ಡಿಕೆಶಿ ಸಂಬಂಧಿಗಳ ವಿಚಾರಣೆಗೆ ದೆಹಲಿ ಹೈಕೋರ್ಟ್ ನಿಂದ ಇ.ಡಿ. ಗೆ ಅನುಮತಿ 

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿತರಾಗಿರುವ  ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಸಂಬಂಧಿಗಳು ಮತ್ತು ಸಹವರ್ತಿಗಳನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ನವದೆಹಲಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿತರಾಗಿರುವ  ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಸಂಬಂಧಿಗಳು ಮತ್ತು ಸಹವರ್ತಿಗಳನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.

ಕರ್ನಾಟಕದ ನಿವಾಸಿಗಳಾದ  ಈ ಅರ್ಜಿದಾರರನ್ನು ವಿಚಾರಣೆಗೆ ಸಹಕರಿಸಿದರೆ ಸಾಕು ಎಂದು ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಯೋಗೇಶ್ ಖನ್ನಾಪ್ರಕರಣದ ತನಿಖಾಧಿಕಾರಿಯನ್ನು (ಐಒ) ಅರ್ಜಿದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುವ ಸಮಯವನ್ನು  ಕೋರ್ಟ್ ನೊಂದಿಗೆ ಹಂಚಿಕೊಳ್ಳುವಂತೆ  ಕೇಳಿಕೊಂಡರು, ಇದರಿಂದ ವಿಚಾರಣೆಗೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ. ಈ ಹಂತದಲ್ಲಿ ಸಾಕ್ಷಿಗಳಾಗಿ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಹೊರಡಿಸಿದ ಸಮನ್ಸ್ ಅನ್ನು ಪ್ರಶ್ನಿಸಿ ಶಿವಕುಮಾರ್ ಅವರ ಸಂಬಂಧಿಕರು ಮತ್ತು ಸಹಚರರು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಇಂದು ನಡೆಸಿದೆ. 

ರಾಜೇಶ್ ಹೆಚ್, ಗಂಗಾಸರನ್, ಜಯಶೀಲಾ, ಚಂದ್ರ ಜಿ, ಕೆ ವಿ ಲಕ್ಷ್ಮಮ್ಮ, ಮೀನಾಕ್ಷಿ ಮತ್ತು ಹನುಮಂತಯ್ಯ ಜಿ. ಅವರುಗಳು ಅರ್ಜಿಸಲ್ಲಿಸಿದ್ದರು.ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಮೋಹಿತ್ ಮಾಥುರ್, ಸಿಆರ್‌ಪಿಸಿಯ ನಿಬಂಧನೆಗಳನ್ನು ಉಲ್ಲಂಘಿಸಿ ಸಮನ್ಸ್ ಜಾರಿಗೊಳಿಸಲಾಗಿದೆ ಮತ್ತು ಇವರು ಮುಖ್ಯ ಆರೋಪಿಗಳ ಸಂಬಂಧಿಗಳಾಗಿರುವುದರಿಂದ ಇದು ಪ್ರಕರಣವನ್ನು ತಿರುಚುವ ತಂತ್ರ ಎಂದು ವಾದಿಸಿದ್ದರು ಅಲ್ಲದೆ ವಿಚಾರಣೆಗೆ ಅರ್ಜಿದಾರರು ಸಹಕರಿಸುತ್ತಾರೆ ಎಂದು ಅವರು ಹೇಳಿದ್ದಾರೆ. 

ಇಡಿ ಪರ ವಕೀಲ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರ ಅಮಿತ್ ಮಹಾಜನ್, ಈ ಹಿಂದೆ ಅರ್ಜಿದಾರರಿಂದ ದಾಖಲೆಗಳನ್ನು ಪಡೆಯಲಾಗಿದೆ.ಆದರೆ ಕೆಲವು ದಾಖಲೆಗಳ ಸ್ಪಷ್ಟೀಕರಣದ ಅಗತ್ಯವಿರುವುದರಿಂದ ಈಗ ಅವರ ಉಪಸ್ಥಿತಿಯನ್ನು ಕೋರಲಾಗಿದೆ. ಮುಂದಿನ ವಿಚಾರಣೆಯ ದಿನಾಂಕವಾದ ನವೆಂಬರ್ 19ರೊಳಗೆ ಅರ್ಜಿದಾರರ ಹಾಜರಾತಿಗೆ ಏಜೆನ್ಸಿ ಒತ್ತಾಯಿಸುವುದಿಲ್ಲ ಎಂದು ಅವರು ಕೋರ್ಟ್ ಗೆ ಹೇಳಿದ್ದಾರೆ.

ಏಳು ಬಾರಿ ಶಾಸಕರಾಗಿರುವ ಶಿವಕುಮಾರ್ (58) ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 3 ರಂದು ಪಿಎಂಎಲ್‌ಎ ಪ್ರಕರಣದಡಿ  ಇಡಿ ಬಂಧಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು

ಶಿವಕುಮಾರ್, ನವದೆಹಲಿಯ ಕರ್ನಾಟಕ ಭವನದಲ್ಲಿ ಉದ್ಯೋಗದಲ್ಲಿರುವ ಹನುಮಂತಯ್ಯ ಮತ್ತಿತರರ ವಿರುದ್ಧ ಇಡಿ ಕಳೆದ ಸೆಪ್ಟೆಂಬರ್‌ನಲ್ಲಿ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿತ್ತು. ತೆರಿಗೆ ವಂಚನೆ ಮತ್ತು ಕೋಟಿ ಮೌಲ್ಯದ 'ಹವಾಲಾ' ವಹಿವಾಟು ಆರೋಪದ ಮೇಲೆ ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಚಾರ್ಜ್‌ಶೀಟ್ (ಪ್ರಾಸಿಕ್ಯೂಷನ್ ದೂರು) ಆಧರಿಸಿ ಈ ಪ್ರಕರಣವನ್ನು ರಚಿಸಲಾಗಿದೆ.  ಶಿವಕುಮಾರ್ ಮತ್ತು ಅವರ ಸಹವರ್ತಿ ಎಸ್ ಕೆ ಶರ್ಮಾ ಅವರು ಇತರ ಮೂವರು ಆರೋಪಿಗಳ ಸಹಾಯದಿಂದ 'ಹವಾಲಾ' ಚಾನೆಲ್‌ಗಳ ಮೂಲಕ ನಿಯಮಿತವಾಗಿ ಅಪಾರ ಪ್ರಮಾಣದ ಅಕ್ರಮ ದ ಹಣವನ್ನು ಒಳಗೊಂಡ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದು ಐ-ಟಿ ಇಲಾಖೆ ಆರೋಪಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com