ಆನ್'ಲೈನ್'ನಲ್ಲೇ ವಾಣಿಜ್ಯ ಪರವಾನಗಿ ನವೀಕರಣಕ್ಕೆ ಬಿಬಿಎಂಪಿ ಅವಕಾಶ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರು ಇನ್ನು ಮುಂದೆ ವಾಣಿಜ್ಯ ಪರವಾನಗಿ ನವೀಕರಣವನ್ನು ಆನ್'ಲೈನ್ ಮೂಲಕವೇ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. 

Published: 13th October 2020 09:14 AM  |   Last Updated: 13th October 2020 09:14 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರು ಇನ್ನು ಮುಂದೆ ವಾಣಿಜ್ಯ ಪರವಾನಗಿ ನವೀಕರಣವನ್ನು ಆನ್'ಲೈನ್ ಮೂಲಕವೇ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. 

ಕೊರೋನಾ ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ವ್ಯಕ್ತಿಗಳ ಮುಖಾಮುಖಿ ಸಂಪರ್ಕ ತಪ್ಪಿಸುವ ಉಧ್ದೇಶದಿಂದ ಆನ್'ಲೈನ್ ಬಳಕೆ ಹೆಚ್ಚಿಸುವ ಹಾಗೂ ಆನ್'ಲೈನ್'ನ ಮೂಲಕವೇ ಪರವಾನಗಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ರಾಜಿಯ ಸರ್ಕಾರ ಇತ್ತೀಚೆಗೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ ಈಸ್ ಆಫ್ ಡೂಯಿಂಗ್'ನ ಭಾಗವಾಗಿ ವಾಣಿಜ್ಯ ಉದ್ದಿಮೆಗಳ ಪರವಾನಗಿ ನವೀಕರಣಕ್ಕೆ ಹೊಸದಾಗಿ ಅರ್ಜಿ ಸಲ್ಲಿಸದೆ ಈಗಾಗಲೇ ಇರುವ ಅರ್ಜಿಯ ಮೂಲಕ ಹಾಗೂ ಶುಲ್ಕ ಮಾತ್ರ ಪಾವತಿ ಮಾಡುವ ಮೂಲಕ ಪರವಾನಗಿ ನವೀಕರಣ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp