ಜಿಎಸ್‌ಟಿ ನಷ್ಟ: 9,018 ಕೋಟಿ ರೂ. ಸಾಲ ಪಡೆಯಲು ಕರ್ನಾಟಕಕ್ಕೆ ಕೇಂದ್ರ ಅನುಮತಿ

ಕೊರೋನಾ ಕಾರಣದಿಂದಾದ ಜಿಎಸ್‌ಟಿ ಪರಿಹಾರ ನಷ್ಟವನ್ನು ಸರಿದೂಗಿಸಲು ಕರ್ನಾಟಕಕ್ಕೆ 9,018 ಕೋಟಿ ರೂ.ಗಳ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.  ಜಿಎಸ್‌ಟಿ ಕೌನ್ಸಿಲ್ ಒದಗಿಸಿದ ಆಯ್ಕೆ 1 ರ ಅಡಿಯಲ್ಲಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಜಿಎಸ್‌ಟಿ ನಷ್ಟ: 9,018 ಕೋಟಿ ರೂ. ಸಾಲ ಪಡೆಯಲು ಕರ್ನಾಟಕಕ್ಕೆ ಕೇಂದ್ರ ಅನುಮತಿ

ಬೆಂಗಳೂರು: ಕೊರೋನಾ ಕಾರಣದಿಂದಾದ ಜಿಎಸ್‌ಟಿ ಪರಿಹಾರ ನಷ್ಟವನ್ನು ಸರಿದೂಗಿಸಲು ಕರ್ನಾಟಕಕ್ಕೆ 9,018 ಕೋಟಿ ರೂ.ಗಳ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.  ಜಿಎಸ್‌ಟಿ ಕೌನ್ಸಿಲ್ ಒದಗಿಸಿದ ಆಯ್ಕೆ 1 ರ ಅಡಿಯಲ್ಲಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಮಂಗಳವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ರಾಜ್ಯದ ಪ್ರತಿನಿಧಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪರಿಹಾರ ಮತ್ತು ಯೋಜನೆಗಳೇತರ ವೆಚ್ಚಗಳೆರಡರಲ್ಲೂ ಹೂಡಿಕೆ ಮಾಡಲು ರಾಜ್ಯಕ್ಕೆ ಕಷ್ಟವಾಗಿರುವುದರಿಂದ ದ ಪರಿಹಾರದ ತಕ್ಷಣದ ಅಗತ್ಯವನ್ನು ಒತ್ತಿ ಹೇಳೀದ್ದಾರೆ. ಇದಾದ ಒಂದು ದಿನದಲ್ಲೇ ಕೇಂದ್ರವು ರಾಜ್ಯಕ್ಕೆ ಸಾಲ ಪಡೆಯಲು ಅನುಮತಿ ಕೊಟ್ಟಿದೆ.

"ಅಂದಾಜು ಬೆಳವಣಿಗೆಯನ್ನು ಶೇಕಡಾ 10 ರಿಂದ 7 ಕ್ಕೆ ಇಳಿಸುವ ಮೂಲಕ ಭಾರತ ಸರ್ಕಾರ ತನ್ನ ಬದ್ಧತೆಯನ್ನು ತೋರಿಸಿದೆ, ರಾಜ್ಯ ಸರ್ಕಾರಕ್ಕೆ 1,000 ಕೋಟಿ ರೂ.ಗಳ ಹೆಚ್ಚುವರಿ ಸಾಲ ಸೌಲಭ್ಯ-11,432 ಕೋಟಿಯಿಂದ 12,400 ಕೋಟಿ ರೂ.ಗೆ  ಹೆಚ್ಚಿಸಿದೆ" ಎಂದು ಬೊಮ್ಮಾಯಿ ಹೇಳಿದರು

ಸಂವಿಧಾನದ ವಿಧಿ 279 (4) (ಎಚ್) ರ ನಿಬಂಧನೆಗಳ ಪ್ರಕಾರ ರಾಜ್ಯಗಳಿಗೆ ಸಾಲ ಪಡೆಯಲು ಅನುಮತಿ ನೀಡುವಂತೆ ಕೌನ್ಸಿಲ್ ಕೇಂದ್ರಕ್ಕೆ ಶಿಫಾರಸು ಮಾಡಬಹುದೆಂದು ಕರ್ನಾಟಕ ಸೂಚಿಸಿತ್ತು. ಹೆಚ್ಚುವರಿ ಸಾಲವು ರಾಜ್ಯಕ್ಕೆ ಹೊರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಬೊಮ್ಮಾಯಿ “ಯಾರು ಸಾಲ ಪಡೆಯುತ್ತಾರೆ ಎನ್ನುವುದಕ್ಕಿಂತ ಯಾರು ಮರುಪಾವತಿ ಮಾಡುತ್ತಾರೆನ್ನುವುದು ಮುಖ್ಯ . ಈ ಆಯ್ಕೆಯ ಅಡಿಯಲ್ಲಿ, ನಿಧಿಯಲ್ಲಿ ಸಂಗ್ರಹಿಸಿದ ಸೆಸ್‌ನಿಂದ ಅಸಲು ಮತ್ತು ಬಡ್ಡಿ ಎರಡನ್ನೂ ಮರುಪಾವತಿ ಮಾಡಲಾಗುತ್ತದೆ ಮತ್ತು ರಾಜ್ಯದ ಮೇಲೆ ಯಾವುದೇ ಹೊರೆ ಇರುವುದಿಲ್ಲ. ”

ಸುಪ್ರೀಂಗೆ ಕೇರಳ ಮೊರೆ

ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಮಂಗಳವಾರ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಗೆ ತೆರಳಲಿದೆ ಎಂದರು, ಈ ಮುನ್ನ  ಒಂಬತ್ತು ರಾಜ್ಯಗಳು ಕೇಂದ್ರದ ಅವಳಿ ಸಾಲದ ಆಯ್ಕೆಗಳನ್ನು ವಿರೋಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com