ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್'ನಿಂದ ರೂ.65 ಕೋಟಿ ದೇಣಿಗೆ

ಬಯೋಕಾನ್ ಫೌಂಡೇಷನ್ ಸಂಸ್ತೆ ತನ್ನ ಸಾಂಸ್ಥಿಕ ಹೊಣೆಗಾರಿಕಾ ನಿಧಿ ಅಡಿ ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ರೂ.65 ಕೋಟಿ ದೇಣಿಗೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಯೋಕಾನ್ ಫೌಂಡೇಷನ್ ಸಂಸ್ತೆ ತನ್ನ ಸಾಂಸ್ಥಿಕ ಹೊಣೆಗಾರಿಕಾ ನಿಧಿ ಅಡಿ ಹೆಬ್ಬಗೋಡಿ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ರೂ.65 ಕೋಟಿ ದೇಣಿಗೆ ನೀಡಿದೆ. 

ಮೆಟ್ರೋ 2ನೇ ಹಂತದಲ್ಲಿ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ (ರೀಚ್-5) ಮಾರ್ಗದಲ್ಲಿರುವ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದೆ. ಈ ಸಂಬಂಧ ಗುರುವಾರ ಬಿಎಂಆರ್'ಸಿಎಲ್ ವ್ಯವಸ್ಥಾಪ ನಿರ್ದೇಶಕ ಅಜಯ್ ಸೇಠ್ ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. 

ಬಯೋಕಾನ್ ಕೊಡುಗೆಯನ್ನು ಗುರುತಿಸಿ ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಎಂಬು ನಾಮಕರಣ ಮಾಡುವಂತೆಯೂ ರಾಜ್ಯಸರ್ಕಾರವನ್ನು ಕೋರಿದೆ. 

ಈ ಅನುದಾನದಲ್ಲಿ ಹೆಬ್ಬಗೋಡಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದಕ್ಕಾಗಿ ಹೊಸೂರು ರಸ್ತೆಯ ನಿಲ್ದಾಣದ ಮತ್ತೊಂದು ಬದಿಯಿಂದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ನಿಲ್ದಾಣದ ಸುತ್ತಲಿನ 500 ಮೀ ಪ್ರದೇಶದಲ್ಲ ಪಾದಚಾರಿ ಮಾರ್ಗಗಳನ್ನು ಸಹ ಉನ್ನತೀಕರಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com