುವ ಒಬ್ಬ ವ್ಯಕ್ತಿ ಅ.8ರಂದು ಗೆದ್ದವರಿಗೆ ಹಣ ಕೊಡಲು ಮತ್ತು ಸೋತವರಿಂದ ಹಣ ಪಡೆಯಲು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಆರ್ ಟಿಓ ಕಚೇರಿ ಮುಂದೆ ಬರುವುದಾಗಿ ಭಾತ್ಮೀದಾರರಿಂದ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com