ಸಿಎಂ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ: ಯಡಿಯೂರಪ್ಪ ರಾಜೀನಾಮೆ, ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ

ವಸತಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೆಲವು ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯ ಮೇಲೆ ಟೀಕಾ ಪ್ರಹಾರ ಮಾಡಿದ್ದಲ್ಲದೆ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಅಭಿಷೇಕ್ ಮನು ಸಿಂಘ್ವಿ
ಅಭಿಷೇಕ್ ಮನು ಸಿಂಘ್ವಿ

ನವದೆಹಲಿ: ವಸತಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೆಲವು ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯ ಮೇಲೆ ಟೀಕಾ ಪ್ರಹಾರ ಮಾಡಿದ್ದಲ್ಲದೆ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಕಳೆದ ತಿಂಗಳು ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯ ವಿರುದ್ಧ ಆರೋಪ ಮಾಡಿದ್ದ ವೇಳೆ ಮುಖ್ಯಮಂತ್ರಿ ಅದನ್ನು "ಆಧಾರರಹಿತ" ಎಂದು ತಳ್ಳಿ ಹಾಕಿದ್ದರು. ಅಲ್ಲದೆ ಆರೋಪಗಳನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ನಾಯಕನಿಗೆ ಸವಾಲು ಹಾಕಿದ್ದರು.

ದೆಹಲಿಯಲ್ಲಿ ಮಾತನಾಡಿದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ  ಕರ್ನಾಟಕದ ಬಿಜೆಪಿ ಸರ್ಕಾರವು "ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ" ಎಂದು ಆರೋಪಿಸಿದ್ದಾರೆ

"ಮುಖ್ಯಮಂತ್ರಿಗೆ ಸ್ವಲ್ಪವಾದರೂ ಮನುಷ್ಯತ್ವ, ಮರ್ಯಾದೆ ಇದ್ದರೆ ವರು ರಾಜೀನಾಮೆ ನೀಡಬೇಕು " ಎಂದು ಸಿಂಘ್ವಿ ಹೇಳಿದರು.

ಯಡಿಯೂರಪ್ಪನವರ  ಮಗ, ಅಳಿಯ ಮತ್ತು ಮೊಮ್ಮಗನ ವಿರುದ್ಧ ಭ್ರಷ್ಟಾಚಾರ ಮತ್ತು ಕಿಕ್‌ಬ್ಯಾಕ್ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ "ಮೌನ" ವನ್ನು ಅವರು ಪ್ರಶ್ನಿಸಿದ್ದಾರೆ. ಈ ವಿಷಯವು ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಯೋಜನೆಯ ನಿರ್ಮಾಣದ 662 ಕೋಟಿ ರೂ.ಗೆ ಸಂಬಂಧಿಸಿದೆ ಎಂದ ಸಿಂಘ್ವಿ ಮಾಧ್ಯಮ ವರದಿಗಳು "ಯೋಜನೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಲಂಚದ ಪ್ರಕರಣದಲ್ಲಿ ಸಿಎಂ ಅವರ ಮಗ,  ಸೊಸೆ ಮತ್ತು ಮೊಮ್ಮಗನಂತಹ ನಿಕಟ ಸಂಬಂಧಿಗಳ ನೇರ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸಿದೆ. ". "ಇದು ಇಡೀ ದೇಶದ ನಾಗರಿಕರ ಪ್ರಜ್ಞೆಗೆ  ಆಘಾತ ನೀಡಿದೆ. ಆದರೆ ಬಿಜೆಪಿಗೆ ಆತ್ಮಸಾಕ್ಷಿಯಿಲ್ಲ ಎಂದು ಕಾಣುತ್ತಿದೆ.ಯಡಿಯೂರಪ್ಪ ಅವರ ಆಪ್ತ ಸಂಬಂಧಿ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವಿನ ಉದ್ದೇಶಿತ ಸಂವಹನವನ್ನು ಉಲ್ಲೇಖಿಸಿ, ಗುತ್ತಿಗೆದಾರರೊಬ್ಬರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರಿಗೆ ಲಂಚವನ್ನು ನೀಡಿದ್ದಾರೆ ಎಂದು ಅವರು ಆರೋಪ್ಸಿದ್ದಾರೆ.

ಕೋಲ್ಕತ್ತಾದ ಶೆಲ್ ಕಂಪನಿಗಳ ಮೂಲಕ ಹೆಚ್ಚುವರಿ ಲಂಚವನ್ನು ಕೋರಲಾಗಿದೆ ಮತ್ತು ಪಾವತಿಸಲಾಗಿದೆ ಎಂದು  ಸಿಂಘ್ವಿ ಹೇಳೀದ್ದಾರೆ.  ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ನು ಜಾರಿಗೆ ತರಬೇಕು ಮತ್ತು ಆರೋಪಗಳನ್ನು ತನಿಖೆ ಮಾಡಬೇಕು ಎಂದು ಅವರು ಹೇಳಿದ್ದಾರೆ. "ಅತ್ಯಂತ ಗಮನಾರ್ಹವಾದ ಮತ್ತು ವಾಸ್ತವಿಕವಾಗಿ ಒಪ್ಪಿಕೊಂಡಿರುವ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಕ್ರಿಮಿನಲ್ ತನಿಖೆಯನ್ನು ಸಹ  ನಾವು ಒತ್ತಾಯಿಸಿದ್ದೇವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com