ನೇಮಕಾತಿ ಆದೇಶಕ್ಕೆ ಆಗ್ರಹಿಸಿ ಪಿಯು ಉಪನ್ಯಾಸಕರಿಂದ ಧರಣಿ

ಸರ್ಕಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ವರ್ಷ ಕಳೆದರೂ ನೇಮಕಾತಿ ಆದೇಶ ನೀಡದ ಸರ್ಕಾದ ವಿಳಂಬ ನೀತಿ ಖಂಡಿಸಿ ನೂರಾರು ಭಾವಿ ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಮಂಡಳಿ ಮುಂಭಾಗ ಆರಂಭಿಸಿದ್ದ ಆಹೋ ರಾತ್ರಿ ಧರಣಿಯನ್ನು 2ನೇ ದಿನವಾದ ಮಂಗಳವಾರವೂ ಮುಂದುವರೆಸಿದ್ದಾರೆ. 
ಪ್ರತಿಭಟನಾನಿರತ ಉಪನ್ಯಾಸಕರನ್ನು ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ
ಪ್ರತಿಭಟನಾನಿರತ ಉಪನ್ಯಾಸಕರನ್ನು ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸರ್ಕಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ವರ್ಷ ಕಳೆದರೂ ನೇಮಕಾತಿ ಆದೇಶ ನೀಡದ ಸರ್ಕಾದ ವಿಳಂಬ ನೀತಿ ಖಂಡಿಸಿ ನೂರಾರು ಭಾವಿ ಉಪನ್ಯಾಸಕರು ಪದವಿ ಪೂರ್ವ ಶಿಕ್ಷಣ ಮಂಡಳಿ ಮುಂಭಾಗ ಆರಂಭಿಸಿದ್ದ ಆಹೋ ರಾತ್ರಿ ಧರಣಿಯನ್ನು 2ನೇ ದಿನವಾದ ಮಂಗಳವಾರವೂ ಮುಂದುವರೆಸಿದ್ದಾರೆ. 

ಈ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸುರೇಶ್ ಕುಮಾರ್ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜು ಸ್ಥಗಿತವಾಗಿವೆ. ಪುನಾರಾರಂಭವಾದ ಕೂಡಲೇ ನೇಮಕಾದಿ ಆದೇಶ ಮಾಡಲಾಗುವುದು. ಆಯ್ಕೆ ಪಟ್ಟಿ ರದ್ದಿನ ಆಂತಕ ಬೇಡ. ಆಯ್ಕೆಯಾಗಿರುವ ಯಾರೊಬ್ಬರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ, ಈ ಭರವಸೆಗೂ ಮಣಿಯದ ಉಪನ್ಯಾಸಕರು ನೇಮಕಾತಿಆದೇಶ ನೀಡದ ಹೊರತು ಧರಣಿ ಹಂಪಡೆಯುವುದಿಲ್ಲ ಎಂದು ಪಟ್ಟುಹಿಡಿದು ಧರಣಿ ಮುಂದುವರೆಸಿದ್ದಾರೆ. 

ಸೋಮವಾರ ತಡರಾತ್ರಿಯಿಂದಲೇ ದಿಢೀರ್ ಧರಣಿ ಆರಂಭಿಸಿರುವ ಭಾವಿ ಉಪನ್ಯಾಸಕರು ಸರ್ಕಾರ ಅಧಿಕೃತವಾಗಿ ನೇಮಕಾತಿ ಆದೇಶ ಆಗದಿದ್ದರೆ ಆಯ್ಕೆ ಪಟ್ಟಿ ರದ್ದಾಗುವ ಆತಂಕವಿದೆ. ಬೇಕಿದ್ದರೆ ಸರ್ಕಾರ ಕಾಲೇಜುಗಳು ಆರಂಭವಾದ ದಿನದಿಂದ ಕರ್ತವ್ಯಕ್ಕೆ ಹಾಜರಾಬೇಕೆಂಬ ಷರತ್ತು ವಿಧಿಸಿ ನಮ್ಮೆಲ್ಲರಿಗೂ ನೇಮಕಾತಿ ಆದೇಶ ನೀಡಲಿ ಎಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com