ದಾವಣಗೆರೆ: ಇಬ್ಬರು ಮಕ್ಕಳೊಡನೆ ಕಾಲುವೆಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ಶಿಕ್ಷಕಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

Published: 13th October 2020 01:01 PM  |   Last Updated: 13th October 2020 01:05 PM   |  A+A-


Posted By : Raghavendra Adiga
Source : Online Desk

ದಾವಣಗೆರ: ಶಿಕ್ಷಕಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮೃತರನ್ನು  ಶ್ರೀದೇವಿ (38), ಅನುಷಾ (10) ಮತ್ತು ನೂತನ್ (8) ಎಂದು ಗುರುತಿಸಲಾಗಿದೆ   ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವೆಂದು  ಪೊಲೀಸರು ಶಂಕಿಸಿದ್ದಾರೆ.

ಮೃತ ತಾಯಿ ಶ್ರೀದೇವಿ ದಾವಂಗೆರೆ ಪಟ್ಟಣದ ಜಯನಗರ ನಿವಾಸಿಯಾಗಿದ್ದು ವರು ನಗರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು,

ಮನೆ ಕಟ್ಟುವ ವಿಚಾರದಲ್ಲಿ ಪತಿ-ಪತ್ನಿಯ ನಡುವೆ ವಿವಾದವಿತ್ತೆನ್ನಲಾಗಿದ್ದು ಸೋಮವಾರ ರಾತ್ರಿ ಇದೇ ವಿಚಾರ ಗೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಇದರಿಂದ ನಿರಾಶರಾದ ಶ್ರೀದೇವಿ ಆತ್ಮಹತ್ಯೆಯಂತಹಾ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು  ಮೂಲವೊಂದು ತಿಳಿಸಿದೆ. ಅವರನ್ನು ರಕ್ಷಿಸಲು ನೆರೆಹೊರೆಯವರು ಸ್ಥಳಕ್ಕೆ ತಲುಪುವ ಹೊತ್ತಿಗೆ ಮೂವರೂ ಮುಳುಗಿ ಸಾವನ್ನಪ್ಪಿದ್ದರೆಂದು ಪೊಲೀಸರು ತಿಳಿಸಿದ್ದಾರೆ. 

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp