ಚಿತ್ರಮಂದಿರಗಳು ರೀ ಓಪನ್ ಗೆ ಸಜ್ಜಾಗುವುದರೊಂದಿಗೆ ಕಟೌಟ್ ಕಲಾವಿದರಲ್ಲಿ ಹೊಸ ಭರವಸೆ

ಸಿನಿಮಾ ಮಂದಿರಗಳ ಪುನರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರುವಂತೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಟೌಟ್ ಮತ್ತು ಪೋಸ್ಟರ್ ಕಲಾವಿದರಲ್ಲಿ ಹೊಸ ಭರವಸೆ ಮೂಡಿದೆ.
ಚಿತ್ರಮಂದಿರದ ಮುಂದಿನ ಕಟೌಟ್ ಗಳು
ಚಿತ್ರಮಂದಿರದ ಮುಂದಿನ ಕಟೌಟ್ ಗಳು

ಬೆಂಗಳೂರು: ಸಿನಿಮಾ ಮಂದಿರಗಳ ಪುನರ್ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರುವಂತೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಟೌಟ್ ಮತ್ತು ಪೋಸ್ಟರ್ ಕಲಾವಿದರಲ್ಲಿ ಹೊಸ ಭರವಸೆ ಮೂಡಿದೆ.

ಬೆಂಗಳೂರಿನಾದ್ಯಂತ ನೂರಾರು ಕಲಾವಿದರು ಕೆಲಸ ಮಾಡುತ್ತಿದ್ದಾರೆ.  ಸ್ಯಾಂಡಲ್ ವುಡ್  ಮುಖ್ಯ ಕಚೇರಿಯಿಂದ ಆದೇಶ ಬಂದರೆ ಮತ್ತೆ ತಿಂಗಳು ಗಟ್ಟೆ ಕೆಲಸವಿಲ್ಲದೆ ಹೊಟ್ಟೆ ಪಾಡಿಗಾಗಿ ಬೇರೆ ಕೆಲಸ ಮಾಡುತ್ತಿದ್ದ ಕಲಾವಿದರು ಮತ್ತೆ ಕೈಯಲ್ಲಿ ಬ್ರಶ್ ಹಿಡಿಯಲು ಸಿದ್ಧರಾಗಿದ್ದಾರೆ. 

ದರ್ಶನ್ ಅಭಿನಯದ ರಾಬರ್ಟ್ ಚಿತ್ರದ 55 ಕಟೌಟ್ ಪೂರ್ಣಗೊಳಿಸಲು ನಟರಾಜ್ ಥಿಯೇಟರ್ ಬಳಿ ಇರುವ ಆನಂದ್ ಆರ್ಟ್ಸ್ ಮಾಲೀಕ ಡಾ. ಆನಂದ್ ಕುಮಾರ್ ಎದುರು ನೋಡುತ್ತಿದ್ದಾರೆ. ಚಿತ್ರಮಂದಿರಗಳು ಪ್ರಾರಂಭವಾದರೆ ಕೆಲಸ ಪಡೆಯಬಹುದು ಎಂದು ಆನಂದ್ ಹೇಳುತ್ತಾರೆ.

ಲಾಕ್ ಡೌನ್ ಕಾರಣದಿಂದಾಗಿ ಯಾವುದೇ ಆರ್ಡರ್ ಬರುತ್ತಿರಲಿಲ್ಲ. ಆದ್ದರಿಂದ ಅನೇಕ ಕಲಾವಿದರು, ಕಟ್ಟಡ, ಬಣ್ಣ ಬಳಿಯುವುದು, ಗಾರ್ಮೆಂಟ್ಸ್ ಅಂಗಡಿಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಚಿತ್ರ ಮಂದಿರ ಮತ್ತೆ ಆರಂಭವಾಗುತ್ತಿರುವುದರಿಂದ ಮತ್ತೆ ಭರವಸೆ ಬಂದಿರುವುದಾಗಿ ಮತ್ತೊಬ್ಬ ಕಲಾವಿದ ಸತ್ಯನಾರಾಯಣ ಹೇಳಿದರು.

ಸೂಪರ್ ಸ್ಟಾರ್ ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ಕಾಲದಲ್ಲಿ ಕಲಾವಿದರಿಗೆ ತುಂಬಾ ಬೇಡಿಕೆ ಇದಿದ್ದಾಗಿ ಮತ್ತೋವ್ರ ಕಲಾವಿದ ಶ್ಯಾಮ್ ನೆನಪಿಕೊಳ್ಳುತ್ತಾರೆ. ದಿನಕ್ಕೆ ಒಂದು ಕಟೌಟ್ ಗೆ ಆರ್ಡರ್ ಬರುತ್ತದೆ.  ಅದಕ್ಕೆ ವಾರಗಟ್ಟಲೇ ಕೆಲಸ ಮಾಡುತ್ತೇವೆ. ಒಂದು ಬ್ಯಾನರ್ ಗೆ 50 ಸಾವಿರ ರೂ. ಸಂಪಾದಿಸುತ್ತೇವೆ. ಆದರೆ, ನಮ್ಮ ಬಗ್ಗೆ ಧ್ವನಿ ಎತ್ತಲು ಯಾವುದೇ ಸಂಘಟನೆ ಇಲ್ಲ ಎನ್ನುತ್ತಾರೆ ಶ್ಯಾಮ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com